ಚೆನ್ನೈ: ಲೋಕಸಭಾ ಚುನಾವಣೆ ಹಾಗೂ ರಾಜ್ಯ ವಿಧಾನಸಭಾ ಉಪಚುನಾವಣೆ ಹಿನ್ನಲೆಯಲ್ಲಿ ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ ರಾಷ್ಟ್ರೀಯ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ.
ಇಂದು ಎರಡೂ ಪಕ್ಷಗಳು ಒಂದು ಒಪ್ಪಂದಕ್ಕೆ ಬಂದಿದ್ದು, ರಾಜ್ಯದಲ್ಲಿ ನಡೆಯುವ ವಿಧಾನಸಭೆ ಉಪ ಚುನಾವಣೆಯ 21 ಸ್ಥಾನಗಳಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ.
21 ಉಪಚುನಾವಣೆ ಸ್ಥಾನಗಳಲ್ಲಿ ಬಿಜೆಪಿ ಎಐಎಡಿಎಂಕೆಗೆ ಬೆಂಬಲ ನೀಡಲಿದೆ. ಇನ್ನು ಲೋಕಸಭೆ ಚುನಾವಣೆಯಲ್ಲಿ ಐದು ಸ್ಥಾನಗಳನ್ನ ಬಿಜೆಪಿಗೆ ಬಿಟ್ಟುಕೊಡಲು ಎಐಎಡಿಎಂಕೆ ನಿರ್ಧರಿಸಿದೆ.
ಈ ಸಂಬಂಧ ಜಂಟಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹಾಗೂ ತಮಿಳುನಾಡು ಉಪ ಮುಖ್ಯಮಂತ್ರಿ ಒ ಪನ್ವೀರಸೆಲ್ವಂ ಮೈತ್ರಿ ನಿರ್ಧಾರವನ್ನ ಪ್ರಕಟಿಸಿದರು.
ಇದೇ ವೇಳೆ ಪನ್ವೀರಸೆಲ್ವಂ ಮಾತನಾಡಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಐದು ಸ್ಥಾನಗಳನ್ನು ಬಿಟ್ಟುಕೊಡಲಾಗುವುದು ಎಂದು ಘೋಷಿಸಿದರು.