ಹೊಸದಿಲ್ಲಿ: ದೇಶಾದ್ಯಂತ 1500ಕ್ಕೂ ಹೆಚ್ಚಿನ ಆಮ್ಲಜನಕ ಉತ್ಪಾದನಾ ಘಟಕಗಳು ಸದ್ಯದಲ್ಲೇ ಸ್ಥಾಪನೆಯಾಗಲಿದ್ದು, ಇವುಗಳ ನಿರ್ಮಾಣಕ್ಕೆ ಪಿಎಂ ಕೇರ್ ನಿ, ಸಾರ್ವಜನಿಕ ವಲಯದ ಘಟಕಗಳು, ನಾನಾ ಸಚಿವಾಲಯಗಳು ಅನುದಾನ ನೀಡುತ್ತಿವೆ ಎಂದು ಶುಕ್ರವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಸಭೆಯಲ್ಲಿ ತಿಳಿಸಲಾಗಿದೆ.
ದೇಶಾದ್ಯಂತ ಆಮ್ಲಜನಕ ಉತ್ಪಾದನೆ, ಪೂರೈಕೆ ಮತ್ತು ಲಭ್ಯತೆ ಹಾಗೂ ಘಟಕಗಳ ಸ್ಥಾಪನೆ ಪ್ರಗತಿ ಕುರಿತು ಮೋದಿಯವರ ನೇತೃತ್ವದಲ್ಲಿ ಉನ್ನತ ಮಟ್ಟದ ಪರಾಮರ್ಶೆ ಸಭೆ ನಡೆಯಿತು.
ಪಿಎಂ ಕೇರ್ ನಿಂದ ಅನುದಾನ ಪಡೆದಿರುವ ಆಮ್ಲಜನಕ ಉತ್ಪಾದನಾ ಘಟಕಗಳು ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪನೆಯಾಗಲಿವೆ. ಈ ನಿಯ ಅನುದಾನ ಪಡೆದ ಎಲ್ಲ ಘಟಕಗಳು ಕಾರ್ಯಾಚರಣೆ ಆರಂಭಿಸಿದರೆ 4 ಲಕ್ಷಕ್ಕಿಂತ ಹೆಚ್ಚನ ಆಕ್ಸಿಜನ್ ಬೆಡ್ಗಳಿಗೆ ಆಮ್ಲಜನಕ ಪೂರೈಸಲಿವೆ ಎಂದು ಅಕಾರಿಗಳು ಮಾಹಿತಿ ನೀಡಿದರು. ಎಲ್ಲ ಘಟಕಗಳು ಆದಷ್ಟು ಬೇಗ ಕಾರ್ಯಾಚರಣೆ ಆರಂಭಿಸುವುದನ್ನು ಖಾತ್ರಿಪಡಿಸಬೇಕು.
ರಾಜ್ಯ ಸರ್ಕಾರಗಳ ಜತೆ ನಿಕಟ ಸಂಪರ್ಕ ಹೊಂದಿ, ಕಾರ್ಯಾಚರಣೆ ನಡೆಸುವುದನ್ನು ಖಚಿತಪಡಿಸಬೇಕು ಎಂದು ಮೋದಿಯವರು ಅಕಾರಿಗಳಿಗೆ ಸೂಚಿಸಿದರು.
ಆಸ್ಪತ್ರೆ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ ಕುರಿತ ಪ್ರಧಾನಿಯವರ ಪ್ರಶ್ನೆಗೆ ಉತ್ತರಿಸಿದ ಅಕಾರಿಗಳು, ಆರೋಗ್ಯ ಕ್ಷೇತ್ರದ ತಜ್ಞರು ಈಗಾಗಲೇ ತರಬೇತಿ ಮಾದರಿ ಸಿದ್ಧಪಡಿಸಿದ್ದಾರೆ. ದೇಶಾದ್ಯಂತ ಸುಮಾರು 8 ಸಾವಿರ ಸಿಬ್ಬಂದಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಆಮ್ಲಜನಕ ಘಟಕಗಳ ಕಾರ್ಯದಕ್ಷತೆ ಮತ್ತು ಕಾರ್ಯನಿರ್ವಹಣೆ ಮೇಲೆ ನಿಗಾ ಇಡಲು ಐಒಟಿ ತಂತ್ರಜ್ಞಾನ ಅಳವಡಿಸುವಂತೆ ಪ್ರಧಾನ ಮಂತ್ರಿ ಅವರು ಸೂಚಿಸಿದ್ದಾರೆ.