ಕಾಂಗರೂಗಳಿಗೆ ನೀರು ಕುಡಿಸಿದ್ದ ಆಂಗ್ಲರಿಗೆ ಮಣ್ಣುಮುಕ್ಕಿಸಿದ ಟೀಂ ಇಂಡಿಯಾ
July 9, 2018VDಕ್ರೀಡೆComments Off on ಕಾಂಗರೂಗಳಿಗೆ ನೀರು ಕುಡಿಸಿದ್ದ ಆಂಗ್ಲರಿಗೆ ಮಣ್ಣುಮುಕ್ಕಿಸಿದ ಟೀಂ ಇಂಡಿಯಾ
Seen By: 459
ಬ್ರಿಸ್ಟೋಲ್: ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀ ಇಂಡಿಯಾ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಇಂಗ್ಲೆಂಡ್ ತಂಡ ನೀಡಿದ್ದ 199 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಭಾರತ ತಂಡ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರ ಭರ್ಜರಿ ಶತಕದ ನೆರವಿನಿಂದ ಗೆಲುವು ಸಾಧಿಸಿತು.
ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಕಳಪೆ ಫಾರ್ಮ್ ನಿಂದ ಹೊರಬಂದಿದ್ದು ಮಾತ್ರವಲ್ಲದೇ ತಂಡದ ಗೆಲುವಿನಲ್ಲಿ ರೋಹಿತ್ ಶರ್ಮಾ ನಿರ್ಣಾಯಕ ಪಾತ್ರವಹಿಸಿದರು. ರೋಹಿತ್ ಶರ್ಮಾಗೆ ನಾಯಕ ವಿರಾಟ್ ಕೊಹ್ಲಿ (43ರನ್) ಹಾಗೂ ಮಧ್ಯಮ ಕ್ರಮಾಂಕಕ್ಕೆ ಭಡ್ತಿ ಪಡೆದು ಬಂದ ಹಾರ್ದಿಕ್ ಪಾಂಡ್ಯಾ (33 ರನ್) ಉತ್ತಮ ಸಾಥ್ ನೀಡಿದರು.
ಅಂತಿಮವಾಗಿ ಭಾರತ ತಂಡ ಕೇವಲ 18.4 ಓವರ್ ಗಳಲ್ಲಿಯೇ 3 ವಿಕೆಟ್ ನಷ್ಟಕ್ಕೆ 201 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದಿತ್ತು. ಅಲ್ಲದೆ 3 ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿತು.
August 13, 2018VDಕ್ರೀಡೆComments Off on ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳ ಕಳಪೆ ಪ್ರದರ್ಶನಕ್ಕೆ ಕಾರಣಗಳಿವು!
Seen By: 266 ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮೊದಲೆರೆಡು ಟೆಸ್ಟ್ ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿದ್ದು ಭಾರತೀಯ ಬ್ಯಾಟ್ಸ್ಮನ್ಗಳ ಕಳಪೆ ಪ್ರದರ್ಶನ ಪಂದ್ಯಗಳ ಸೋಲಿಗೆ ಪ್ರಮುಖ [more]