ಹೊಸದಿಲ್ಲಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸಂಬಂಸಿದ ಕಚೇರಿಗಳಿಗೆ ಸಿಬಿಐ ದಾಳಿ ಮಾಡಿದ್ದ ಬೆನ್ನಲ್ಲೇ, ಕಾಂಗ್ರೆಸ್ ನಾಯಕನಿಗೆ ಮತ್ತೊಂದು ಕಂಟಕ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಶಿವಕುಮಾರ್ ಸಂಬಂಕರ, ಸಹವರ್ತಿಗಳ ವಿಚಾರಣೆ ನಡೆಸುವಂತೆ ಶುಕ್ರವಾರ ದಿಲ್ಲಿ ಹೈಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ(ಇಡಿ) ಸೂಚಿಸಿದೆ.
ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಡಿ.ಕೆ. ಶಿವಕುಮಾರ್ ಸಂಬಂಕರಿಗೆ ಹಾಗೂ ಆಪ್ತರಿಗೆ ಇಡಿ ಸಮನ್ಸ್ ಜಾರಿ ಮಾಡಿದ್ದ ಬೆನ್ನಲ್ಲೇ, ಇದನ್ನು ಪ್ರಶ್ನಿಸಿ 7 ಪ್ರತ್ಯೇಕ ಅರ್ಜಿ ಸಲ್ಲಿಕೆಯಾಗಿತ್ತು. ರಾಜೇಶ್ ಎಚ್, ಗಂಗಾಸರನ್, ಜಯಶೀಲಾ, ಚಂದ್ರ ಜಿ., ಕೆ.ವಿ. ಲಕ್ಷ್ಮಮ್ಮ, ಮೀನಾಕ್ಷಿ ಹಾಗೂ ಹನುಮಂತಯ್ಯ ಸೇರಿ ಡಿಕೆಶಿಯ 7 ಸಂಬಂಕರು ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿದಾರರೆಲ್ಲ ವಿಚಾರಣೆಯಲ್ಲಿ ಭಾಗಿಯಾದರೆ ಮಾತ್ರವೇ ಪ್ರಕರಣದಲ್ಲಿ ನ್ಯಾಯ ದೊರೆಯಲಿದೆ ಎಂದು ನ್ಯಾಯಮೂರ್ತಿ ಯೋಗೇಶ್ ಖನ್ನಾ ತಿಳಿಸಿದ್ದಾರೆ.
ಜತೆಗೆ ವಿಚಾರಣೆ ನಡೆಯುವ ಸಮಯದ ಕುರಿತು ಮುಂಚಿತವಾಗಿಯೇ ಅರ್ಜಿದಾರರಿಗೆ ತಿಳಿಸಬೇಕೆಂದು ಇಡಿ ತನಿಖಾ ಅಕಾರಿಗೆ ಸೂಚಿಸಿದ್ದಾರೆ.