ವಿಶ್ವಕಪ್​ಗೂ ಮುನ್ನ ಭಾರತಕ್ಕೆ ಮಧ್ಯಮ ಕ್ರಮಾಂಕದೇ ಚಿಂತೆ… ಆಡಿರುವ ಏಳು ಆಟಗಾರರಲ್ಲಿ ಆರು ಮಂದಿ ಫೇಲ್​!

ಹೌದು, ಏಷ್ಯಾಕಪ್​​ನಲ್ಲಿ ಟೀಂ ಇಂಡಿಯಾ ಟಾಪ್​ ಆರ್ಡರ್​ ಬ್ಯಾಟ್ಸಮನ್​ಗಳು ಅದ್ಭುತ ಪ್ರದರ್ಶನ ನೀಡಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಫೈನಲ್​ ಪಂದ್ಯದಲ್ಲಿ ಟಾಪ್​ ಆರ್ಡರ್​ ಬ್ಯಾಟ್ಸಮನ್​ ಕೈಕೊಟ್ಟಾಗ ಮಧ್ಯಮ ಕ್ರಮಾಂಕ  ರನ್​ಗಳಿಸಲು ಹರಸಾಹಸ ಪಟ್ಟಿರುವುದು ಎಲ್ಲರಿಗೂ ತಿಳಿದಿದೆ.

ಇನ್ನು ಕಳೆದ 2017ರಿಂದ ಟೀಂ ಇಂಡಿಯಾ ಆಡಿರುವ 10 ಏಕದಿನ ಸರಣಿಗಳಲ್ಲಿ ತಂಡ ಗಳಿಸಿರುವ ಒಟ್ಟು ರನ್​ 11,241ರನ್​. ಇದರಲ್ಲಿ ಮಧ್ಯಮ ಕ್ರಮಾಂಕ ಅಂದರೆ 4,5 ಹಾಗೂ 6ನೇ ಸ್ಥಾನದಲ್ಲಿ ಬ್ಯಾಟಿಂಗ್​ ಮಾಡುವ ಆಟಗಾರರುಗಳಿಸಿದ್ದು ಕೇವಲ 887ರನ್​.

ಐದು ವರ್ಷಗಳಿಂದ ಮಧ್ಯಮ ಕ್ರಮಾಂಕದಲ್ಲಿ ಮನೀಷ್​ ಪಾಂಡೆ, ಯುವರಾಜ್​ ಸಿಂಗ್​ ಅಂಬಟಿ ರಾಯುಡು, ಕೆ.ಎಲ್.​ ರಾಹುಲ್​, ದಿನೇಶ್​ ಕಾರ್ತಿಕ್​,ಸುರೇಶ್​ ರೈನಾ ಹಾಗೂ ರಹಾನೆಗೆ 4ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲು ಅವಕಾಶ ನೀಡಿದ್ದರೂ ಅವರ ಸ್ಥಾನ ಖಾಯಂಗೊಂಡಿಲ್ಲ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಳೆದ ಕೆಲ ವರ್ಷಗಳಿಂದ ಧೋನಿ ನಿರಂತರವಾಗಿ ಬ್ಯಾಟ್​ ಬೀಸುತ್ತಿದ್ದರೂ ಅವರ ಬ್ಯಾಟ್​ ಮಂಕಾಗಿದೆ.  ಕಳೆದ 17 ಏಕದಿನ ಪಂದ್ಯಗಳಲ್ಲಿ ಅವರು ಒಂದೇ ಒಂದು ಅರ್ಧಶತಕ ಗಳಿಸಿಲ್ಲ. ಈ ಹಿಂದೆ 2017 ಚಾಂಪಿಯನ್ಸ್​ ಟ್ರೋಫಿಯಲ್ಲಿ ಅರ್ಧಶತಕ ಗಳಿಸಿದ್ದರು.

ಇನ್ನು ಐಪಿಎಲ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅಂಬಟಿ ರಾಯುಡು ಏಷ್ಯಾಕಪ್​ನ ಎರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ಕಳೆದ 21 ತಿಂಗಳಲ್ಲಿ ಮಧ್ಯಮ ಕ್ರಮಾಂಕದ ಕೇವಲ ಮೂವರು ಆಟಗಾರರು ಶತಕ ಸಿಡಿಸಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿ ವೇಳೆ ಯುವರಾಜ್​ ಸಿಂಗ್​, ಧೋನಿ ಹಾಗೂ ಕೇಧಾರ್​ ಜಾಧವ್​ ಮಾತ್ರ ಶತಕ ಸಿಡಿಸಿ ಮಿಂಚಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸಮನ್​ಗಳ ರನ್​
ಯುವರಾಜ್​ ಸಿಂಗ್​ 11 ಪಂದ್ಯ, 372 ರನ್​. ಮನೀಷ್​ ಪಾಂಡೆ 11 ಪಂದ್ಯ 179ರನ್​. ರಹಾನೆ 6 ಪಂದ್ಯ 140ರನ್​. ದಿನೇಶ್​ ಕಾರ್ತಿಕ್​ 15 ಪಂದ್ಯ 350ರನ್​. ಕೆಎಲ್​ ರಾಹುಲ್​  5 ಪಂದ್ಯ 37ರನ್​. ಸುರೇಶ್ ರೈನಾ 03 ಪಂದ್ಯ 47ರನ್​. ಇನ್ನು ಮಹೇಂದ್ರ ಸಿಂಗ್​ ಧೋನಿ 44 ಪಂದ್ಯಗಳಿಂದ 1013ರನ್​ಗಳಿಕೆ ಮಾಡಿದ್ದಾರೆ.

ಇನ್ನು ವಿಶ್ವಕಪ್​ಗೆ ಟೀಂ ಇಂಡಿಯಾ 18 ಸದಸ್ಯರನ್ನೊಳಗೊಂಡ ಟೀಂ ಇಂಡಿಯಾ ಪ್ರಕಟ ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ನಾಲ್ವರು ಬ್ಯಾಟ್ಸ್​ಮನ್​, ಇಬ್ಬರು ವಿಕೆಟ್​ ಕೀಪರ್​, ಮೂವರು ಆಲ್​ರೌಂಡರ್​,ಇಬ್ಬರು ಸ್ಪಿನ್ನರ್​ ಹಾಗೂ ಐವರು ಬೌಲರ್​ಗಳಿಗೆ ತಂಡದಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ.

ಯಾರಿಗೆಲ್ಲ ಸ್ಥಾನ? 
ವಿರಾಟ್​ ಕೊಹ್ಲಿ(ಕ್ಯಾಪ್ಟನ್​), ರೋಹಿತ್​ ಶರ್ಮಾ, ಶಿಖರ್​ ಧವನ್​, ಕೆ.ಎಲ್.​ ರಾಹುಲ್​, ಅಂಬಟಿ ರಾಯುಡು, ಮನೀಷ್​ ಪಾಂಡೆ, ದಿನೇಶ್​ ಕಾರ್ತಿಕ್(ವಿ.ಕೀ), ಎಂಎಸ್​ ಧೋನಿ(ವಿ.ಕೀ), ಕೇದಾರ್​ ಜಾಧವ್​, ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ, ಕುಲ್​ದೀಪ್​ ಯಾದವ್​,ಯಜುವೇಂದ್ರ ಚಹಾಲ್​,ಭುವನೇಶ್ವರ್​ ಕುಮಾರ್​,ಜಸ್​ಪ್ರೀತ್​ ಬೂಮ್ರಾ, ಖಲೀಲ್​ ಅಹ್ಮದ್​, ಶಾರ್ದೂಲ್​ ಠಾಕೂರ್​, ಮೊಹಮ್ಮದ್​ ಶಮಿ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ