ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಲು ತಮ್ಮ ಬೆಂಬಲಿಗರಿಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ಮಾಜಿ ಮೇಯರ್ ಸಂಪತ್ರಾಜ್ರನ್ನು ನ್ಯಾಯಾಲಯವು 4 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.
ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಸಿಲುಕಿದ ಸಂಪತ್ರಾಜ್ಗೆ ಸದ್ಯ ನಾಲ್ಕು ದಿನ ಜೈಲೇ ಗತಿಯಾಗಿದೆ. ಸಂಪತ್ರಾಜ್ರನ್ನು ಬಂಸಿದ ನಂತರ ನ್ಯಾಯಾಲಯದ ಮುಖಾಂತರ ಮೂರು ದಿನ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಿದ್ದರೂ ಸಂಪತ್ರಾಜ್ ಸ್ಪಂದಿಸುತ್ತಿರಲಿಲ್ಲ. ಹೀಗಾಗಿ 3 ದಿನಗಳ ಸಿಸಿಬಿ ಕಸ್ಟಡಿ ಅವ ಮುಗಿದ ಹಿನ್ನೆಲೆ ಸಿಸಿಬಿ ಪೊಲೀಸರು ನ.20ರಂದು ಮತ್ತೆ ನಗರದ 67ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾೀಶರಾದ ಕಾತ್ಯಾಯಿನಿ ಅವರು ನಾಲ್ಕು ದಿನಗಳ ಕಾಲ ಸಂಪತ್ರಾಜ್ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.