ಬಿಜೆಪಿ ಸೋಲಿಸಲು ಕಾಂಗ್ರೆಸ್ ಯಾವುದಕ್ಕೂ ಸಿದ್ಧ :ಪ್ರಿಯಾಂಕಾ

ಲಖನೌ:ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿಯನ್ನು ಅಕಾರಕ್ಕೆ ಬರದಂತೆ ಮಾಡಲು ಕಾಂಗ್ರೆಸ್ ಏನು ಮಾಡಲೂ ಸಿದ್ಧವಿದೆ ಎಂಬುದಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಹೇಳಿಕೊಂಡಿದ್ದಾರೆ .ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸ್ವಂತಬಲದಲ್ಲಿ ಸ್ರ್ಪಸಲಿದೆ ಎಂದು ಹೇಳಿಕೆ ನೀಡಿದ್ದು, ಇದೀಗ ಪ್ರಿಯಾಂಕಾ ಹೇಳಿಕೆ ಕುತೂಹಲ ಮೂಡಿಸಿದೆ.

ನಾವು “ಮುಚ್ಚಿದ ಮನಸ್ಸು” ಹೊಂದಿಲ್ಲ. 2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಲುವಿನ ಬಗ್ಗೆ ಈಗಲೇ ಮೈತ್ರಿ ಬಗ್ಗೆ ಏನನ್ನೂ ಹೇಳಲಾಗದು. ಆದರೂ ಬಿಜೆಪಿಯನ್ನು ಸೋಲಿಸಬೇಕೆಂಬುದು ನಮ್ಮ ಮೊದಲ ಆದ್ಯತೆಯಾಗಿದ್ದು, ಇದಕ್ಕೆ ನಾವು ಏನು ಮಾಡಲೂ ಸಿದ್ಧರಿದ್ದೇವೆ ಎಂದಾಕೆ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿನ ಪ್ರತಿ ಘಟನೆಯನ್ನೂ ಮುಖ್ಯಮಂತ್ರಿ ಯೋಗಿ, ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ವಿರುದ್ಧವಾಗಿ ಬಿಂಬಿಸಿ ಪ್ರಿಯಾಂಕಾ ನೇತೃತ್ವದಲ್ಲಿ ಪ್ರಚಾರ ನಡೆಸುವ ಮೂಲಕ ಕಾಂಗ್ರೆಸ್‍ಗೆ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವುದಿಲ್ಲಿ ಉಲ್ಲೇಖನೀಯ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ