ಶಿವಮೊಗ್ಗ: ಆರಂಭಗೊಂಡಿರುವ ವಿಧಾನ ಮಂಡಲ ಅವೇಶನದಲ್ಲಿಯೇ ಗೋಹತ್ಯೆ ತಡೆ ಮಸೂದೆಯನ್ನು ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಸಾಗರ ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲವ್ ಜಿಹಾದ್ ಕುರಿತ ಮಸೂದೆ ಮುಂದಿನ ಬಾರಿ ಮಂಡನೆ ಆಗಲಿದೆ ಎಂದರು.
ಈ ಹಿಂದೆ ಬಿಜೆಪಿ ಸರ್ಕಾರ ಅಕಾರದಲ್ಲಿ ಇಗಲೇ ಗೋ ಹತ್ಯೆ ತಡೆ ಮಸೂದೆಯನ್ನು ಮಂಡಿಸಲಾಗಿತ್ತು. ವಿಧೇಯಕ ವಿಧಾನ ಮಂಡಲದಲ್ಲಿ ಅಂಗೀಕಾರ ಆಗಿದ್ದರೂ ರಾಜ್ಯಪಾಲರು ಅಂಕಿತ ಹಾಕಿರಲಿಲ್ಲ. ಈ ಬಾರಿಯ ಅವೇಶನದಲ್ಲಿ ಪುನಃ ವಿಧೇಯಕ ಮಂಡನೆ ಮಾಡುವಂತೆ ಸಚಿವರಿಗೆ ಸೂಚನೆ ನೀಡಿದ್ದೇನೆ. ಈ ಬಾರಿ ರಾಜ್ಯಪಾಲರು ಕೂಡ ಅಂಗೀಕರಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಈ ಅವೇಶನದಲ್ಲಿ ಲವ್ ಜಿಹಾದ್ ತಡೆ ಮಸೂದೆ ಮಂಡನೆ ಮಾಡುವುದಿಲ್ಲ. ಅದರ ಸಾಧಕ ಬಾಧಕ ಹಾಗೂ ಕಾನೂನಿನ ರೂಪುರೇಷೆ ಬಗ್ಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.