ನವದೆಹಲಿ:ಜೂ-26: ಪ್ರಧಾನಿ ನರೇಂದ್ರ ಮೋದಿಗೆ ಉಗ್ರ ಸಂಘಟನೆಗಳು ಹಾಗೂ ಮಾವೋವಾದಿಗಳಿಂದ ಜೀವ ಬೆದರಿಕೆ ಇರುವುದರಿಂದ ಪ್ರಧಾನಿ ಭದ್ರತಾ ನಿಯಮಗಳಲ್ಲಿ ಕೇಂದ್ರ ಗೃಹಸಚಿವಾಲಯ ಭಾರೀ ಭದ್ರತೆಯನ್ನು ಕೈಗೊಂಡಿದ್ದು, ಕೆಲವು ಬದಲಾವಣೆಗಳನ್ನು ಮಾಡಿದೆ.
ಗೃಹ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವಬೆದರಿಕೆ ಇರುವುದು ಸತ್ಯ. ಈ ಕಾರಣಕ್ಕೆ ಅವರಿಗೆ ವಿಶೇಷ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದೆ. ಭದ್ರತಾ ದೃಷ್ಟಿಯಿಂದ ಹೊಸ ನಿಯಮವೊಂದನ್ನು ಜಾರಿಮಾಡಲಾಗಿದ್ದು, ಈ ನಿಯಮದ ಪ್ರಕಾರ ಪ್ರಧಾನಿಯವರ ಸಮೀಪ ಸಾಮಾನ್ಯರು ಯಾರೂ ಬರುವಂತಿಲ್ಲ. ಅಷ್ಟೇ ಅಲ್ಲ ಸಚಿವರು, ಅಧಿಕಾರಿಗಳು ಕೂಡ ಮೋದಿಯವರ ವಿಶೇಷ ರಕ್ಷಣಾ ತಂಡ ತಪಾಸಣೆ ನಡೆಸಿ ಒಪ್ಪಿಗೆ ನೀಡಿದ ನಂತರವೇ ಅವರನ್ನು ಭೇಟಿ ಮಾಡಬೇಕು ಎಂದು ತಿಳಿಸಿದೆ.
ಅಂತೆಯೇ ಈ ಬಗ್ಗೆ ಎಲ್ಲ ರಾಜ್ಯ ಸರ್ಕಾರಗಳಿಗೂ ಎಚ್ಚರಿಕೆ ನೀಡಲಾಗಿದ್ದು, ಪ್ರಧಾನಿ ಮೋದಿ ಪಾಲ್ಗೊಳ್ಳುವ ಯಾವುದೇ ಕಾರ್ಯಕ್ರಮಕ್ಕೆ ಭಾರಿ ಭದ್ರತೆ ಒದಗಿಸುವಂತೆ ಸೂಚನೆ ನೀಡಿದೆ ಎಂದು
ಈಗಾಗಲೇ ಎಲ್ಲ ರಾಜ್ಯಗಳಿಗೂ ಲಿಖಿತವಾಗಿ ಸಂದೇಶ ಕಳಿಸಲಾಗಿದ್ದು, ಯಾರೇ ಆಗಿರಲಿ ಪ್ರಧಾನಿ ನಿಕಟ ಸಂಪರ್ಕಕ್ಕೆ ಹೋಗುವಂತಿಲ್ಲ. ಈ ಆದೇಶ ಪಾಲನೆಯಾಗಲೇ ಬೇಕು ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ. ಹಾಗೆಯೇ ಮೋದಿಯವರಿಗೂ ರೋಡ್ ಶೋ ನಡೆಸದೆ ಇರಲು ಸಲಹೆ ನೀಡಲಾಗಿದೆ.
ಮುಂಬರುವ ದಿನಗಳಲ್ಲಿ ಮೋದಿಯವರು ಛತ್ತೀಸ್ಗಡ್, ಜಾರ್ಖಂಡ್, ಮಧ್ಯಪ್ರದೇಶ, ಓಡಿಶಾ, ಪಶ್ಚಿಮಬಂಗಾಳ, ಪಂಜಾಬ್ ವಿಧಾನಸಭಾ ಚುನಾವಣಾ ನಿಮಿತ್ತ ಪ್ರಧಾನಿ ಮೋದಿ ಪ್ರವಾಸ ಮಾಡಲಿದ್ದು ಇದಕ್ಕಾಗಿ ಬಿಗಿಭದ್ರತೆ ನೀಡಲು ಸಿದ್ಧತೆ ನಡೆಸಲಾಗಿದೆ.
PM Modi, Death Threat, Security, Home ministry