ಗೆಲುವಿನ  ಹೊಸ್ತಿಲಲ್ಲಿ  ಟೀಂ ಇಂಡಿಯಾ

NOTTINGHAM, ENGLAND - AUGUST 21 : Jasprit Bumrah celebrates after dismissing Jonny Bairstow of England during the fourth day of the 3rd Specsavers Test Match between England and India at Trent Bridge on August 21, 2018 in Nottingham England. (Photo by Philip Brown/Getty Images)

ನಾಟಿಂಗ್ಯಾಮ್: ತಂಡದ  ವೇಗಿಗಳ  ಅಮೋಘ  ಪ್ರದರ್ಶನದ ನೆರವಿನಿಂದ  ಟ್ರೆಂಟ್ ಬ್ರಿಡ್ಜ್  ಟೆಸ್ಟ್  ಪಂದ್ಯದಲ್ಲಿ    ಆಂಗ್ಲರ ವಿರುದ್ಧ ಬಿಗಿ ಹಿಡಿತ ಸಾಧಿಸಿರುವ ಟೀಂ ಇಂಡಿಯಾ  ಗೆಲುವಿನ ಹೊಸ್ತಿಲಲ್ಲಿದೆ. ಸರಣಿಯಲ್ಲಿ  ಮೊದಲ  ಗೆಲುವು ದಾಖಲಿಸಲು  ಕೊಹ್ಲಿ ಪಡೆಗೆ ಇನ್ನು  ಒಂದು ವಿಕೆಟ್  ಬೇಕಿದೆ. ಇಂಗ್ಲೆಂಡ್​ಗೆ  ಗೆಲ್ಲಲು  208ರನ್​ಗಳ ಅಗತ್ಯವಿದೆ.

ದ್ವಿತೀಯ  ಇನ್ನಿಂಗ್ಸ್​ ನಲ್ಲಿ  521 ರನ್​ಗಳ  ಗುರಿ  ಬೆನ್ನತ್ತಿದ  ಇಂಗ್ಲಂಡ್​ ತಂಡ  ನಾಲ್ಕನೆ ದಿನದಾಟದ ಪಂದ್ಯದ ಆರಂಭದಲ್ಲೆ  ವೇಗಿಗಳ ದಾಳಿಗೆ ತತ್ತರಿಸಿ ಹೋಯ್ತು.  ಆರಂಭಿಕ ಬ್ಯಾಟ್ಸ್ ಮನ್​ಗಳಾದ  ಆಲೆಸ್ಟರ್ ಕುಕ್  (17), ಜೆನ್ನಿಂಗ್ಸ್ 13, ಜೋ ರೂಟ್ (13), ಒಲಿವರ್ ಪೋಪ್ (16) ಬೇಗನೆ ವಿಕೆಟ್  ಒಪ್ಪಿಸಿ  ಪೆವಲಿಯನ್ ಸೇರಿದ್ರು.

62 ರನ್​ಗೆ  ನಾಲ್ಕು ವಿಕೆಟ್  ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಸ್ಪೋಟಕ ಬ್ಯಾಟ್ಸ್​ಮನ್​ ಜೋಸ್ ಬಟ್ಲರ್  ಮತ್ತು  ಆಲ್​ರೌಂಡರ್ ಬೆನ್​ಸ್ಟೋಕಸ್ ಆಸರೆಯಾದರು. ಈ ಜೋಡಿ ಐದನೇ ವಿಕೆಟ್​ಗೆ  169ರನ್​ಗಳ ಭರ್ಜರಿ ಜೊತೆಯಾಟ ನೀಡಿತು. ಭೋಜನ ವಿರಾಮದ ನಂತರ ಅಬ್ಬರದ  ಬ್ಯಾಟಿಂಗ್ ಮಾಡಿದ ಜೋ ರೂಟ್  ಶತಕ ಬಾರಿಸಿ ಸಂಭ್ರಮಿಸಿದ್ರು.

ಆದರೆ  81ನೇ ಓವರ್​ ನಂತರ ಬಂದ  ಹೊಸ ಚೆಂಡಿನೊಂದಿಗೆ ದಾಳಿಗಿಳಿದ ಜಸ್​ಪ್ರೀತ್  ಬೂಮ್ರಾ ಬಟ್ಲರ್​(106),  ಜಾನಿ ಭೈರ್​ಸ್ಟೋ(0), ಕ್ರಿಸ್​ ವೋಕ್ಸ್ (4)ಮತ್ತು  ಸ್ಟುವರ್ಟ್​ ಬ್ರಾಡ್​ (20) ಅವರನ್ನ  ಬೇಗನೆ ಔಟ್ ಮಾಡಿ  ತಂಡದ ಗೆಲುವನ್ನ ಖಚಿತಪಡಿಸಿದ್ರು.

ದಿನದಾಟದ ಅಂತ್ಯದಲ್ಲಿ  ಆದಿಲ್​ ರಶೀದ್ ಅಜೇಯ 30 ಮತ್ತು  ಜೇಮ್ಸ್ ಆ್ಯಂಡರ್ಸನ್  ಅಜೇಯ 8 ರನ್​ಗಳಿಸಿ  ಐದನೇ ದಿನಕ್ಕೆ   ಕ್ರಿಸ್​ ಕಾಯ್ದುಕೊಂಡರು. ಸೊಗಸಾದ ಬೌಲಿಂಗ್  ಮಾಡಿದ ಜಸ್​ಪ್ರಿತ್  ಬೂಮ್ರಾ ಐದು ವಿಕೆಟ್  ಪಡೆದು ಮಿಂಚಿದ್ರು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್   311/9

ಜೋಸ್ ಬಟ್ಲರ್  106, ಬೆನ್​ಸ್ಟೋಕ್ಸ್  62

ಬೂಮ್ರಾ 85ಕ್ಕೆ5, ಇಶಾಂತ್​ ಶರ್ಮಾ 70ಕ್ಕೆ 2

ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್  352/7 ಡಿಕ್ಲೇರ್

ವಿರಾಟ್ ಕೊಹ್ಲಿ  103, ಹಾರ್ದಿಕ್  ಪಾಂಡ್ಯ 52

ಆದಿಲ್​ ರಶೀದ್​ 101ಕ್ಕೆ3, ಸ್ಟೀಕ್ಸ್  68ಕ್ಕೆ 2

 

 

 

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ