ನಮ್ಮ ಸಾಮರ್ಥ್ಯ ಓರೆಗೆ ಹಚ್ಚಲು ಕಠಿಣ ಟೆಸ್ಟ್ ಪಂದ್ಯಗಳ ಎದುರು ನೋಡುತ್ತಿದ್ದೇವೆ: ವಿರಾಟ್ ಕೊಹ್ಲಿ

ಲಂಡನ್: ನಮ್ಮ ತಂಡಗದ ಸಾಮರ್ಥ್ಯವನ್ನು ಅರಿಯಲು ಕಠಿಣ ಇಂಗ್ಲೆಂಡ್ ಪ್ರವಾಸದಲ್ಲಿ ಕಠಿಣ ಟೆಸ್ಟ್ ಪಂದ್ಯಗಳನ್ನು ಎದುರು ನೋಡುತ್ತಿದ್ದೇವೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ನಿಮಿತ್ತ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಆಟಗಾರರ ತಂಡ ಇಂಗ್ಲೆಂಡ್ ಗೆ ತೆರಳಿದ್ದು, ಇಂಗ್ಲೆಂಡ್ ತಲುಪಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ, ಬಲಿಷ್ಠ ತಂಡಗಳ ವಿರುದ್ಧ ಸೆಣಸುವುದು ನಮಗೆ ಇಷ್ಟ. ನಮ್ಮ ಸಾಮರ್ಥ್ಯವನ್ನು ಓರೆಗೆ ಹಚ್ಚಲು ಇಂಗ್ಲೆಂಡ್ ಪ್ರವಾಸದಲ್ಲಿ ಕಠಿಣ ಟೆಸ್ಟ್ ಪಂದ್ಯಗಳನ್ನು ಎದುರು ನೋಡುತ್ತಿದ್ದೇವೆ ಮತ್ತು ಇಂಗ್ಲೆಂಡ್‌ ವಿರುದ್ಧದ ಸರಣಿಗೆ ಸಜ್ಜಾಗಿದ್ದೇವೆ ಎಂದು ಹೇಳಿದರು.
ಅಂತೆಯೇ ಯಾವುದೇ ಸರಣಿಯಲ್ಲಿ ಆಡುವಾಗ ಎದುರಾಳಿ ತಂಡ ಯಾವುದು ಎಂಬುದರ ಬಗ್ಗೆ ಯೋಚನೆ ಮಾಡುವುದಿಲ್ಲ. ಭಾರತಕ್ಕೆ ಜಯ ಗಳಿಸಿಕೊಡಬೇಕೆಂಬುದು ಮಾತ್ರ ನನ್ನ ಮನಸ್ಸಿನಲ್ಲಿರುತ್ತದೆ ಎಂದು ಕೊಹ್ಲಿ ಹೇಳಿದರು.
ಟೀಂ ಇಂಡಿಯಾ ಐರ್ಲೆಂಡ್‌ನಲ್ಲಿ ಎರಡು ಪಂದ್ಯಗಳ ಟ್ವೆಂಟಿ–20 ಸರಣಿ ಮತ್ತು ಇಂಗ್ಲೆಂಡ್‌ನಲ್ಲಿ ತಲಾ ಮೂರು ಟ್ವೆಂಟಿ–20 ಮತ್ತು ಏಕದಿನ ಪಂದ್ಯಗಳು, ಐದು ಟೆಸ್ಟ್ ಪಂದ್ಯಗಳನ್ನು ಭಾರತ ಆಡಲಿದೆ.

 

Virat Kohli Press meet

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ