ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧ: 15 ಸಾವಿರ ಕೋಟಿ ರೂ. ನಷ್ಟ; 3 ಲಕ್ಷ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿ

ಮುಂಬೈ:ಜೂ-26: ಮಹಾರಾಷ್ಟ್ರದಲ್ಲಿ ಮರು ಸಂಸ್ಕರಣೆ ಸಾಧ್ಯವಾಗದ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌, ಥರ್ಮೊಕೋಲ್‌ ಬಳಕೆ ಹಾಗೂ ಮಾರಾಟ ನಿಷೇಧದಿಂದ ಪ್ಲಾಸಿಕ್‌ ಉತ್ಪಾದಕ ಕಂಪನಿಗಳು 15 ಸಾವಿರ ಕೋಟಿ ರೂ. ನಷ್ಟ ಅನುಭವಿಸಲಿವೆ. ಅಲ್ಲದೇ ಸುಮಾರು 3 ಲಕ್ಷ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ.

ಮಹಾರಾಷ್ಟ್ರದಲ್ಲಿ ಕಳೆದ ಶನಿವಾರದಿಂದ ಈ ನಿಷೇಧ ಕಾನೂನು ಜಾರಿಗೆ ಬಂದಿದ್ದು, ಇದರಿಂದ ಪ್ಲಾಸ್ಟಿಕ್‌ ಉದ್ಯಮಕ್ಕೆ ದೊಡ್ಡ ಹೊಡೆತಬಿದ್ದಿದೆ. ರಾಜ್ಯದ ಜಿಡಿಪಿ ಮೇಲೂ ಇದು ಪರಿಣಾಮ ಬೀರಲಿದೆ. 15 ಸಾವಿರ ಕೋಟಿ ರೂ. ನಷ್ಟವಾಗಲಿದ್ದು, 3 ಲಕ್ಷ ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಈಗಾಗಲೇ 2500 ಉತ್ಪಾದಕರು ಒಕ್ಕೂಟದ ಸದಸ್ಯತ್ವದಿಂದ ದೂರ ಸರಿದಿದ್ದಾರೆ ಎಂದು ಭಾರತೀಯ ಪ್ಲಾಸ್ಟಿಕ್‌ ಬ್ಯಾಗ್‌ ಉತ್ಪಾದಕರ ಒಕ್ಕೂಟದ ಪ್ರಧಾನ ಕಾರ‍್ಯದರ್ಶಿ ನೀಮಿತ್‌ ಪುನಾಮಿಯಾ ಹೇಳಿದ್ದಾರೆ.

ಈ ನಿಷೇಧವು ಏಕಪಕ್ಷೀಯವಾಗಿದೆ ಎಂದೂ ಅವರು ದೂರಿದ್ದಾರೆ. ನಿಷೇಧದ ಬೆನ್ನಲ್ಲೇ ಮಹಾರಾಷ್ಟ್ರ ಸರಕಾರವು ಪ್ಲಾಸ್ಟಿಕ್‌ ಕವರ್‌ ಮತ್ತು ಇತರೆ ವಸ್ತುಗಳ ಮಾರಾಟಗಾರರಿಗೆ ದಾಸ್ತಾನು ಖಾಲಿ ಮಾಡಲು ಮೂರು ತಿಂಗಳ ಗಡುವು ವಿಧಿಸಿತ್ತು.
Maharashtra, plastic ban,cost 3 lakh jobs, loss of Rs 15,000 crore

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ