ಶ್ರೀಸೋಮನಾಥ್ ಟ್ರಸ್ಟ್ನ ಮುಂದಿನ ಅಧ್ಯಕ್ಷರಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಟ್ರಸ್ಟ್ ಗುಜರಾತ್ ನ ಗಿರ್-ಸೋಮನಾಥ್ ಜಿಲ್ಲೆಯ ಪ್ರಭಾಸ್ ಪಠಾಣ್ ನಗರದಲ್ಲಿರುವ ವಿಶ್ವ ಪ್ರಸಿದ್ಧ ಸೋಮನಾಥ ದೇವಾಲಯದ ನಿರ್ವಹಣೆ ಹೊತ್ತಿದೆ. ಪ್ರಧಾನಮಂತ್ರಿ ನರೇಂದ್ರಮೋದಿ ಭಾಗವಹಿಸಿದ್ದ ಶ್ರೀ ಸೋಮನಾಥ ಟ್ರಸ್ಟ್ನ ವರ್ಚುವಲ್ ಸಭೆಯಲ್ಲಿ ಉನ್ನತ ಸ್ಥಾನಕ್ಕೆ ಪ್ರಧಾನಮಂತ್ರಿಯವರನ್ನು ಆಯ್ಕೆ ಮಾಡಲಾಯಿತು. ಇತ್ತೀಚೆಗೆ ನಿಧನ ಹೊಂದಿದ ಗುಜರಾತ್ ಮಾಜಿ ಮುಖ್ಯಮಂತಿ ಹಾಗೂ ಟ್ರಸ್ಟ್ ನ ಮಾಜಿ ಅಧ್ಯಕ್ಷ ಕೇಶುಭಾಯಿ ಪಟೇಲ್ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸೋಮನಾಥ ಟ್ರಸ್ಟ್ನ ಕಾರ್ಯವನ್ನು ಪ್ರಶಂಸಿಸಿದ ಪ್ರಧಾನಮಂತ್ರಿ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ನಮ್ಮ ಪರಂಪರೆಯೊಂದಿಗೆ ಪ್ರವಾಸಿಗರ ಸಂಪರ್ಕವನ್ನು ಗಟ್ಟಿಗೊಳಿಸಲು ಟ್ರಸ್ಟ್ವತಿಯಿಂದ ಇನ್ನೂ ಮುಂದೆಯೂ ಹೆಚ್ಚಿನ ಮೂಲಸೌಕರ್ಯ ಹಾಗೂ ಮನರಂಜನಾ ಸೌಲಭ್ಯ, ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಪ್ರಧಾನಮಂತ್ರಿ ಹೇಳಿದರು.
Related Articles
ಲಕ್ಷಾಂತರ ಜನರಿಗೆ ಆಸ್ತಿ ಕಾರ್ಡ್ ವಿತರಣೆ ಸ್ವಮಿತ್ವ ಯೋಜನೆಗೆ ನಾಳೆ ಮೋದಿ ಚಾಲನೆ
October 10, 2020
Varta Mitra News - SP
ರಾಷ್ಟ್ರೀಯ, ಪ್ರಧಾನಿ ಮೋದಿ
Comments Off on ಲಕ್ಷಾಂತರ ಜನರಿಗೆ ಆಸ್ತಿ ಕಾರ್ಡ್ ವಿತರಣೆ ಸ್ವಮಿತ್ವ ಯೋಜನೆಗೆ ನಾಳೆ ಮೋದಿ ಚಾಲನೆ
Seen By: 80 ಹೊಸದಿಲ್ಲಿ: ಗ್ರಾಮೀಣ ಭಾರತದಲ್ಲಿ ಪರಿವರ್ತನೆ ಹಾಗೂ ಲಕ್ಷಾಂತರ ಭಾರತೀಯರ ಸಬಲೀಕರಣಕ್ಕೆ ಕಾರಣವಾಗುವ ಐತಿಹಾಸಿಕ ಯೋಜನೆ ಸ್ವಮಿತ್ವ ಅನ್ವಯ ಆಸ್ತಿ ಕಾರ್ಡ್ಗಳ ಭೌತಿಕ ವಿತರಣೆಗೆ [more]
Seen By: 69 ಈ ಬಾರಿ ದೇಶದ ಜನತೆ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಮೂಲಕ ದೀಪಾವಳಿ ಆಚರಿಸಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಸ್ಥಳೀಯ ಉತ್ಪನ್ನಗಳ [more]
ಎನ್ ಡಿ ಎ ಮೈತ್ರಿಕೂಟದ ಸಂಸದೀಯ ನಾಯಕರಾಗಿ ನರೇಂದ್ರ ಮೋದಿ ಆಯ್ಕೆ
May 25, 2019
Samachar Network-CLB
ರಾಷ್ಟ್ರೀಯ
Comments Off on ಎನ್ ಡಿ ಎ ಮೈತ್ರಿಕೂಟದ ಸಂಸದೀಯ ನಾಯಕರಾಗಿ ನರೇಂದ್ರ ಮೋದಿ ಆಯ್ಕೆ
Seen By: 52 ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಹೂತಪೂರ್ವ ಗೆಲುವು ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಎರಡನೆ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು [more]