ಜೂನ್ 28ಕ್ಕೆ ’ದಿ ವಿಲನ್’ ಟೀಸರ್ ಬಿಡುಗಡೆ

ಬೆಂಗಳೂರು:ಜೂ-23: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಅಭಿನಯದ ಬಹುನಿರೀಕ್ಷಿತ ದಿ ವಿಲ್ಲನ್ ಸಿನಿಮಾ ಟೀಸರ್ ಜೂನ್ 28ಕ್ಕೆ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ನಿರ್ದೇಶಕ ಪ್ರೇಮ್ 2 ಟೀಸರ್ ರಿಲೀಸ್ ಮಾಡುತ್ತಿದ್ದು, ಶಿವರಾಜ್ ಕುಮಾರ್ ಮತ್ತು ಸುದೀಪ್ ಅವರ ಪ್ರತ್ಯೇಕ ಟೀಸರ್ ಅನ್ನು ಮುಖ್ಯಮಂತ್ರಿ ಕುಮಾರ ಸ್ವಾಮಿ ಜಿ,ಟಿ ಮಾಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಟೀಸರ್ ರಿಲೀಸ್ ಗೆ ಪ್ರವೇಶ ದರ ನಿಗದಿ ಮಾಡಲಾಗಿರುವುದು ವಿಶೇಷ. ಟೀಸರ್ ನೋಡಲು ಬರುವವರು 500 ರು ಪ್ರವೇಶ ಶುಲ್ಕ ಪಾವತಿಸಬೇಕು ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ.

ಟೀಸರ್ ಗೆ ಪ್ರವೇಶ ಶುಲ್ಕ ನಿಗದಿ ಮಾಡಿರುವುದಕ್ಕೆ ಕಾರಣವಿದೆ, ಇದು ಸಾಮಾಜಿಕ ಉದ್ದೇಶಕ್ಕಾಗಿ. ಈ ಹಣದಿಂದ ಚಿತ್ರರಂಗದಲ್ಲಿ ಹಣಾಕಾಸಿನ ಸಮಸ್ಯೆ ಎದುರಿಸುತ್ತಿದ್ದು ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ನಿರ್ದೇಶಕರ ಕುಟುಂಬಕ್ಕೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ವಿಲ್ಲನ್ ಸಿನಿಮಾದಲ್ಲಿ ಆಮಿ ಜಾಕ್ಸನ್ ಹಾಗೂ ಮಿಥುನ್ ಚಕ್ರವರ್ತಿ ತೆಲುಗು ನಟ ಶ್ರೀಕಾಂತ್ ಮುಂತಾದವರು ನಟಿಸಿದ್ದಾರೆ.

The Villain,teaser release, on June 28

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ