ಅಕ್ಟೋಬರ್ 18 ರಂದು ದಿ ವಿಲನ್ ರಿಲೀಸ್: ಅಭಿಮಾನಿಗಳಿಗೆ ಶಿವಣ್ಣನ ಮನವಿ ಏನು?

ಬೆಂಗಳೂರು: ಬಹು ನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ದಿ ವಿಲನ್ ಅಕ್ಟೋಬರ್ 18 ರಂದು ರಿಲೀಸ್ ಆಗಲಿದೆ, ಸಿನಿಮಾ ಬಿಡುಗಡೆ ವೇಳೆ  ಥಿಯೇಟರ್ ಗಳಲ್ಲಿ ಯಾವುದೇ ರೀತಿಯ ಗೊಂದಲ, ಘರ್ಷಣೆ, ಜಗಳ ಮಾಡಬಾರದೆಂದು ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ,
ವಿಲನ್ ಟೀಸರ್ ನೋಡಿ ಕೆಲವು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸಿನಿಮಾ ರಿಲೀಸ್ ವೇಳೆ ಯಾವುದೇ ರೀತಿಯ ಘರ್ಷಣೆ ಜಗಳ ನಡೆಯಬಾರದೆಂಬ ದೃಷ್ಟಿಯಿಂದ ಮನವಿ ಮಾಡಿರುವ ಶಿವಣ್ಣ ಯಾವುದೇ ರೀತಿಯ ನ್ಯೂಸೆನ್ಸ್ ಸೃಷ್ಟಿಸಿದರೆ ಥಿಯೇಟರ್ ಕಡೆಗೆ ಹೆಜ್ಜೆ ಇಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿನಿಮಾದಲ್ಲಿ ಸಾಕಷ್ಟು ಪ್ರಚೋದನಾತ್ಮಕ ದೃಶ್ಯವಿದ್ದು. ಸಿನಿಮಾದ ಪಾತ್ರ ನಾಯಕನ ಗುಣ ನಿರ್ಧರಿಸುವುದಿಲ್ಲ, ಹೀಗಾಗಿ ಅಭಿಮಾನಿಗಳು ಸಿನಿಮಾವನ್ನು ಮನರಂಜನೆ ದೃಷ್ಟಿಯಿಂದ ಮಾತ್ರ ನೋಡಬೇಕು ಎಂದು ಶಿವರಾಜ್ ಕುಮಾರ್ ಮನವಿ ಮಾಡಿದ್ದಾರೆ.

ಸಿನಿಮಾಗೆ 35 ಕೋಟಿ ಹಣ ಖರ್ಚು ಮಾಡಲಾಗಿದೆ.  ರ್ದೇಶಕ ಪ್ರೇಮ್ ಇಬ್ಬರ ಪಾತ್ರಕ್ಕೂ ಒಂದೇ ರೀತಿಯ ಮಹತ್ವ ನೀಡಿದ್ದಾರೆ. ಟೀಸರ್ ನಲ್ಲಿ ಶಿವಣ್ಣ ಅವರನ್ನು ಸೈಡ್ ಲೈನ್ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಈ ಸಂದೇಶ ನೀಡಿದ್ದಾರೆ. ಅಕ್ಟೋಬರ್ 18ರಂದು ಸಿನಿಮಾ ರಿಲೀಸ್ ಆಗಲಿದ್ದು, ಅಕ್ಟೋಬರ್ 11 ರಿಂದಲೇ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ