ಫುಟ್ಬಾಲ್ ವಿಶ್ವಕಪ್ ಟೂರ್ನಿಗೆ ಇಂದು ರಾತ್ರಿ 8ಕ್ಕೆ ಚಾಲನೆ: ಬುಕ್ಕಿಗಳ ಪ್ರಕಾರ ಗೆಲುವಿನ ಹಾಟ್‌ ಫೆವರೀಟ್‌ ಯಾರು?

ಮಾಸ್ಕೋ : ಭಾರತೀಯ ಕಾಲಮಾನ ಇಂದು ರಾತ್ರಿ 8ಕ್ಕೆ ಫುಟ್ಬಾಲ್‌ ವರ್ಲ್ಡ್‌ ಕಪ್‌ ಟೂರ್ನಿಗೆ ಚಾಲನೆ ಸಿಗಲಿದೆ. ಪ್ರತಿಷ್ಠಿತ ಟೂರ್ನಿಗೆ ಮಾಸ್ಕೋ ಸಜ್ಜಾಗಿದೆ. ರಾತ್ರಿ 8.30ಕ್ಕೆಸೌದಿ ಅರೇಬಿಯಾ ಮತ್ತು ಅತಿಥೇಯ ರಷ್ಯಾ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.
ವಿಶ್ವ ಫುಟ್ಬಾಲ್‌ ಪ್ರೇಮಿಗಳು ತಮ್ಮ ನೆಚ್ಚಿನ ತಂಡಗಳು ಹಾಗೂ ಆಟಗಾರರ ಕಾಲ್ಚೆಂಡಿನ ಕಾಲ್ಚೆಳಕ ಕಣ್ತುಂಬಿಕೊಳ್ಳಲು ಆಗಲೇ ಕಾತರರಾಗಿ ಕುಳಿತಿದ್ದಾರೆ. ಅತ್ತ, ಬುಕ್ಕಿಗಳು ಮಾತ್ರ ಯಾವ ತಂಡಕ್ಕೆ ಈ ಬಾರಿ ಫಿಫಾ ಕಪ್‌ ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.
ಈ ಬಾರಿಯ ಫಿಫಾ ವರ್ಲ್ಡ್‌ ಕಪ್‌ ಟೂರ್ನಿಯಲ್ಲಿ ಬ್ರೆಜಿಲ್‌ ಗೆಲುವು ಸಾಧಿಸುತ್ತದೆ ಎಂದು ಲೀಡಿಂಗ್‌ ಬ್ರಿಟೀಷ್‌ ಬುಕ್‌ಮೇಕರ್‌ ವಿಲಿಯಂ ಹಿಲ್‌‌ ಪ್ರೆಡ್ಕಿಕ್ಟ್‌ ಮಾಡಿದ್ದು, ಬ್ರೆಜಿಲ್‌ ಗೆದ್ದರೆ (4/1) ಅಂದರೆ ಒಂದು ರೂ.ಗೆ ನಾಲ್ಕು ರೂ. ಬಾಜಿ ಆಫರ್‌ ಮಾಡಿದ್ದಾರೆ.
ಜರ್ಮನ್‌ ತಂಡಕ್ಕೆ ಎರಡನೇ ಪ್ರಾಶಸ್ತ್ಯ ನೀಡಿರುವ ಬುಕ್ಕಿಗಳು 2 ರೂ.ಗೆ 9 ರೂ. ಬಿಡ್‌ ಮಾಡಿದ್ದಾರೆ. ಬುಕ್ಕಿಗಳ ಪ್ರಕಾರ ಗೆಲ್ಲುವ ಮೂರನೇ ತಂಡ ಅಂದರೆ ಅದು ಫ್ರಾನ್ಸ್‌. ಬುಕ್ಕಿಗಳು ಈ ತಂಡಕ್ಕೆ 2 ರೂ.ಗೆ 11 ರೂ. ಆಫರ್ ಮಾಡಿದ್ದಾರೆ.
ಇನ್ನು ಭಾರತ ಬುಕ್ಕಿಗಳಿಗೂ ಬ್ರೆಜಿಲ್‌ ಗೆಲ್ಲುವ ಹಾಟ್ ಫೆವರೀಟ್‌ ಆಗಿದ್ದು, ಭಾರತದಲ್ಲಿ ಈ ದರ 2 ರೂ.ಗೆ 9 ರೂ. ಆಗಿದೆ. ಈಗಲೇ ಭಾರಿ ಬೆಟ್ಟಿಂಗ್‌ ನಡೆಯುತ್ತಿದ್ದು, ಬುಕ್ಕಿಗಳ ಪ್ರಕಾರ ಬ್ರೆಜಿಲ್‌ಗೆ ಮೊದಲ ಸ್ಥಾನ ಇದ್ದರೆ, ಜರ್ಮನಿ ಹಾಗೂ ಫ್ರಾನ್ಸ್‌ ನಂತರ ಸ್ಥಾನದಲ್ಲಿದ್ದು, ಈ ಬಾರಿಯ ಹಾಟ್‌ ಫೆವರೀಟ್‌ ಆಗಿವೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ