ಭಾವಚಿತ್ರ ತೆಗೆಯಬೇಕೆಂದು ಸಭಾಧ್ಯಕ್ಷರಿಗೆ ಕಾಂಗ್ರೆಸ ಪತ್ರ ಉ.ಪ್ರ. ಮೇಲ್ಮನೆಯಲ್ಲಿ ಸಾವರ್ಕರ್ ಚಿತ್ರ

ಲಖನೌ: ಉತ್ತರ ಪ್ರದೇಶದ ವಿಧಾನ ಪರಿಷತ್‍ನ ಪೊಟೋ ಗ್ಯಾಲರಿಯಲ್ಲಿ ಹಿಂದುತ್ವವಾದಿ ವೀರ ಸಾವರ್ಕರ್ ಅವರ ಭಾವಚಿತ್ರ ಅಳವಡಿಸಲಾಗಿದ್ದು, ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿದೆ. ಜತೆಗೆ ಭಾವಚಿತ್ರವನ್ನು ಗ್ಯಾಲರಿಯಿಂದ ತೆಗೆಯಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಸಭಾಧ್ಯಕ್ಷರಿಗೆ ಪತ್ರವನ್ನೂ ಬರೆದಿದೆ.
ಮಂಗಳವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಾವರ್ಕರ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದ್ದರು. ಬ್ರಿಟಿಷರ ದೌರ್ಜನ್ಯಕ್ಕೆ ತಲೆಬಾಗದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ ಜತೆಗೆ ಸಾವರ್ಕರ್ ಅವರ ಭಾವಚಿತ್ರವನ್ನು ಸ್ಥಾಪಿಸುವುದು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ಮಾಡಿದ ಅವಮಾನವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕ ದೀಪಕ್ ಸಿಂಗ್, ಭಾವಚಿತ್ರ ತೆಗೆಯುವಂತೆ ಮನವಿ ಮಾಡಿ ಪರಿಷತ್‍ನ ಸಭಾಧ್ಯಕ್ಷ ರಮೇಶ್ ಯಾದವ್ ಅವರಿಗೆ ಪತ್ರ ಬರೆದಿದ್ದಾರೆ.
ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ಕೊಡುಗೆ ನೀಡಿದ ದೇಶದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಬೇಕು. ಅದೇ ರೀತಿ ವಿಭಿನ್ನ ವ್ಯಕ್ತಿಗಳು ಸಮಾಜಕ್ಕೆ ನೀಡಿರುವ ಕೊಡುಗೆ ಬಗ್ಗೆಯೂ ಯುವ ಜನಾಂಗ ಚರ್ಚೆ ನಡೆಸಬೇಕೆಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ