ಹೆಚ್ಚುವರಿ ಸಾಲ ನೀಡುವುದನ್ನು ತಡೆಯಲು ಆರ್ ಬಿಐ ವಿಫಲ: ಅರುಣ್ ಜೇಟ್ಲಿ ಟೀಕೆ
October 30, 2018VDವಾಣಿಜ್ಯComments Off on ಹೆಚ್ಚುವರಿ ಸಾಲ ನೀಡುವುದನ್ನು ತಡೆಯಲು ಆರ್ ಬಿಐ ವಿಫಲ: ಅರುಣ್ ಜೇಟ್ಲಿ ಟೀಕೆ
Seen By: 239
ನವದೆಹಲಿ: ಹೆಚ್ಚುವರಿ ಸಾಲವನ್ನು ನೀಡುವುದನ್ನು ತಡೆಯುವಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿಫಲವಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.2008ರಿಂದ 2014ರವರೆಗೆ ವಿವೇಚನೆಯಿಲ್ಲದೆ ಬ್ಯಾಂಕುಗಳು ಗ್ರಾಹಕರಿಗೆ ಸಾಲ ನೀಡುವಾಗ ರಿಸರ್ವ್ ಬ್ಯಾಂಕ್ ಅದಕ್ಕೆ ತಡೆಯೊಡ್ಡದೆ ಬೇರೆ ರೀತಿಯಲ್ಲಿ ನೋಡಿತು ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು.ಕೇಂದ್ರ ಬ್ಯಾಂಕಾದ ಆರ್ ಬಿಐಯ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವುದು ಸಂಭಾವ್ಯ ದುರಂತ ಎಂದು ಕಳೆದ ಶುಕ್ರವಾರ ಬ್ಯಾಂಕಿನ ಉಪ ಗವರ್ನರ್ ವಿರಾಲ್ ಆಚಾರ್ಯ ಭಾಷಣವೊಂದರಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ಇದರಿಂದ ಆರ್ ಬಿಐ ಮತ್ತು ಹಣಕಾಸು ಸಚಿವಾಲಯದ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿದೆ.ತನ್ನ ನೀತಿಯನ್ನು ಸಡಿಲಗೊಳಿಸಿ ಅಧಿಕಾರವನ್ನು ಕುಂಠಿತಗೊಳಿಸುವ ಕೇಂದ್ರ ಸರ್ಕಾರದ ಒತ್ತಡಕ್ಕೆ ಆರ್ ಬಿಐಯ ವಿರೋಧವಿದೆ ಎಂಬುದನ್ನು ವಿರಾಲ್ ಆಚಾರ್ಯರ ಮಾತು ಸೂಚಿಸುತ್ತದೆ.
Seen By: 238 ನವದೆಹಲಿ: ಆರ್ಬಿಐ ಬಂಡವಾಳ ಮೀಸಲು ನಿಧಿಗೆ ಸಂಬಂಧಿಸಿದಂತೆ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಆರೋಪಗಳನ್ನು ಮಾಡಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) [more]