ಬಾಗಲಕೋಟೆ: ಶಿರಾ ಮತ್ತು ಆರ್.ಆರ್. ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಸಿದ್ದು, ಜನರು ಕೊಟ್ಟ ತೀರ್ಪುನ್ನು ಸ್ವಾಗತಿಸುತ್ತೇವೆ. ಅಕಾರ ದುರುಪಯೋಗ ಮತ್ತು ಹಣದ ಪ್ರಭಾವದಿಂದ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಆರೋಪ ಮಾಡಿದರು.
ಜಿಲ್ಲೆಯ ಬಾದಾಮಿ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಬಹಳ ಇತ್ತು. ಪಕ್ಷದ ಮುಖಂಡರು, ಮಾಜಿ ಶಾಸಕರು, ಸಂಸದರು ಪ್ರಚಾರ ನಡೆಸಿದ್ದರು. ಆದರೆ, ಜನರ ತೀರ್ಪಿಗೆ ತಲೆಬಾಗುತ್ತೇವೆ. ಇನ್ನೂ ಆರ್.ಆರ್.ನಗರದಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದರಲ್ಲಿ ವಿಳಂಬವಾಯಿತು ಎಂದು ಹೇಳಿದರು.
ಸರ್ಕಾರ ಯಾವುದೇ ಇರಲಿ ನಿಷ್ಪಕ್ಷಪತಾದಿಂದ ಮುಕ್ತವಾಗಿ ಚುನಾವಣೆಯನ್ನು ನಡೆಸುವುದು ಜವಾಬ್ದಾರಿ. ಆದರೆ, ಈಗ ನಡೆದಿರುವ ಚುನಾವಣೆಯಲ್ಲಿ ಅಕಾರದ ದುರುಪಯೋಗ ಮತ್ತು ಹಣದ ಹೊಳೆಯನ್ನು ಹರಿಸಿದ್ದರಿಂದ ಬಿಜೆಪಿ ಅಭ್ರ್ಯರ್ಥಿಗಳು ಗೆಲುವು ಸಾಸಿದ್ದಾರೆ ಎಂದರು.
ಆರ್.ಆರ್.ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಠೇವಣಿ ಕಳೆದುಕೊಳ್ಳಬೇಕಾಯಿತು. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಜೆಡಿಎಸ್ ಡಮ್ಮಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಚುನಾವಣೆಯಲ್ಲಿ ಬಿಜೆಪಿಯನ್ನು ಕುಮಾರಸ್ವಾಮಿ ಟೀಕಿಸದೇ ತಮ್ಮನ್ನು ಮಾತ್ರ ಟೀಕಿಸಿದ್ದೇಕೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಬಿಜೆಪಿಯನ್ನು ಗೆಲ್ಲಿಸಬೇಕು ಎಂಬ ಕಾರಣದಿಂದ ನನ್ನನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ ಎಂದು ದೂರಿದರು