ಬೆಂಗಳೂರು: ಪ್ರಥಮ ದರ್ಜೆ ಸಹಾಯಕರ (ಎಫ್ಡಿಎ) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಿಂದೆ ಕೆಪಿಎಸ್ಸಿ ಸಿಬ್ಬಂದಿಯ ಪಾತ್ರ ಇದೆ. ಇದಕ್ಕೆ ಪುಷ್ಟಿ ನೀಡುವ ಮಾಹಿತಿಯನ್ನು ಸಿಸಿಬಿ ಪೊಲೀಸರು ಸಂಗ್ರಹಿಸಿದ್ದು, ಒಂದೆರಡು ದಿನಗಳಲ್ಲಿ ಸೋರಿಕೆ ಸೂತ್ರಧಾರಿಗಳ ಕೈಗೆ ಬೇಡಿ ಬೀಳಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಸಿದಂತೆ ಭಾನುವಾರ ಸಿಸಿಬಿ ಪೊಲೀಸರು ಎಂಟು ಮಂದಿಯನ್ನು ಬಂಸಿದ್ದು, ಒಟ್ಟಾರೆ ಬಂತರ ಸಂಖ್ಯೆ 14ಕ್ಕೇರಿದೆ. ಪ್ರಕರಣದ ಗಂಭೀರತೆ ಅರಿತು ತನಿಖೆಗೆ ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ರಾಜ್ಯದ ನಾನಾ ಕಡೆಗಳಿಗೆ ತೆರಳಿದ್ದು, ಶಂಕಿತ ಆರೋಪಿಗಳ ಹಿಂದೆ ಬಿದ್ದಿದೆ. ಇವರಲ್ಲಿ ಆಯೋಗದ 2-3 ಮಂದಿ ಸಿಬ್ಬಂದಿ ಹಾಗೂ ಪರೀಕ್ಷೆ ಬರೆಯಲಿದ್ದ ಕೆಲ ಅಭ್ಯರ್ಥಿಗಳು ಸೇರಿದ್ದಾರೆ ಎಂಬ ಶಂಕೆ ಪೊಲೀಸರಿಗೆ ಸಿಕ್ಕಿದೆ.
ಈಗಾಗಲೇ ಬಂತನಾಗಿರುವ ರಮೇಶ್ನಿಂದ ಮಾಹಿತಿ ಸಂಗ್ರಹಿಸಿದ ಪೊಲೀಸರು ಪ್ರಶ್ನೆಪತ್ರಿಕೆಗಳನ್ನು ಯಾವ ಜಿಲ್ಲೆಗಳಿಗೆ ರವಾನಿಸಲಾಗಿದೆ ಎಂಬುದರ ಮಾಹಿತಿ ಪಡೆದಿದ್ದಾರೆ. ಇದನ್ನಾಧರಿಸಿ ಇತರ ಜಿಲ್ಲೆಗಳಲ್ಲಿ ಶೋಧ ನಡೆಸಲಾಗುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದ ಮೂರ್ನಾಲ್ಕು ಜಿಲ್ಲೆಗಳಲ್ಲೇ ಆರೋಪಿಗಳು ತಲೆತಪ್ಪಿಸಿಕೊಂಡಿದ್ದಾರೆ. ಇವರ ಬೆನ್ನು ಹತ್ತಿರುವ ತನಿಖಾ ತಂಡ ಪ್ರಮುಖ ಆರೋಪಿ ರಮೇಶ್ ಸೆರೆಗೆ ಬಲೆ ಬೀಸಿದ್ದಾರೆ.
ಆರೋಪಿಗಳನ್ನು ಬಂಸಿದ್ದೇ ರೋಚಕ
ಆರೋಪಿ ಚಂದ್ರು ಉಳ್ಳಾಲದ ಅಪಾರ್ಟ್ಮೆಂಟ್ನಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದು ತಕ್ಷಣ ಕಾರ್ಯಪ್ರವೃತ್ತರಾದ ಸಿಸಿಬಿ ಪೊಲೀಸರು ಯಾವ ಮಹಡಿ ಎಂದು ಗೊತ್ತಾಗದೇ ಆರೋಪಿಗಾಗಿ 2 ಗಂಟೆಗಳ ಕಾಲ ಕಾದು ಕುಳಿತಿದ್ದರು. ಈ ವೇಳೆ ಹೊರ ಹೋಗಿದ್ದ ಚಂದ್ರು ಮನೆಗೆ ಬಂದಾಗ ಯಾವ ಪ್ಲ್ಯಾಟ್ ಎಂಬುದು ಗೊತ್ತಾಗಿದೆ. ಮನೆಗೆ ಹೋಗಿದ್ದ ಚಂದ್ರುನನ್ನು ಬಲೆಗೆ ಬೀಳಿಸಿಕೊಳ್ಳಲು ಯೋಜನೆ ರೂಪಿಸಿದ ಪೊಲೀಸರು ಮನೆ ಬಾಗಿಲು ಬಡಿದಿದ್ದಾರೆ. ಬಾಗಿಲು ತೆರೆದ ಆರೋಪಿಯ ತಾಯಿಗೆ ನಿಮ್ಮ ಮಗ ಚಂದ್ರು ಮಾರ್ಗ ಮಧ್ಯೆ ಗಾಡಿಗೆ ಗುದ್ದಿ ಬಂದಿದ್ದಾನೆ. ಹೀಗಾಗಿ ಬೈಕ್ ಡ್ಯಾಮೇಜ್ ಆಗಿದೆ ಎಂದು ಹೇಳಿ ಮನೆ ಪ್ರವೇಶಿಸಿದ್ದಾರೆ. ಮನೆಗೆ ನಿಮ್ಮ ಮಗ ಬಂದಿರುವುದನ್ನು ನಾವು ನೋಡಿದ್ದೇವೆ ಎಂದು ಹೇಳಿ ಕೊಠಡಿ ಒಳಗೆ ಹೋದಾಗ ಪ್ರಶ್ನೆಪತ್ರಿಕೆ ಸಮೇತ ಚಂದ್ರು ಸಿಕ್ಕಿಬಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆಯೋಗಕ್ಕೆ ಅಭ್ಯರ್ಥಿಗಳ ಹಿಡಿಶಾಪ:
ಪರೀಕ್ಷೆ ಮುನ್ನಾ ದಿನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರೂ, ಸಾವಿರಾರು ಅಭ್ಯರ್ಥಿಗಳು ತಾವು ವಾಸವಿದ್ದ ಸ್ಥಳದಿಂದ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಿಗೆ ಶನಿವಾರ ಸಂಜೆಯೇ ಪ್ರಯಾಣ ಬೆಳೆಸಿದ್ದರು. ಇವರಲ್ಲಿ ಕೆಲವರು ಮುಂಚಿತವಾಗಿಯೆ ಪರೀಕ್ಷಾ ಕೇಂದ್ರದ ಸ್ಥಳ ನೋಡಿ ಅದೇ ಊರುಗಳಲ್ಲಿ ರಾತ್ರಿ ಕಳೆದಿದ್ದರು. ಕೊನೆ ಗಳಿಗೆಯಲ್ಲಿ ಪರೀಕ್ಷೆ ರದ್ದಾದ ಕಾರಣ ಅವರೆಲ್ಲರೂ ವಾಪಸ್ ತವರಿಗೆ ಹಿಂದಿರುಗಬೇಕಾಯಿತು. ಅಭ್ಯರ್ಥಿಗಳಲ್ಲಿ ಬಹುತೇಕ ಮಂದಿ ಬಡ, ಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದರು. ಇತ್ತ ಪರೀಕ್ಷೆ ಬರೆಯದೆ ಹತಾಸೆಗೆ ಒಳಗಾದ ಅಭ್ಯರ್ಥಿಗಳು ಆಯೋಗದ ವಿರುದ್ಧ ತೀವ್ರ ಅಸಮಾಧಾನವನ್ನು ಹೊರಹಾಕಿದರು. ಕೆಲವರು ಕೆಪಿಎಸ್ಸಿಗೆ ಹಿಡಿಶಾಪ ಹಾಕಿ ಮನೆಗೆ ಹಿಂದಿರುಗಿದ ಪ್ರಸಂಗವೂ ನಡೆಯಿತು.