ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಭಾರತ, ವಿಶ್ವದ ಔಷದಾಲಯವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ. ಲಸಿಕೆಗಳ ಸಂಶೋಧನೆಯಲ್ಲಿ ಭಾರತ ಇಡೀ ವಿಶ್ವದಲ್ಲಿ ಮುಂಚೂಣಿಯಲ್ಲಿ ಇರುವುದು ಮಾತ್ರವಲ್ಲದೇ ವಿಶ್ವದ ಲಸಿಕೆ ಉತ್ಪಾದನಾ ಕ್ಷೇತ್ರದಲ್ಲೂ ಅತ್ಯಂತ ನಿರ್ಣಾಯಕವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಇತ್ತೀಚೆಗೆ ಪ್ರಧಾನಮಂತ್ರಿ, ದೇಶೀಯವಾಗಿ ಲಸಿಕೆ ಉತ್ಪಾದಿಸುತ್ತಿರುವ ಮೂರು ಪ್ರಮುಖ ನಗರಗಳಲ್ಲಿನ ಲಸಿಕಾ ತಯಾರಿಕಾ ಕಂಪೆನಿಗಳಿಗೆ ಭೇಟಿ ನೀಡಿ ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನಾ ಪ್ರಕ್ರಿಯೆಯನ್ನು ಖುದ್ದು ಪರಿಶೀಲಿಸಿದ್ದಾರೆ. ಅಹಮದಾಬಾದ್ನಲ್ಲಿರುವ ಝೈಡಸ್ ಬಯೋಟೆಕ್ ಪಾರ್ಕ್, ಹೈದರಾಬಾದ್ನಲ್ಲಿರುವ ಭಾರತ್ ಬಯೋಟೆಕ್ ಮತ್ತು ಪುಣೆಯಲ್ಲಿರುವ ಸೆರಂ ಇನ್ಸ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪೆನಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಪೈಕಿ 2 ಕಂಪೆನಿಗಳು ದೇಶೀಯವಾಗಿ ಕೋವಿಡ್ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿವೆ. ಇಡೀ ಮಾನವ ಕುಲವನ್ನು ಸಂರಕ್ಷಿಸುವ ಸಲುವಾಗಿ ಕೋಟ್ಯಂತರ ಪ್ರಮಾಣದಲ್ಲಿ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಲಸಿಕಾ ಉತ್ಪಾದನಾ ಸಂಸ್ಥೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ವಿಜ್ಞಾನಿಗಳಿಗೆ ನೈತಿಕ ಸ್ಥೈರ್ಯ ತುಂಬುವ ಉದ್ದೇಶದಿಂದ ಭೇಟಿ ನೀಡಿರುವುದಾಗಿ ತಿಳಿಸಿದ್ದರು ಮತ್ತು ಸಂಕಷ್ಟದ ಸಂದರ್ಭದಲ್ಲಿ ಲಸಿಕೆ ಅಭಿವೃದ್ಧಿ ಪಡಿಸುತ್ತಿರುವ ವಿಜ್ಞಾನಿಗಳ ಪ್ರಯತ್ನಗಳನ್ನು ಅಭಿನಂದಿಸಿದ್ದರು.
Related Articles
ಬಯೋಟೆಕ್ಸ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆ ಮತ್ತು ಕ್ಲಿನಿಕಲ್ ಟ್ರೈಯಲ್ಗೆ ನೀಡಿದ್ದ ಅನುಮತಿಯನ್ನು ಬ್ರೆಜಿಲ್ ಸರ್ಕಾರ ಅಮಾನತು ಮಾಡಿದೆ
July 28, 2021
Varta Mitra News - SP
ರಾಷ್ಟ್ರೀಯ
Comments Off on ಬಯೋಟೆಕ್ಸ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆ ಮತ್ತು ಕ್ಲಿನಿಕಲ್ ಟ್ರೈಯಲ್ಗೆ ನೀಡಿದ್ದ ಅನುಮತಿಯನ್ನು ಬ್ರೆಜಿಲ್ ಸರ್ಕಾರ ಅಮಾನತು ಮಾಡಿದೆ
Seen By: 75 ಹೈದರಾಬಾದ್, ಜು.27- ಭಾರತ್ ಬಯೋಟೆಕ್ಸ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆ ಮತ್ತು ಕ್ಲಿನಿಕಲ್ ಟ್ರೈಯಲ್ಗೆ ನೀಡಿದ್ದ ಅನುಮತಿಯನ್ನು ಬ್ರೆಜಿಲ್ ಸರ್ಕಾರ ಅಮಾನತು [more]
ದೇಶಾದ್ಯಂತ ಇದೇ 16ರಂದು ಕೋವಿಡ್-19 ಲಸಿಕಾ ಆಂದೋಲನ ಆರಂಭವಾಗಲಿದೆ
January 11, 2021
Varta Mitra News - SP
ರಾಷ್ಟ್ರೀಯ, ಪ್ರಧಾನಿ ಮೋದಿ, ಆರೋಗ್ಯ
Comments Off on ದೇಶಾದ್ಯಂತ ಇದೇ 16ರಂದು ಕೋವಿಡ್-19 ಲಸಿಕಾ ಆಂದೋಲನ ಆರಂಭವಾಗಲಿದೆ
Seen By: 62 ದೇಶಾದ್ಯಂತ ಇದೇ 16ರಂದು ಕೋವಿಡ್-19 ಲಸಿಕಾ ಆಂದೋಲನ ಆರಂಭವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ದೆಹಲಿಯಲ್ಲಿಂದು ಉನ್ನತ ಮಟ್ಟದ ಸಭೆ ನಡೆಸಿ, ಕೋವಿಡ್-19 ಸ್ಥಿತಿಗತಿ [more]
ಕೋವಿಡ್ ಕಾರಣಕ್ಕೆ ವಿಳಂಬ ಆಯ್ತು, ಪೌರತ್ವ ಕಾಯ್ದೆ ಶೀಘ್ರದಲ್ಲೇ ಅನುಷ್ಠಾನ: ಜೆ.ಪಿ. ನಡ್ಡಾ
October 20, 2020
Varta Mitra News - SP
ರಾಜ್ಯ, ಆರೋಗ್ಯ
Comments Off on ಕೋವಿಡ್ ಕಾರಣಕ್ಕೆ ವಿಳಂಬ ಆಯ್ತು, ಪೌರತ್ವ ಕಾಯ್ದೆ ಶೀಘ್ರದಲ್ಲೇ ಅನುಷ್ಠಾನ: ಜೆ.ಪಿ. ನಡ್ಡಾ
Seen By: 58 ಕೋಲ್ಕತಾ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಶೀಘ್ರದಲ್ಲೇ ದೇಶಾದ್ಯಂತ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ಉತ್ತರ [more]