ಚಿತ್ರದುರ್ಗ ಜಿಲ್ಲೆಗೆ 330 ಕೋಟಿ ವಸತಿ ಯೋಜನೆ ಮಂಜೂರಾತಿ

ಜೂಲೈ-3:  ಚಿತ್ರದುರ್ಗ ಸೂರಿಲ್ಲದ ಎಲ್ಲಾ ವರ್ಗದ ಜನರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲಾಗುತ್ತಿದ್ದು ರಾಜ್ಯದಲ್ಲಿ 65 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.

ಹಿರಿಯೂರು ಕ್ಷೇತ್ರಕ್ಕೆ ಸಂಬಂಸಿದಂತೆ ದೇವರಾಜ ಅರಸು ವಸತಿ ಯೋಜನೆಯಡಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ ವಸತಿ ಯೋಜನೆಯಡಿ 4448 ಮನೆಗಳಿಗೆ ಮಂಜೂರಾತಿ ಆದೇಶ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಂಜೂರಾತಿ ಆದೇಶ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಯಾರಿಗೆ ಸೂರಿಲ್ಲ ಅಂತಹ ಎಲ್ಲಾ ಜನಾಂಗದವರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುತ್ತದೆ. ಇದಕ್ಕಾಗಿ ಎಲ್ಲಾ ತಹಶೀಲ್ದಾರರು ಸ್ಥಳವನ್ನು ಗುರುತಿಸಿ ನಿವೇಶನ ನೀಡುವ ಕೆಲಸವನ್ನು ಮಾಡಬೇಕಾಗಿದೆ ಎಂದರು.

ಸರ್ಕಾರ ವಿವಿಧ ವಸತಿ ಯೋಜನೆಯಡಿ ಬಡವರಿಗೆ ಅನುಕೂಲವಾಗಲೆಂದು ನೊಂದಣಿ ಇಲಾಖೆಯಲ್ಲಿ ಸಾಮಾನ್ಯರಿಗೆ 2 ಸಾವಿರ, ಎಸ್.ಸಿ., ಎಸ್.ಟಿ.ಗೆ 1 ಸಾವಿರ ಕ್ರಯಪತ್ರ ಶುಲ್ಕ ಭರಿಸಿದಲ್ಲಿ ಕ್ರಯಪತ್ರ ಮಾಡಿಕೊಡಲಾಗುತ್ತದೆ. ಇದರ ನೊಂದಣಿಗೆ 120 ರೂ. ಮಾತ್ರ ನೊಂದಣಿ ಶುಲ್ಕ ನಿಗದಿ ಮಾಡಿದೆ ಎಂದರು.

ಸಂಸ ಎ. ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಗೆ 20544 ಮನೆಗಳು ಮಂಜೂರಾಗಿದ್ದು ಒಟ್ಟು 1,67,500 ರೂ.ಗಳನ್ನು ಪ್ರತಿ ಘಟಕಕ್ಕೆ ನೀಡಲಾಗುತ್ತದೆ. ಇದರಲ್ಲಿ 27500 ನರೆಗಾದಡಿ ಹಾಗೂ 20000 ಸ್ವಚ್ಛ ಭಾರತ ಅಭಿಯಾನದಡಿ ನೀಡಲಾಗುತ್ತದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸುಮಾರು 5 ಲಕ್ಷ ಮನೆಗಳು ಮಂಜೂರಾಗಿದ್ದು ಮುಂದಿನ ದಿನಗಳಲ್ಲಿ ಸೂರಿಲ್ಲದ ಎಲ್ಲರಿಗೂ ಮನೆಗಳು ದೊರೆಯಲಿವೆ ಎಂದು ಹೇಳಿದರು.

ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಅಲೆಮಾರಿಗಳಾಗಿದ್ದರಿಂದ ಇವರಿಗೆ ಸ್ವಂತ ಸೂರು ಇರುವುದಿಲ್ಲ. ಕ್ಷೇತ್ರಕ್ಕೆ ಭೇಟಿ ನೀಡಿದಾಗ ಅನೇಕ ಜನರು ಮನೆಗಾಗಿ ಕೇಳುತ್ತಿದ್ದರು. ಈ ಬಗ್ಗೆ ವಸತಿ ಸಚಿವರ ಗಮನಕ್ಕೆ ತಂದು ಇಷ್ಟು ಮನೆಗಳನ್ನು ಮಂಜೂರಾತಿ ಮಾಡಿಸಲು ಸಹಕಾರಿಯಾಗಿದೆ. ಪ್ರತಿಯೊಬ್ಬರಿಗೂ ಆರೋಗ್ಯ, ಶಿಕ್ಷಣದ ಜೊತೆಗೆ ಸ್ವಂತ ಸೂರು ಅಷ್ಟೇ ಮುಖ್ಯವಾಗಿರುತ್ತದೆ ಎಂದರು.

ಯಾದವ ಮಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳಾದ ಪರಶುರಾಂಗೌಡ, ಮಹದೇವ ಪ್ರಸಾದ್, ಜಿ.ಪಂ. ಮುಖ್ಯ ಯೋಜನಾಕಾರಿ ಗಾಯಿತ್ರಿ, ತಹಶೀಲ್ದಾರ್ ಶಿವಕುಮಾರ್, ತಾ.ಪಂ. ಇಒ ಈಶ್ವರ ಪ್ರಸಾದ್, ಬಿಸಿಎಂ ಅಧಿಕಾರಿ ಅವೀನ್, ಮುಖಂಡರಾದ ಡಿ.ಟಿ.ಶ್ರೀನಿವಾಸ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಈಗ ಮಂಜೂರಾತಿ ನೀಡಿರುವ ಮನೆಗಳ ನಿರ್ಮಾಣವನ್ನು ಆರು ತಿಂಗಳಲ್ಲಿ ಮುಕ್ತಾಯ ಮಾಡಬೇಕು. ಇದಕ್ಕಾಗಿ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಈ ತಾಲ್ಲೂಕನ್ನು ದತ್ತು ಪಡೆದು ಎಲ್ಲಾ ಮನೆಗಳನ್ನು ನಿಗತ ಅವಯಲ್ಲಿ ಮುಕ್ತಾಯ ಮಾಡಬೇಕು. ಬಸವ ವಸತಿ ಯೋಜನೆಯಡಿ ನೀಡಿದ್ದ ಮನೆಗಳಿಗೆ ವಿವಿಧ ಹಂತದ ಕಂತುಗಳನ್ನು ಬಿಡುಗಡೆ ಮಾಡಿಲ್ಲ. ಯಾವ ಮನೆಗಳಿಗೆ ಸರಿಯಾದ ದಾಖಲೆ ಇದೆ. ಅದನ್ನು ವಿಷಲ್ ಆಪ್‍ನಲ್ಲಿ ಅಪ್‍ಲೋಡ್ ಮಾಡಿದ 2 ನಿಮಿಷದಲ್ಲಿ ಕಂತುಗಳನ್ನು ಬಿಡುಗಡೆ ಮಾಡಲಾಗುವುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ