![Storm+Brings+Heavy+Rain](http://kannada.vartamitra.com/wp-content/uploads/2018/05/StormBringsHeavyRain-564x381.jpg)
ರಾಜ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆ, ಬೆಳೆಹಾನಿ ಸೇರಿದಂತೆ ಅನೇಕ ಅನಾಹುತಗಳಿಗೆ ಕಾರಣವಾಗಿದೆ. ಹಾವೇರಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಳೆದ ರಾತ್ರಿ ಗುಡುಗು ಮಿಂಚು ಸಹಿತ ಅಕಾಲಿಕ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಾನಗಲ್ ತಾಲ್ಲೂಕಿನಲ್ಲಿ ಮಾವು ಬೆಳೆಗೆ ಮಾರಕವಾಗಿದೆ. ದಾವಣಗೆರೆ ಜಿಲ್ಲಾದ್ಯಂತ ಕೂಡ ಅಕಾಲಿಕ ಮಳೆಯಾಗಿದ್ದು, ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ಸಿಡಿಲು ಬಡಿದು 10 ಕುರಿಗಳು ಸಾವು ಕಂಡಿವೆ. ದಾವಣಗೆರೆ ನಗರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು ಇದರಿಂದ ಜನರು ಪರದಾಡುವಂತಾಗಿದೆ. ಸಂಜೆಯಿಂದ ಮಧ್ಯರಾತ್ರಿವರೆಗೂ ಧಾರಾಕಾರವಾಗಿ ಸುರಿದ ಮಳೆಯಿಂದ ಭತ್ತದ ನಾಟಿ ಮಡಿಗಳು ನೀರಿನಲ್ಲಿ ಕೊಚ್ಚಿಹೋಗಿವೆ. ನೂರಾರು ಎಕರೆಯಲ್ಲಿ ಬೆಳೆದು ನಿಂತಿದ್ದ ಜೋಳ, ಕಡಲೆ, ಶೇಂಗಾ ಬೆಳೆಗೆ ಹಾನಿ ಸಂಭವಿಸಿದೆ. ಕಂದಾಯ ಮತ್ತು ಕೃಷಿ ಇಲಾಖೆಯ ಸಮೀಕ್ಷೆಯ ನಂತರ ನಷ್ಟದ ಅಂದಾಜು ತಿಳಿಯಲಿದೆ.