ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಕ್ರಿಕೆಟ್ , ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಜಯ

ಮ್ಯಾಂಚೆಸ್ಟರ್ : ಇಂಗ್ಲೆಂಡ್ ವಿರುದ್ಧದ  ಮೊದಲ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ  8 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.
ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್  ಆಯ್ಕೆ ಮಾಡಿಕೊಂಡರು.  ನಿಗದಿತ 20 ಓವರ್ ಗಳಲ್ಲಿ ಇಂಗ್ಲೆಂಡ್ ತಂಡ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ, ಭಾರತ ಗೆಲ್ಲಲು 160ರನ್ ಗಳ ಗುರಿ ನೀಡಿತು.
ಈ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ 18. 2 ಓವರ್ ಗಳಲ್ಲಿ  2 ವಿಕೆಟ್ ನಷ್ಟಕ್ಕೆ 163 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು.
ಆರಂಭಿಕ ಆಟಗಾರ ಶಿಖರ್ ಧವನ್ ಕೇವಲ 4 ರನ್ ಗಳಿಸುವಷ್ಟರಲ್ಲಿ ಔಟಾಗುವ ಮೂಲಕ ಆರಂಭಿಕ ಆಘಾತ ಅನುಭವಿಸಿತು. ನಂತರ ಜೊತೆಯಾದ ಕೆ. ಎಲ್ . ರಾಹುಲ್ (101) ಹಾಗೂ ರೋಹಿತ್ ಶರ್ಮಾ 30 ಎಸೆತಗಳಲ್ಲಿ  32 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು.
ರೋಹಿತ್ ಶರ್ಮಾ  ಫೆವಿಲಿಯನ್ ನಿಂದ ನಿರ್ಗಮಿಸಿದ ಬಳಿಕ ಅವರ  ನಾಯಕ  ವಿರಾಟ್ ಕೊಹ್ಲಿ ಜೊತೆಗೂಡಿದ ಕನ್ನಡಿಗ  ಕೆ.ಎಲ್. ರಾಹುಲ್  ಆಕರ್ಷಕ ಶತಕ ಬಾರಿಸಿದರು. ನಾಯಕ ವಿರಾಟ್ ಕೊಹ್ಲಿ  20 ರನ್ ಗಳಿಸಿದರು. ಈ ಮೂಲಕ   ಟಿ-20ಯಲ್ಲಿ 2 ಸಾವಿರ ರನ್ ಪೂರೈಸಿದ ಖ್ಯಾತಿಗೂ ವಿರಾಟ್ ಕೊಹ್ಲಿ ಪಾತ್ರರಾದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ