ಬಾಗಲಕೋಟೆ: ದೇಶದಲ್ಲಿ 2025ರ ವೇಳೆಗೆ ಬಹುಬೇಡಿಕೆಯ ಶೇ.25ರಷ್ಟು ಇಥೆನಾಲ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಘೋಷಣೆ ಮಾಡಿದರು.
ಜಿಲ್ಲೆಯ ಕೆರೂರ ವ್ಯಾಪ್ತಿಯಲ್ಲಿ ಬರುವ ಕೆರಕಲಮಟ್ಟಿ ಗ್ರಾಮದಲ್ಲಿ ಭಾನುವಾರ ನಿರಾಣಿ ಉದ್ಯಮ ಸಮೂಹ ಸಂಸ್ಥೆಯ ಒಡೆತನದ ಕೇದಾರನಾಥ ಸಕ್ಕರೆ ಕಾರ್ಖಾನೆ ಪುನರಾರಂಭ ಹಾಗೂ ಸಕ್ಕರೆ ಕಾರ್ಖಾನೆಯಲ್ಲಿ ವಿವಿಧ ಉತ್ಪಾದನಾ ಘಟಕಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ, ಇಥೆನಾಲ್ ಮೇಲೆ 2018ರಿಂದ ಜಿಎಸ್ಟಿ ಕೇವಲ ಶೇ.5ರಷ್ಟು ಇರುವುದು ರೈತರಿಗೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಅನುಕೂಲವಾಗಿದೆ. ಕಬ್ಬಿನಿಂದ ಮತ್ತು ತ್ಯಾಜ್ಯದಿಂದ ಇಥೆನಾಲ್ ಉತ್ಪಾದನೆ ಮಾಡಲು ಕೇಂದ್ರ ಸರ್ಕಾರ ಪರವಾನಿಗೆ ನೀಡಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಉದ್ಯೋಗ ಸೃಷ್ಟಿ ಹೆಚ್ಚಾಗುವುದು:
ಇಥೆನಾಲ್ ಉತ್ಪಾದನೆಯಿಂದ ಉದ್ಯೋಗ ಸೃಷ್ಟಿ ಹೆಚ್ಚಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ಇದು ಸಾಧ್ಯವಾಗುತ್ತಿದೆ. 2022ರ ಹೊತ್ತಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೇಂದ್ರ ಸರ್ಕಾರ ಅನುಕೂಲಕವನ್ನು ಕಲ್ಪಿಸಲಿದೆ. ರೈತರ ಆದಾಯ ಹೆಚ್ಚಿಸುವುದು ಮೋದಿಯವರ ಆಶಯವಾಗಿದೆ ಎಂದು ಹೇಳಿದರು.
ಶೀಘ್ರದಲ್ಲೇ ಇಥೆನಾಲ್ ಉತ್ಪಾದನೆ:
ಪೆಟ್ರೋಲ್ ಹಾಗೂ ಇಂಧನಕ್ಕಾಗಿ ಹೆಚ್ಚು ಹಣ ವ್ಯಯವಾಗುತ್ತಿದೆ. ಈ ಹೊರೆಯನ್ನು ತಗ್ಗಿಸಲು ಇಥೆನಾಲ್ ಉತ್ಪಾದನೆಗೆ ನರೇಂದ್ರಮೋದಿ ಅವರು ಪೆÇ್ರೀತ್ಸಾಹ ನೀಡುತ್ತಿದ್ದಾರೆ. ಇಥೆನಾಲ್ ಉತ್ಪಾದನೆಯಿಂದ ಎಲ್ಲರಿಗೂ ಒಳಿತಾಗಲಿದೆ. ಖರ್ಚು ಕೂಡ ಕಡಿಮೆಯಾಗುವ ಜೊತೆಗೆ ದೇಶದ ರೈತರಿಗೆ ಒಳ್ಳೆಯದಾಗಲಿದೆ. ಇದು ಮೋದಿಯವರ ಆತ್ಮನಿರ್ಭರ ಭಾರತದ ಆಶಯಕ್ಕನುಗುಣವಾಗಿದೆ. ನಿರಾಣಿ ಉದ್ಯಮ ಸಮೂಹ ಸಂಸ್ಥೆ ಇಥೆನಾಲ್ ಉತ್ಪಾದಿಸುತ್ತಿರುವುದು ಶ್ಲಾಘನೀಯ ಎಂದರು.
ರೈತರ ಅಭಿವೃದ್ಧಿಗಾಗಿ ಹತ್ತು ಲಕ್ಷ ಕೋಟಿ ನೆರವು:
ಕಾಂಗ್ರೆಸ್ ಆಡಳಿತ ಅವಯಲ್ಲಿ ರೈತರಿಗೆ ಕೇವಲ 21,300 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ನರೇಂದ್ರಮೋದಿ ಅವರ ಅಕಾರವಯಲ್ಲಿ 1.34ಲಕ್ಷ ಕೋಟಿ ರೂ.ಖರ್ಚು ಮಾಡಲಾಗುತ್ತಿದೆ. ರೈತರಿಗೆ ಹೆಚ್ಚು ಹಣ ಖರ್ಚು ಮಾಡಿದ ಕೀರ್ತಿ ಪ್ರಧಾನಿಯವರಿಗೆ ಸಲ್ಲುತ್ತದೆ ಎಂದರು.
ರೈತರಿಗೆ ಹಾಗು ಇನ್ನಿತರ ಫಲಾನುಭವಿಗಳಿಗೆ ನೇರವಾಗಿ ಹಣವನ್ನು ನೀಡಲಾಗುತ್ತಿದೆ. ಪ್ರತಿವರ್ಷ ನೇರವಾಗಿ ರೈತರ ಖಾತೆಗೆ ರೂ.6 ಸಾವಿರ ಹಾಕುತ್ತಿರುವ ಕೆಲಸವನ್ನು ಪ್ರಧಾನಿಯವರು ತಪ್ಪದೆ ಮಾಡುತ್ತಿದ್ದಾರೆ. ರೈತರ ಪರವಾಗಿ ಸಾಕಷ್ಟು ಕೆಲಸವನ್ನು ಪ್ರಧಾನಿಯವರು ಮಾಡುತ್ತಿದ್ದಾರೆ.
10 ಲಕ್ಷ ಕೋಟಿಯಷ್ಟು ಹಣವನ್ನು ಅನ್ನದಾತರ ಅಭಿವೃದ್ಧಿಗೆ ಒದಗಿಸಿದ್ದಾರೆ ಎಂದರು.
ಬಾಗಲಕೋಟೆಯ ಪುಣ್ಯಭೂಮಿಯಲ್ಲಿ ನಿಂತು ಮನವಿ ಮಾಡುವೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನಂಬಿಕೆಯಿಡಿ. ಆತ್ಮನಿರ್ಭರ ಭಾರತಕ್ಕೆ ಎಲ್ಲರ ಆಶೀರ್ವಾದವಿರಲಿ ಎಂದು ಕೇಳಿಕೊಂಡರು.