ದಸರಾಗೆ ಬೆಳ್ಳಿಪರದೆ ಮೇಲೆ ‘ದಿ ವಿಲನ್’ ಶಿವಣ್ಣ-ಕಿಚ್ಚ ಸುದೀಪ್ ಅಬ್ಬರ!

ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ದಿ ವಿಲನ್ ಚಿತ್ರದ ಬಿಡುಗಡೆ ದಿನಾಂಕ ಹೊರಬಿದ್ದಿದ್ದು ಮುಂದಿನ ತಿಂಗಳು ಆಯುಧ ಪೂಜೆ ದಿನದಂದು ಇಡೀ ರಾಜ್ಯ ಹಾಗೂ ವಿದೇಶದಲ್ಲೂ ದಿ ವಿಲನ್ ಅಬ್ಬರ ಶುರುವಾಗಲಿದೆ.
ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ಕನ್ನಡ ಸೇರಿದಂತೆ ತೆಲುಗು ಹಾಗೂ ತಮಿಳು ಭಾಷೆಯಲ್ಲೂ ಅಕ್ಟೋಬರ್ 18ರಂದು ಏಕಕಾಲಕ್ಕೆ ತೆರೆ ಕಾಣುತ್ತಿದೆ.
ಅಕ್ಟೋಬರ್ 2ರಿಂದ ಅಡ್ವಾನ್ಸ್ ಬುಕ್ಕಿಂಗ್ ಆರಂಭ
ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಜೋಡಿ ಇದೇ ಮೊದಲ ಬಾರಿಗೆ ತೆರೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದು ಇದು ಅಭಿಮಾನಿಗಳಲ್ಲಿ ತೀವ್ರ ಕುತೂಲಹ ಕೆರಳಿಸಿದೆ. ಇದರಿಂದಾಗಿ ಚಿತ್ರ ಬಿಡುಗಡೆಗೂ ಮುನ್ನ ರಾಜ್ಯದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಗೆ ಚಿತ್ರ ತಂಡ ಮುಂದಾಗಿದೆ. ಅಕ್ಟೋಬರ್ 2 ಗಾಂಧಿ ಜಯಂತಿಯಿಂದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಲಿದೆ.
ದಿ ವಿಲನ್ ವಿತರಣೆ ಹಕ್ಕಿಗೂ ಭಾರೀ ಬೇಡಿಕೆ
ಒಟ್ಟಿನಲ್ಲಿ ದಿ ವಿಲನ್ ಚಿತ್ರ ಬಿಡುಗಡೆಗೂ ಮುನ್ನ ಭಾರೀ ಕ್ರೇಜ್ ಹುಟ್ಟುಹಾಕಿದ್ದು ಚಿತ್ರದ ವಿತರಣೆ ಹಕ್ಕಿಗೂ ಭಾರೀ ಬೇಡಿಕೆ ಬಂದಿದೆ. ಸದ್ಯ ಬೆಂಗಳೂರು, ಕೋಲಾರ ಮತ್ತು ತುಮಕೂರು, ಮೈಸೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ವಿತರಣೆ ಹಕ್ಕು ಭಾರೀ ಮೊತ್ತಕ್ಕೆ ಸೇಲ್ ಆಗಿದೆ. ಇನ್ನುಳಿಂದ ಜಿಲ್ಲೆಗಳ ವಿತರಣೆ ಹಕ್ಕಿನ ಕುರಿತಂತೆ ಮಾತುಕತೆಗಳು ನಡೆದಿವೆ.
ಭಾರೀ ಬಜೆಟ್ ನ ದಿ ವಿಲನ್ ಚಿತ್ರ ತನ್ವಿ ಪ್ರೋಡೆಕ್ಷನ್ ಅಡಿಯಲ್ಲಿ ಸಿಆರ್ ಮನೋಹರ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ನಟಿ ಆ್ಯಮಿ ಜಾಕ್ಸನ್, ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದು ಹಾಡುಗಳು ಹಿಟ್ ಆಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ