ಬೆಂಗಳೂರು: ರಾಷ್ಟ್ರೀಯತೆ ನಮ್ಮ ಸಂಸ್ಕøತಿ, ನಮ್ಮ ನಾಗರಿಕತೆ. ಇದರಲ್ಲಿ ಯಾವ ಭಾರತೀಯರಿಗೂ ಗೊಂದಲವಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ರಾಮ್ ಮಾಧವ್ ಪ್ರತಿಪಾದಿಸಿದರು.
ತಮ್ಮ ಪುಸ್ತಕವಾದ ಬಿಕಾಸ್ ಇಂಡಿಯಾ ಕಮ್ಸ್ ಫಸ್ಟ್ ಕುರಿತು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಬಲಿಷ್ಠ ಭಾರತ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೊಘಲರು ಕ್ಷಾತ್ರ ಶಕ್ತಿಯ ಮೂಲಕ ದೇಶವನ್ನಾಳಿದರು. ಬ್ರಿಟಿಷರು ನಮ್ಮ ಬುದ್ಧಿಶಕ್ತಿಯನ್ನೇ ಆಳಿದರು. ನಮ್ಮಲ್ಲಿರುವ ಅನಕ್ಷರಸ್ಥರು ಕೂಡ ಮೊದಲಿಗೆ ಗಂಗಾ ಪ್ರಾರ್ಥನೆ, ತುಳಸಿ ಪೂಜೆ, ಗೋಪೂಜೆಯೊಂದಿಗೆ ಲೋಕ ಕಲ್ಯಾಣದ ಬಗ್ಗೆ ಚಿಂತಿಸುತ್ತಾರೆ. ಸರ್ವೇ ಜನಾಃ ಸುಖಿನೋ ಭವಂತು ಎಂಬ ಭಾವವನ್ನು ಮನಸ್ಸಿನಲ್ಲಿ ತುಂಬಿಕೊಂಡಿದ್ದಾರೆ. ಇದು ರಾಷ್ಟ್ರೀಯತೆ. ಈ ವಿಚಾರದಲ್ಲಿ ಭಾರತೀಯರ್ಯಾರಿಗೂ ಗೊಂದಲಗಳಿಲ್ಲ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಬೈಬಲ್ ಮೇಲೆ ಪ್ರಮಾಣ ಮಾಡಿದರೆ ಒಪ್ಪುವ ಜನರು, ನಮ್ಮದೇ ಪ್ರಧಾನಿ ಮೋದಿಯವರು ದೇಶಕ್ಕಾಗಿ ದೇವರ ಮುಂದೆ ಪ್ರಾರ್ಥಿಸಿದರೆ ಒಪ್ಪುವುದಿಲ್ಲ. ಅಂತಹವರಿಗೆ ಮಾತ್ರ ರಾಷ್ಟ್ರೀಯತೆಯ ಗೊಂದಲ ಇದೆ ಎಂದರು.
ಹಿಂದುತ್ವ ಹೇಳುವುದೇ ಲೋಕಾಃ ಸಮಸ್ತಾಃ ಸುಖಿನೋ ಭವಂತು ಎಂಬುದನ್ನು. ಇದನ್ನು ಮೂಲಭೂತವಾದ ಎನ್ನುವುದಾದರೆ, ನಾನೂ ಮೂಲಭೂತವಾದಿ. ಧರ್ಮ ಎಂಬುದು ಕೇವಲ ಪವಿತ್ರತೆಯ ಸಂಕೇತವಲ್ಲ. ನಮ್ಮ ಪೂರ್ವಿಕರು ಅನುಭವ ಧಾರೆ ಎರೆದು ಕೊಟ್ಟಿರುವ ವ್ಯವಸ್ಥೆ. ನಮ್ಮ ಸಂಸ್ಕøತಿ ಮತ್ತು ನಾಗರಿಕತೆಗಳನ್ನು ಧರ್ಮವೇ ಕೊಟ್ಟಿರುವುದು. ಮಹಾತ್ಮ ಗಾಂೀಜಿ ಕೂಡ ರಾಮರಾಜ್ಯದ ಕನಸು ಕಂಡಿದ್ದರು. ರಾಮ ನಮ್ಮ ರಾಷ್ಟ್ರದ ಅಸ್ತಿತ್ವವೂ ಹೌದು. ಹೀಗಾಗಿಯೇ ಎಲ್ಲ ಭೇದ ಮರೆತು ಎಲ್ಲರೂ ರಾಮಮಂದಿರಕ್ಕಾಗಿ ಸಮರ್ಪಣೆ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿದರು.
ಮಣಿಪಾಲ್ ಜಾಗತಿಕ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಟಿ.ವಿ. ಮೋಹನದಾಸ್ ಪೈ ಹಾಗೂ ಸಾಮಾಜಿಕ ಜಾಲತಾಣ ವಿಶ್ಲೇಷಕ ಎಸ್.ಕಿರಣಕುಮಾರ್ ಸಂವಾದ ನಡೆಸಿಕೊಟ್ಟರು.