ಹಾಸನ:ಮಾ-16:ಆಂಧ್ರ ವಿಭಜನೆಯಾದಾಗ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಂದು ಉಲ್ಟಾಹೊಡೆದಿದೆ. ಅವರ ಈ ನಡೆಯೇ ಇಂದು ಎನ್ ಡಿಎ ಮೈತ್ರಿಕೂಟದಿಂದ ಟಿಡಿಪಿ ಹೊರ ನಡೆಯಲು ಕಾರಣವಾಗಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ದೇವೇಗೌಡರು, ಎನ್ಡಿಎ ಮೈತ್ರಿಕೂಟದಿಂದ ಟಿಡಿಪಿ ಹೊರಬಂದ ವಿಚಾರವಾಗಿ ಪ್ರತಿಕ್ರಿಯೆ ನೀಡಿ ಆಂಧ್ರ ವಿಭಜನೆಯಾದಾಗ ವಿಶೇಷ ಪ್ಯಾಕೇಜ್ ಕೊಡುವು ದಾಗಿ ಕೇಂದ್ರ ಹೇಳಿತ್ತು.
ಆದ್ರೆ ಈ ವರೆಗೂ ಪ್ಯಾಕೇಜ್ ನೀಡಿಲ್ಲ. ಪ್ಯಾಕೇಜ್ ಬಗ್ಗೆ ಪ್ರಧಾನಿ ಅವರು ಯೂ ಟರ್ನ್ ತೆಗೆದು ಕೊಂಡರು. ಕೇಂದ್ರದ ಈ ನಡೆ ಇವತ್ತಿನ ಹೊಸ ಬೆಳವಣಿಗೆಗೆ ಕಾರಣ ಇರಬಹುದು.
ಕಳೆದ ಮೂರು ವಾರಗಳ ಬೆಳವಣಿಗೆಗೆ ಇಂದು ತೆರೆ ಬಿದ್ದಿದೆ ಎಂದರು.
ಇನ್ನು ಟಿಡಿಪಿ ಮುಖ್ಯಸ್ಥ ಮುಕ್ಖ್ಯಮಂತ್ರಿ ಚಂದ್ರಬಾಬುನಾಯ್ಡುಗೆ ನಿಮ್ಮ ಬೆಂಬಲವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಗೌಡರು, ನನ್ನ ಬೆಂಬಲದ ಬಗ್ಗೆ ಕಾದು ನೋಡಿ ಎಂದು ಹೇಳಿದ್ದಾರೆ.
ನೋಟ್ ಬ್ಯಾನ್, ಜಿಎಸ್ಟಿ ಕಪ್ಪುಹಣ ಬಡವರಿಗೆ ಹಂಚಿಕೆ ಭರವಸೆ ಹಾಗೂ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಮೋದಿ ಅವರ ಜನಪ್ರಿಯತೆ ಕುಗ್ಗಿಸುತ್ತಿರುವುದು ಸತ್ಯ ಅದೇ ಕಾರಣಕ್ಕೆ ಈ ಎಲ್ಲಾ ಬೆಳವಣಿಗೆ ನಡೆಯುತ್ತಿವೆ ಎಂದು ಅಭಿಪ್ರಾಯಪಟ್ಟರು.
ಇನ್ನು ಮಾಜಿ ಸಿಎಂ ವೀರಪ್ಪಮೊಯ್ಲಿ ಪರ್ಸಂಟೇಜ್ ರಾಜಕೀಯ ಆರೋಪ ಸತ್ಯ. ಅದರಲ್ಲಿ ಯಾವುದೇ ಅನುಮಾನ ಇಲ್ಲ ಇದು ಒಂದಂಶ ಅಷ್ಟೆ ಈ ರೀತಿ ಚಟುವಟಿಕೆ ಸಾಕಷ್ಟು ನಡೆಯುತ್ತಿವೆ. ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮೊಯ್ಲಿಗಿಂತ ನಾನು ಬೇರೆ ಹೇಳಬೇಕೆ ? ಎಂದು ಪ್ರಶ್ನಿಸಿದರು.
ಜಿಲ್ಲೆಗೆ ೨೧ ಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಂದು ಹೋಗಲಿ ಆ ನಂತರ ನಾವೂ ದೊಡ್ಡ ಸಭೆ ಮಾಡುತ್ತೇವೆ. ಮುಂದಿನ ಕಾವೇರಿ ಕೊಳ್ಳದ ಸಂಸದರ ಸಭೆಯನ್ನು ಮುಂದೆ ಕರೆದರೂ ಭಾಗಿಯಾಗುವೆ
ಕಾವೇರಿ ವಿಚಾರದಲ್ಲಿ ನನ್ನ ನಿರ್ಧಾರ ಅಚಲ ಯಾವುದೇ ಮುಜುಗರ ಇಲ್ಲ .ನಿರ್ವಹಣಾ ಮಂಡಳಿ ರಚನೆ ಬಗ್ಗೆ ನಾನು ಈಗಾಗಲೇ ಕೇಂದ್ರದ ಹಲವರಿಗೆ ಪತ್ರ ಬರೆದಿದ್ದೇನೆ ಎಂದರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಶೋಕ್ ಖೇಣಿ ಕುರಿತು ವಾಗ್ದಾಳಿ ನಡೆಸಿದ ಗೌಡರು, ಚುನಾವಣೆ ಹೊಸ್ತಿಲಲ್ಲಿ ಸಾವಿರಾರು ಕೋಟಿರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದ್ರೆ ಜನ ನಂಬ್ತಾರಾ? ಜನರಿಗೆ ರಾಜಕೀಯ ಪ್ರಭುತ್ವ ಇಲ್ಲವೇ? ಖೇಣಿ ಸಾಕಷ್ಟು ಅಕ್ರಮ ಮಾಡಿದ್ದಾರೆ ೩೦ ಸಾವಿರ ಕೋಟಿ ವಂಚನೆ ಮಾಡಿದ್ದಾರೆ. ಅಂಥವರನ್ನು ಪಕ್ಷಕ್ಕೆ ಸೇರಿಸಿಕೊಂಡು ನಮ್ಮದು ಭ್ರಷ್ಟರಹಿತ ಸರಕಾರ ಅಂದ್ರೆ ಜನ ಒಪ್ಪುತ್ತಾರಾ? ನೈಸ್ ಯೋಜನೆಯಿಂದ ತೊಂದರೆಗೀಡಾಗಿರುವ ರೈತರ ಸೇರಿಸಿ ಶೀಘ್ರ ರಾಜಭವನ ಚಲೋ ಮಾಡುವೆ ಎಂದು ಗುಡುಗಿದ್ದಾರೆ.
H. D. Deve Gowda,TDP, PM Modi government,U turn