ರಾಯಚೂರು:ಏ-17: ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್ ಗೊಂದಲ ಮುಂದುವರಿದಿದ್ದು,
ಕಳೆದ ಬಾರಿ ಕೆಜೆಪಿಯಿಂದ ಸ್ಫರ್ದಿಸಿದ್ದ ಹಾಗೂ ಈಬಾರಿ ಟಿಕೆಟ್ ಆಕಾಂಕ್ಷಿ
ಮಹಾದೇವಪ್ಪಗೌಡರ ಬೆಂಬಲಿಗರಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಕರಡಿ ಸಂಗಣ್ಣ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಮಸ್ಕಿ ಪಟ್ಟಣದಲ್ಲಿ ಮಹದೇವಪ್ಪ ಗೌಡರ ಬೆಂಬಲಿಗರು ಬೀದಿಗಳಿದು ಪ್ರತಿಭಟನೆ ನಡೆಸಿದ್ದಾರೆ.
ಟೈರಗೆ ಬೆಂಕಿ ಹಚ್ಚಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಪುರಸಭೆ. ವಿವಿಧ ಸೊಸೈಟಿಗಳ ಸ್ಥಾನಕ್ಕೆ ಬಿಜೆಪಿ ಕಾರ್ತಕರ್ತರು ರಾಜೀನಾಮೆ ನೀಡಿದ್ದು, ಪಕ್ಷದ ವಿವಿಧ
ಮೋರ್ಚಾಗಳ ಸ್ಥಾನಕ್ಕೂ ರಾಜೀನಾಮೆ ಈ ವೇಳೆ ರಾಜೀನಾಮೆ ನಿಡಿದ್ದಾರೆ.
Raichur,maski,mahadevappa gowda sapportes,protest