ಕಬ್ಬಡಿ ಮಾಸ್ಟರ್ಸ್ ಲೀಗ್: ಪಾಕಿಸ್ತಾನವನ್ನು ಧೂಳಿಪಟ ಮಾಡಿದ ಭಾರತ

ದುಬೈ: ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್ ಆರು ದೇಶಗಳ ನಡುವಿನ ಕಬಡ್ಡಿ ಮಾಸ್ಟರ್ಸ್ ದುಬೈ ಲೀಗ್ ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತ ಧೂಳಿಪಟ ಮಾಡಿದೆ.
ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಸಹಯೋಗದೊಂದಿಗೆ ಮತ್ತು ದುಬೈ ಸ್ಪೋರ್ಟ್ಸ್ ಕೌನ್ಸಿಲ್ ನ ಸಹಕಾರದೊಂದಿಗೆ ಆರಂಭಗೊಂಡಿರುವ ಲೀಗ್ ನ ಉದ್ಘಾಟನಾ ಪಂದ್ಯದಲ್ಲಿ ಭಾರ ಪಾಕಿಸ್ತಾನ ವಿರುದ್ಧ 36-20 ಅಂತರದಿಂದ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಭಾರತ ಪರ ಸ್ಟಾರ್ ರೈಡರ್ ನಾಯಕ ಅಜಯ್ ಠಾಕೂರ್ 16 ರೈಡ್ ಪಾಯಿಂಟ್, ರೋಹಿತ್ ಕುಮಾರ್ 9 ಪಾಯಿಂಟ್ ಪಡೆದಿದ್ದಾರೆ.
9 ದಿನ ನಡೆಯಲಿರುವ ಈ ಟೂರ್ನಿಯಲ್ಲಿ ವಿಶ್ವದ ಆರು ರಾಷ್ಟ್ರಗಳು ಭಾಗವಹಿಸಿವೆ. ಇಂದಿನ ಪಂದ್ಯ ವೀಕ್ಷಣೆಗಾಗಿ ಬಾಲಿವುಡ್ ಸ್ಟಾರ್ ನಟ ಅಭಿಶೇಕ್ ಬಚ್ಚನ್, ಕ್ರೀಡಾ ಸಚಿವ ರಾಜವರ್ಧನ ಸಿಂಗ್ ರಾಥೋಡ್ ಸೇರದಂತೆ ಅನೇಕರು ಆಗಮಿಸಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ