ದಿ ವಿಲನ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಇಶಾನ್ ಮತ್ತು ಅಭಿಶೇಕ್ ರಾವ್!

ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದಲ್ಲಿ ಇಶಾನ್ ಮತ್ತು ಅಭಿಶೇಕ್ ರಾವ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಭಿನಯ ಚಕ್ರವರ್ತಿ ಸುದೀಪ್ ಅವರನ್ನು ಪರಿಚಯಿಸುವ ಹಾಡಿನಲ್ಲಿ ಇಶಾನ್ ಮತ್ತು ಅಭಿಶೇಕ್ ರಾವ್ ಹೆಜ್ಜೆ ಹಾಕಲಿದ್ದಾರೆ. ಇಶಾನ್ ಅದಾಗಲೇ ಪುರಿ ಜಗನ್ನಾಥ್ ನಿರ್ದೇಶನದ ರೋಗ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪರಿಚಿತರಾಗಿದ್ದರು. ಅಭಿಶೇಕ್ ರಾವ್ ಸದ್ಯ ಪ್ರೇಮ್ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಜೋಗಿ ಪ್ರೇಮ್ ಚಿತ್ರದ ಪೋಸ್ಟ್ ಪ್ರೋಡೆಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು ಅಕ್ಟೋಬರ್ 1ರಂದು ಚಿತ್ರದ ಟೀಸರ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಆ್ಯಮಿ ಜಾಕ್ಸನ್, ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅಭಿನಯಿಸಿದ್ದಾರೆ. ಚಿತ್ರ ಅಕ್ಟೋಬರ್ 18ರಂದು ರಾಜ್ಯಾದ್ಯಂತ ಬೆಳ್ಳಿ ಪರದೆಗಪ್ಪಳಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ