ಜಾಗತಿಕ ಬಂಡವಾಳ ಹೂಡಿಕೆ ದುಂಡು ಮೇಜಿನ ವರ್ಚುಯಲ್ ಸಭೆ ನಾಳೆ ಆಯೋಜಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅಂತಾರಾಷ್ಟ್ರೀಯ ಹೂಡಿಕೆ ಹೆಚ್ಚಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದ್ದು, ವಿವಿಧ ಯೋಜನೆಗಳಿಗೆ ಹಣ ಹೂಡಿಕೆ ಹೆಚ್ಚಿಸುವ ಉದ್ದೇಶದಿಂದ ಈ ಸಭೆಯನ್ನು ಆಯೋಜಿಸಲಾಗಿದೆ. ಹಣಕಾಸು ಸಚಿವಾಲಯ, ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ ಸಹಯೋಗದಲ್ಲಿ ಈ ಸಭೆ ಆಯೋಜನೆಗೊಂಡಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ. ಪ್ರಮುಖ ಜಾಗತಿಕ ಸಾಂಸ್ಥಿಕ ಹೂಡಿಕೆದಾರರು, ಭಾರತೀಯ ವಾಣಿಜ್ಯ ಮುಖಂಡರು, ಹಣಕಾಸು ಮಾರುಕಟ್ಟೆ ನಿಯಂತ್ರಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರ್ಬಿಐ ಗವರ್ನರ್ ಮತ್ತು ಇತರ ಗಣ್ಯರು ಉಪಸ್ಥಿತರಿರಲಿದ್ದಾರೆ. .ಜಾಗತಿಕ ಸಾಂಸ್ಥಿಕ ಹೂಡಿಕೆದಾರರು, ಅಮೆರಿಕ, ಐರೋಪ್ಯ ರಾಷ್ಟ್ರಗಳು, ಕೆನಡಾ, ಕೊರಿಯಾ, ಜಪಾನ್, ಪಶ್ಚಿಮ ಏಷ್ಯಾ, ಆಸ್ಟ್ರೇಲಿಯಾ ಮತ್ತು ಸಿಂಗಾಪುರ ಸೇರಿದಂತೆ ಪ್ರಮುಖ ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
Related Articles
ಪೆಗಾಸಸ್ :2ವರ್ಷಗಳ ಬಳಿಕ ಈಗ ಎತ್ತಿರುವುದೇಕೆ ?ಸುಪ್ರೀಂ ಪ್ರಶ್ನೆ
August 5, 2021
Varta Mitra News - SP
ರಾಷ್ಟ್ರೀಯ
Comments Off on ಪೆಗಾಸಸ್ :2ವರ್ಷಗಳ ಬಳಿಕ ಈಗ ಎತ್ತಿರುವುದೇಕೆ ?ಸುಪ್ರೀಂ ಪ್ರಶ್ನೆ
Seen By: 247 ಹೊಸದಿಲ್ಲಿ : ಪೆಗಾಸಸ್ ವಿವಾದಕ್ಕೆ ಸಂಬಂಸಿ ಮಾಧ್ಯಮಗಳಲ್ಲಿ ಬಂದಿರುವ ಆರೋಪಗಳು ನಿಜವೇ ಆಗಿದ್ದರೆ ಅದು ಗಂಭೀರವಾದದ್ದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಆದರೆ ಎರಡು [more]
ಏಳು ದಶಕಗಳ ಕಾಯುವಿಕೆಗೆ ಸಿಕ್ಕ ಪ್ರತಿಫಲ – ಹೆಬ್ಬಾರ ಗುಡ್ಡಕ್ಕೆ ಕೊನೆಗೂ ಬಂದ ವಿದ್ಯುತ್
June 6, 2018
VD
ಉತ್ತರ ಕನ್ನಡ, ದಿನದ ವಿಶೇಷ ಸುದ್ದಿಗಳು, ಲೇಖನಗಳು, ರಾಜ್ಯ, ಕರಾವಳಿ, ಪ್ರಧಾನಿ ಮೋದಿ
Comments Off on ಏಳು ದಶಕಗಳ ಕಾಯುವಿಕೆಗೆ ಸಿಕ್ಕ ಪ್ರತಿಫಲ – ಹೆಬ್ಬಾರ ಗುಡ್ಡಕ್ಕೆ ಕೊನೆಗೂ ಬಂದ ವಿದ್ಯುತ್
Seen By: 1,025 ಗುರುಪ್ರಸಾದ ಕಲ್ಲಾರೆ ಬೆಂಗಳೂರು : ಆ ಊರಿನಲ್ಲಿ ಇದುವರೆಗೂ ಜನಸಾಮಾನ್ಯರ ಪಾಲಿಗೆ ಬೆಳಕಾಗಿದ್ದುದು ಲಾಟಿನು, ಸೀಮೆ ಎಣ್ಣೆಯ ಬುಡ್ಡಿ ದೀಪಗಳು ಮಾತ್ರ. ಆಧುನಿಕ [more]
ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮೋದಿ ಸಲಹೆ : ಸೂಕ್ಷ್ಮ ಕಂಟೇನ್ಮೆಂಟ್ ವಲಯಗಳಿಗೆ ಒತ್ತು ನೀಡಿ
July 14, 2021
Varta Mitra News - SP
ರಾಷ್ಟ್ರೀಯ
Comments Off on ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮೋದಿ ಸಲಹೆ : ಸೂಕ್ಷ್ಮ ಕಂಟೇನ್ಮೆಂಟ್ ವಲಯಗಳಿಗೆ ಒತ್ತು ನೀಡಿ
Seen By: 50 ಹೊಸದಿಲ್ಲಿ: ಕೊರೋನಾ ನಿಯಂತ್ರಣಕ್ಕೆ ಸೂಕ್ಷ್ಮ ಕಂಟೇನ್ಮೆಂಟ್ ವಲಯಗಳಿಗೆ ಒತ್ತು ನೀಡುವುದು ಉತ್ತಮ ಉಪಾಯ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಈಶಾನ್ಯ ರಾಜ್ಯಗಳ [more]