ಸಿದ್ದರಾಮಯ್ಯ ಮಾತಿಗೆ ಕಾಂಗ್ರೆಸ್- ಜೆಡಿಎಸ್ ನಾಯಕರು ತಬ್ಬಿಬ್ಬು!

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೈತ್ರಿ ಸರ್ಕಾರದ ಬಗ್ಗೆ ಆಡಿದ ಒಂದೇ ಒಂದು ಮಾತಿಗೆ ಕಾಂಗ್ರೆಸ್ ಹೈಕಮಾಂಡ್ ತಲೆ ಕೆಡಿಸಿಕೊಂಡಿದೆ. ಸಿದ್ದರಾಮಯ್ಯ ಅವರ ಮಾತು ಮೈತ್ರಿ ಪಾಳಯದಲ್ಲಿ ಬಿರುಗಾಳಿ ಎಬ್ಬಿಸಿದೆ ಎನ್ನಲಾಗಿದೆ.

ಜುಲೈ ನಂತರ ರಾಜ್ಯ ರಾಜಕಾರಣದಲ್ಲಿ ಮೆಗಾ ಯೂ ಟರ್ನ್ ಆಗಲಿದೆ. ಆ ಯೂ ಟರ್ನ್ ನಡೆದು ಬಿಟ್ಟರೆ ಸಾಂದರ್ಭಿಕ ದೋಸ್ತಿ ಖತಂ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೇನಿದ್ದರೂ ಒಂದು ತಿಂಗಳ ಆಟ, ಈ ಬಾರಿ ನಾನೇನೂ ಮಾಡಲು ಆಗಲ್ಲ. ಬಿಜೆಪಿಯಿಂದ ಸ್ಕ್ರೀನ್ ಪ್ಲೇ, ಡೈರೆಕ್ಷನ್ ಎಲ್ಲ ರೆಡಿಯಾಗಿದೆ. ನಮ್ಮ ಶಾಸಕರು ಕೆಲವರು ಕೈ ಕೊಡಬಹುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಸಿದ್ದರಾಮಯ್ಯ ಹೇಳಿದ ಈ ಒಂದು ರಹಸ್ಯ ಕೇಳಿ ಹೈಕಮಾಂಡ್, ಆಪ್ತ ಬಳಗವೇ ದಂಗಾಗಿ ಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ ಈ ಸಲ ನಮ್ಮ ಶಾಸಕರು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇಲ್ಲ, ನಾನು ಅಸಹಾಯಕನಾಗಿದ್ದೇನೆ. ಸಂಸತ್ತಿನ ಅಧಿವೇಶನದ ಬಳಿಕ ಏನು ಬೇಕಾದರೂ ಆಗಬಹುದು. ಸರ್ಕಾರ ನೋ ಗ್ಯಾರಂಟಿ ಎಂದು ಸಿದ್ದರಾಮಯ್ಯ ಹೇಳಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಆಪ್ತ ಬಳಗಕ್ಕೆ ಈಗಾಗಲೇ ಹಿಂಟ್ ಕೊಟ್ಟಿದ್ದಾರೆ ಎನ್ನಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ