ಕೊಪ್ಪಳ:ಏ-10: ಬೆಳೆಗಳಿಗೆ ನೀರಿಲ್ಲದೇ ಸಾವಿರಾರು ಹೆಕ್ಟೇರ್ ಭತ್ತದ ಬೆಳೆ ನಾಶವಾಗಿದೆ.ಸುಮಾರು 500 ಕೋಟಿ ರೈತರಿಗೆ ನಷ್ಟವಾಗಿದೆ. ಇಲ್ಲಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಏನು ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
ಗಂಗಾವತಿಯ ವಿದ್ಯಾನಗರ ರೈತರ ಜಮೀನಿಗಳಿಗೆ ಭೇಟಿ ನೀಡಿ ನೀರಲ್ಲದೇ ನಾಶವಾದ ಭತ್ತದ ಬೆಳೆಗಳನ್ನು ವೀಕ್ಷಿಸಿದರು. ಈ ವೇಳೆ ಮಾತನಾಡಿದ ಬಿಎಸ್ ವೈ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬೆಳೆಗೆ ನೀರಿಲ್ಲದ ಕಾರಣ ಸಾವಿರಾರು ಹೆಕ್ಟೇರ್ ಭತ್ತದ ಬೆಳೆ ನಾಶವಾಗಿದೆ. ಸುಮಾರು 500 ಕೋಟಿ ರೈತರಿಗೆ ನಷ್ಟವಾಗಿದೆ..ರಾಜ್ಯದಲ್ಲಿ ಸರ್ಕಾರ ಎಲ್ಲಿದೆ..? ಸತ್ತುಹೋಗಿದೆ..ಬದುಕಿದ್ರೆ ಈ ಸ್ಥಿತಿ ಬರ್ತಾ ಇರಲಿಲ್ಲ..ಸರ್ಕಾರ ಸತ್ತು ಹೋದ್ರೆ ಅಧಿಕಾರಿಗಳು ಸತ್ತಿದ್ದಾರೇನು ಎಂದು ಪ್ರಶ್ನೆ ಮಾಡಿದರು.ನಾನು ಚುನಾವಣಾ ಗಿಮಕ್ ಗೋಸ್ಕರ ಬಂದಿಲ್ಲ.ರಾಜ್ಯದಲ್ಲಿ ಅನ್ನದಾತರನ್ನು ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಸರಿಯಾಗಿ ಕ್ರಮಬದ್ದವಾಗಿ ಯೋಚಿಸಿದ್ದರೆ ರೈತರಿಗೆ ಈ ಸ್ಥಿತಿ ಬರ್ತಾ ಇರಲಿಲ್ಲ.
ರಾಜ್ಯ ಸರ್ಕಾರ ರೈತರ ಬಗ್ಗೆ ನೀರಾವರಿ ಸೂಕ್ತವಾಗಿ ಗಮನಹರಿಸಬೇಕಾಗಿತ್ತು. ಭತ್ತ ಬೆಳೆಯುವ ರೈತನಿಗೆ ನೀರು ಬಿಡುವುದು ಸರಿಯಾಗಿ ನಿರ್ವಹಣೆ ಮಾಡದೇ ಇದ್ದರಿಂದ ರೈತ ಬೀದಿಗೆ ಬಿದ್ದಿದ್ದಾನೆ. ನೀರು ಕೊಟ್ಟಿದ್ದರೆ ಬೆಳೆ ಬದುಕುತ್ತಿತ್ತು ಎಂದರು.
ಪತ್ರಕರ್ತರ ಮೇಲೆ ಹರಿಹಾಯ್ದ ಯಡಿಯೂರಪ್ಪ:
ಚುನಾವಣೆ ಸಂದರ್ಭದಲ್ಲಿ ಯಾಕೆ ಬಂದಿದ್ದು ಈ ತೊಂದರೆ ಕಳೆದ ೨ ವರ್ಷಗಳಿಂದ ಇದೆ. ನಿಮ್ಮದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನೆ ಕೇಳಿದ ಪತ್ರಕರ್ತರ ಮೇಲೆ ಹರಿಹಾಯ್ದ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸರಕಾರಕ್ಕೂ ರೈತರ ಬೆಳೆ ನಾಶ ಸಮಸ್ಯೆಗೂ ಏನ್ರಿ ಸಂಬಂಧ? ನಿಮ್ಮನ್ನು ಕೇಳಿ ಬರಬೇಕೇನ್ರಿ. ರೈತರ ಸಮಸ್ಯೆಗಳನ್ನು ಕೇಳಲಿಕ್ಕೆ… ನಾನು ಬೆಂಗಳೂರಿನಿಂದ ಬಂದಿದ್ದೇನೆ. ನಾನೇನು ಚುನಾವಣಾ ಗಿಮಿಕ್ ಮಾಡಲು ಬಂದಿಲ್ಲ.. ಎಂದು ಗುಡುಗಿದರು.
Assembly election,B S yeddyurappa, koppala