ಹುಬ್ಬಳ್ಳಿ: ಧಾರವಾಡದ ಇಟಗಟ್ಟಿ ಹಾಗೂ ಮುಮ್ಮಿಗಟ್ಟಿ ಕೈಗಾರಿಕೆ ಪ್ರದೇಶಗಳಲ್ಲಿ ನಿರೀಕ್ಷೆಗೂ ಮೀರಿ 4,968 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, 21 ಸಾವಿರಕ್ಕೂ ಅಕ ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗೃಹ ಬಳಕೆ ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪಾದಿಸುವ ಏಕಸ್ ಎಸ್ಇಝಡ್ ಪ್ರೈವೇಟ್ ಲಿಮಿಟೆಡ್ ಹಾಗೂ ಪ್ಯಾಕೇಜಿಂಗ್ ಮಟೇರಿಯಲ್ಸ್ ಉತ್ಪಾದಿಸುವ ಯುಪ್ಲೆಕ್ಸ್ ಕಂಪನಿಗೆ ಸಚಿವ ಸಂಪುಟದ ಉಪ ಸಮಿತಿ ಉಪ್ಪಿಗೆ ದೊರೆತಿದೆ. ಕೆಲವೇ ದಿನಗಳಲ್ಲಿ ಅವರಿಗೆ ಕಾರ್ಯಾರಂಭದ ಪತ್ರವನ್ನು ರಾಜ್ಯ ಸರ್ಕಾರದಿಂದ ನೀಡಲಾಗುವುದು ಎಂದರು.
ಏಕಸ್ ಕಂಪನಿ 3,540 ಕೋಟಿ ಬಂಡವಾಳ ಹೂಡಿಕೆ ಮಾಡಲಿದ್ದು, ಇಟಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 350 ಎಕರೆ ಜಮೀನು ನೀಡಲಾಗಿದೆ. 20 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ರೆಫ್ರಿಜರೇಟರ್, ಎಸಿ, ಸ್ಪೀಕರ್, ಹೀಟರ್, ಮಿಕ್ಸರ್, ಕ್ಯಾಮೆರಾ ಮುಂತಾದ ವಸ್ತುಗಳ ಬಿಡಿ ಭಾಗಗಳನ್ನು ಉತ್ಪಾಸಲಾಗುವುದು. ಮಮ್ಮಿಗಟ್ಟಿಯಲ್ಲಿ 50 ಸಾವಿರ ಎಕರೆ ಭೂಮಿಯನ್ನು ಯುಪ್ಲೆಕ್ಸ್ ಕಂಪನಿಗೆ ನೀಡಲಾಗಿದ್ದು, 1,464 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. 1 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಪ್ಯಾಕೇಜಿಂಗ್ ಮಟೀರಿಯಲ್ಸ್ಗಳ ಉತ್ಪಾದನೆಯನ್ನು ಸಹ ಈ ಕಂಪನಿ ಮಾಡಲಿದೆ ಎಂದು ವಿವರಿಸಿದರು.
ಎಫ್ಎಂಸಿಜಿ ಕ್ಲಸ್ಟರ್ ಆರಂಭಿಸುವ ಬಗೆಗೂ ಈಗಾಗಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂರು ಹಂತಗಳಲ್ಲಿ 7,500 ಕೋಟಿ ರೂ. ಹೂಡಿಕೆಯಾಗಲಿದ್ದು, 1 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ. ದಕ್ಷಿಣ ಭಾರತದ ಎಫ್ಎಂಸಿಜಿ ಕ್ಲಸ್ಟರ್ ಇದಾಗಲಿದೆ ಎಂದರು.