ಬಳ್ಳಾರಿ: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ 28ನೇ ನುಡಿಹಬ್ಬ ಹಾಗೂ ಘಟಿಕೋತ್ಸವ ಸಮಾರಂಭ ಅದ್ಧೂರಿಯಾಗಿ ನಡೆಯಿತು.
ಉಪ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು, ಪ್ರತಿಷ್ಠಿತ ನಾಡೋಜ ಪ್ರಶಸ್ತಿ ಪ್ರದಾನ ಮಾಡಿದರು. ವೈದ್ಯಕೀಯ ಕ್ಷೇತ್ರದಿಂದ ಡಾ.ಹನುಮಂತ ಗೋವಿಂದಪ್ಪ ದಡ್ಡಿ ಹಾಗೂ ಶಿಕ್ಷಣ ಕ್ಷೇತ್ರದಿಂದ ಡಾ.ವೂಡೇ ಪಿ.ಕೃಷ್ಣ ಅವರಿಗೆ ನಾಡೋಜ ಪ್ರಶಸ್ತಿ ನೀಡಲಾಯಿತು. ಡಿಲಿಟ್, ಪಿಎಚ್‍ಡಿ ಹಾಗೂ ಎಂಫಿಲ್‍ಗಳನ್ನು ನೀಡಿ ಗೌರವಿಸಲಾಯಿತು.
ಇದಕ್ಕೂ ಮುನ್ನ ಘಟಿಕೋತ್ಸವದ ಮೆರವಣಿಗೆ ಅರ್ಥಪೂರ್ಣವಾಗಿ ನಡೆಯಿತು. 28ನೇ ನುಡಿಹಬ್ಬ ಹಾಗೂ ಘಟಿಕೋತ್ಸವ ರಾಷ್ಟ್ರೀಯ ಮೌಲ್ವೀಕರಣ ಮತ್ತು ಮಾನ್ಯತಾ ಪರಿಷತ್(ಎನ್‍ಎಎಸಿ) ನಿರ್ದೇಶಕ ಮತ್ತು ವಿಶ್ರಾಂತ ಕುಲಪತಿ ಪ್ರೊ.ಎಸ್ ಸಿ ಶರ್ಮಾ ಅವರು ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಕನ್ನಡ ವಿಶ್ವವಿದ್ಯಾಲಯ ಭಾಷೆಯ ಉಳಿವಿಗಾಗಿ ಸ್ಥಾಪನೆಯಾಗಿದೆ. ಸಂಸ್ಕøತಿ ಮತ್ತು ಭಾಷೆಯ ಅಸ್ಮಿತೆಯಿಂದಲೇ ಕನ್ನಡ ವಿಶ್ವವಿದ್ಯಾಲಯವನ್ನು ಗುರುತಿಸಲಾಗುತ್ತದೆ. ವಿಶ್ವವಿದ್ಯಾಲಯದಲ್ಲಿ ಸದಾ ಸಂಶೋಧನಾ ಚಟುವಟಿಕೆಗಳು ನಿರಂತವಾಗಿ ನಡೆಯುತ್ತಿವೆ ಎಂದರು.
28ನೇ ನುಡಿಹಬ್ಬ ಹಾಗೂ ಘಟಿಕೋತ್ಸವ ಕುಲಪತಿ ಸ ಚಿ ರಮೇಶ ಮಾತನಾಡಿ, ಕನ್ನಡ-ಕರ್ನಾಟಕ ಕಲಿಕೆಯ ಮುನ್ನಡೆ. ಅಧ್ಯಯನ ಮತ್ತು ಪ್ರಸಾರಕ್ಕಾಗಿ ಶ್ರೀ ಪಂಪಾ ವಿರೂಪಾಕ್ಷನ ನೆಲೆಯಾದ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಗೊಂಡಿದೆ. ಕನ್ನಡವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವುದು ಮತ್ತು ಸಾಂಸ್ಕøತಿಕ ಚಹರೆಗಳನ್ನು ವಿಸ್ತರಿಸುವ ಕೆಲಸವನ್ನು ಮಾಡುತ್ತಿದೆ. ಸಂಸೋಧನೆಗೆ ಅವಕಾಶ ಮಾಡಿಕೊಡುವ ಮೂಲ ಉದ್ದೇಶಕ್ಕಾಗಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಕನ್ನಡವು ಕನ್ನಡವ ಕನ್ನಡಿಸುತಿರಬೇಕು ಎಂಬ ವರಕವಿ ಬೇಂದ್ರೆಯವರ ಮಾತಿನಂತೆ ಕೆಲಸವನ್ನು ನಿರ್ವಹಿಸುತ್ತಿದೆ ಎಂದರು.
ಪ್ರಶಸ್ತಿ ಪ್ರದಾನ ಸಮಾಂಭದಲ್ಲಿ ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಸೇರಿದಂತೆ ವಿವಿಯ ಸಿಬ್ಬಂದಿಗಳಿದ್ದರು. ಇದಕ್ಕೂ ಮೊದಲು ವಿವಿ ಆವರಣದಲ್ಲಿ ಸಂಗೀತ ಮತ್ತು ನೃತ್ಯ ವಿಭಾಗದ ಹಾಗೂ ಹಸ್ತಪ್ರತಿ ಭಂಡಾರ ಕಟ್ಟಡಗಳ ಉದ್ಘಾಟನೆ, ಒನಕೆ ಓಬವ್ವ ಅಧ್ಯಯನ ಕೇಂದ್ರದ ಶಿಲಾನ್ಯಾಸವನ್ನು ಸಚಿವ ಅಶ್ವತ್ಥ್ ನಾರಾಯಣ ಅವರು ನೆರವೇರಿಸಿದರು. ಅರಣ್ಯ ಸಚಿವ ಆನಂದ್‍ಸಿಂಗ್ ಸೇರಿದಂತೆ ಇತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೊವೀಡ್ ಹಿನ್ನೆಲೆ ನುಡಿಹಬ್ಬ ಹಾಗೂ ಘಟಿಕೋತ್ಸವ ಸಮಾರಂಭದ ನೇರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.