ಕೇಂದ್ರ ಕೃಷಿ ಕಾಯಿದೆ `ವರದಾನ ‘ಎನ್ತಾರೆ ಮಹಾರಾಷ್ಟ್ರ ರೈತರು 3ತಿಂಗಳಲ್ಲಿ 10ಕೋ.ರೂ.ಆದಾಯ

ಮಹಾರಾಷ್ಟ್ರ: ರೈತರ ಬದುಕು ಹಸನಾಗಬೇಕೆಂಬ ಏಕೈಕ ಆಶಯದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ತಿಂಗಳ ಹಿಂದೆ ಜಾರಿಗೊಳಿಸಿರುವ ಹೊಸ ಕೃಷಿ ಕಾಯಿದೆಗಳು ರೈತರಿಗೆ ಇಷ್ಟರಲ್ಲೇ ಅದೆಷ್ಟು ಪ್ರಯೋಜನಕಾರಿಯಾಗುತ್ತಿದೆಯೆಂದರೆ, ಮಹಾರಾಷ್ಟ್ರದ 4ಜಿಲ್ಲೆಗಳಲ್ಲಿ ಮಂಡಿಗಳ ಹೊರಗಡೆ ನಡೆಸಿದ ವ್ಯಾಪಾರದಲ್ಲಿ ರೈತರಿಗೆ ಬರೋಬ್ಬರಿ 10ಕೋ.ರೂ.ಗಳಿಗೂ ಮೀರಿ ಆದಾಯ ಲಭಿಸಿದೆ.
2020ರ ಸೆಪ್ಟೆಂಬರ್‍ನಲ್ಲಿ ಹೊಸ ಕೃಷಿ ಕಾಯಿದೆಗಳು ಜಾರಿಗೊಂಡ ಅನಂತರದಲ್ಲಿ ಮಹಾರಾಷ್ಟ್ರದ ಸುಮಾರು 19 ಕೃಷ್ಯುತ್ಪಾದಕ ಕಂಪನಿ(ಎಫ್‍ಪಿಸಿ)ಗಳು ಮಂಡಿಗಳ ಹೊರಗಡೆ ನಡೆಸಿದ ವ್ಯವಹಾರದಲ್ಲಿ 2693.58 ಟನ್ ಕೃಷ್ಯುತ್ಪನ್ನಗಳನ್ನು ವಿಕ್ರಯಿಸಿವೆ. ಹೊಸ ಕೃಷಿ ಕಾಯಿದೆ ಸರಿಯಿಲ್ಲ,ತಮ್ಮ ಪರವಾಗಿಲ್ಲ ಎಂದು ಆರೋಪಿಸಿ ಪಂಜಾಬ್ ರೈತಗುಂಪುಗಳು ರಾಷ್ಟ್ರದ ರಾಜಧಾನಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿರುವಾಗಲೇ ಮಹಾರಾಷ್ಟ್ರ ರೈತರು ಈ ಕಾಯ್ದೆಯಿಂದ ತಮಗಾಗಿರುವ ಲಾಭವನ್ನು ಎತ್ತಿ ತೋರುತ್ತಿದ್ದಾರೆ. ಇದೇ ವೇಳೆ, ಹೊಸ ಕಾಯಿದೆಗಳ ಬಗ್ಗೆ ತುಂಬು ಭರವಸೆ ಹೊಂದಿರುವ ಮಹಾರಾಷ್ಟ್ರದ ರೈತಾಪಿ ವರ್ಗ ಈ ಕಾಯಿದೆಗಳ ಗರಿಷ್ಠ ಪ್ರಯೋಜನವನ್ನು ತುಂಬು ಆತ್ಮವಿಶ್ವಾಸ, ಖುಷಿ ಮತ್ತು ಹಕ್ಕಿನಿಂದ ಪಡೆಯತೊಡಗಿದೆ.
ಮಹಾರಾಷ್ಟ್ರದ ಎಲ್ಲಾ ಎಫ್‍ಪಿಸಿಗಳನ್ನು ನಿಯಂತ್ರಿಸುವ ಮಹಾಎಫ್‍ಪಿಸಿ ಪ್ರಕಾರ, ಹೊಸ ಕೃಷಿ ಕಾಯಿದೆಗಳು ಜಾರಿಯಾದ ನಂತರದಲ್ಲಿ, ನಾಲ್ಕು ಜಿಲ್ಲೆಗಳ ಎಫ್‍ಪಿಸಿಗಳು ಮಂಡಿಗಳಿಂದ ಹೊರಗಡೆ ಬರೋಬ್ಬರಿ 10ಕೋ.ರೂ.ಗಳಿಗೂ ಮೀರಿ ವ್ಯವಹಾರ ದಾಖಲಿಸಿವೆ. ಎಪಿಎಂಸಿಗಳ ಹೊರಗಡೆ ವ್ಯಾಪಾರ ನಡೆಸಿದ ಸೋಯಾಬಿನ್ ವ್ಯಾಪಾರಿಗಳಿಗೂ ಸಖತ್ ಲಾಭವಾಗಿದೆ. ಈ ಪರಿವರ್ತನೆ ಸಾಧ್ಯವಾಗಿರುವುದು ಹೊಸ ಕೃಷಿ ಕಾಯಿದೆಗಳಿಂದ ಎಂಬುದು ಗಮನಾರ್ಹ.
ಅಂದ ಹಾಗೆ, ಹೊಸ ಕಾಯಿದೆಗಳು ಎಪಿಎಂಸಿಯ ಕೆಲವೊಂದು ಅಕಾರಕ್ಕೆ ಕತ್ತರಿ ಹಾಕಿವೆ. ಹಿಂದೆಲ್ಲಾ ಎಪಿಎಂಸಿ ಆಜುಬಾಜಲ್ಲಿ ನಡೆಯುವ ವ್ಯಾಪಾರ ವ್ಯವಹಾರಗಳನ್ನು , ಎಪಿಎಂಸಿಗಳ ನಿಯಂತ್ರಕ ವ್ಯವಸ್ಥೆಯಾದ ಸಹಕಾರಿ ಸಂಸ್ಥೆಗಳು ನಿಯಂತ್ರಿಸುತ್ತಿದ್ದವು. ಈ ತೆರ ವ್ಯಾಪಾರ ಮಾಡುವ ಕೃಷಿಕರಿಗೆ ಮಾರುಕಟ್ಟೆ ಸುಂಕ ಮತ್ತಿತರ ತೆರಿಗೆ ವಿಸಲಾಗುತ್ತಿತ್ತು. 2020ರ ಕೃಷಿಕರ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ ( ಅಭಿವೃದ್ಧಿ ಮತ್ತು ಉತ್ತೇಜನ) ಕಾಯಿದೆಯಡಿ ಎಪಿಎಂಸಿಗಳ ಈ ಅಕಾರವನ್ನು ಮೊಟಕುಗೊಳಿಸಲಾಗಿದೆ.
ಕಳೆದ ಮೂರು ತಿಂಗಳಲ್ಲಿ ಎಫ್‍ಪಿಸಿಗಳ ಖಾದ್ಯ ತೈಲ ದ್ರಾವಕ, ತೈಲ ತ್ಯಾಜ್ಯ ಮತ್ತು ಪಶು ಆಹಾರ ವಹಿವಾಟಲ್ಲಿ ಸಖತ್ ಹೆಚ್ಚಳ ದಾಖಲಾಗಿದೆ. ಇವನ್ನು ತಮ್ಮ ವ್ಯಾಪ್ತಿಯ ರೈತರಿಂದಲೇ ನೇರ ಖರೀದಿ ಮಾಡಿರುವುದೇ ಇದಕ್ಕೆ ಕಾರಣ. ಮಂಡಿಗಳಿಗೆ ಶುಲ್ಕ ಪಾವತಿಸುವ ಪ್ರಮೇಯವಿಲ್ಲದ ಕಾರಣ, ಎಫ್‍ಪಿಸಿಗಳಿಗೆ ಈ ಹಣ ಲಾಭವಾಗಿದೆ. ಉತ್ಪನ್ನಗಳ ನೇರ ಮಾರಾಟದಿಂದ ರೈತರಿಗೂ ಸಾಗಣೆ ವೆಚ್ಚ ತುಂಬ ಕಡಿಮೆಯಾಗಿ , ತನ್ಮೂಲಕ ಸಾಕಷ್ಟು ಹಣ ಉಳಿತಾಯವಾಗಿದೆ.
2693.58 ಟನ್ಕೃ ಷ್ಯುತ್ಪನ್ನ ವಹಿವಾಟು ಮರಾಠವಾಡದಿಂದ ಹೊರಗಿರುವ ಬಹುತೇಕ 19 ಎಫ್‍ಪಿಸಿಗಳೂ ಕಳೆದ ಮೂರು ತಿಂಗಳಲ್ಲಿ 2693.58 ಟನ್ ಕೃಷ್ಯುತ್ಪನ್ನಗಳನ್ನು ಬೇರೆ ಬೇರೆ ಖಾಸಗಿ ಕಂಪೆನಿಗಳಿಗೆ ಪೂರೈಸಿವೆ. 19ರ ಪೈಕಿ ಲಾತೂರು ಮೂಲದ 13 ಎಫ್‍ಪಿಸಿಗಳು 2165.863ಟನ್ ಕೃಷ್ಯುತ್ಪನ್ನಗಳನ್ನು ಎಡಿಎಂ ಆಗ್ರೋ ಇಂಡಸ್ಟ್ರೀಸ್ ಪ್ರೈ.ಲಿ.ಗೆ ಪೂರೈಕೆ ಮಾಡಿವೆ. ಓಸ್ಮನಾಬಾದ್‍ನ ನಾಲ್ಕು ಎಫ್‍ಪಿಸಿಗಳು 412.327 ಟನ್ ಕೃಷ್ಯುತ್ಪನ್ನಗಳನ್ನು ನಿರ್ವಹಿಸಿವೆ. ಹಿಂಗೋಲಿ ಮತ್ತು ನಾಂದೆಡ್‍ನ ತಲಾ ಒಂದು ಎಫ್‍ಪಿಸಿಗಳು ಕ್ರಮವಾಗಿ 96.618 ಟನ್ ಮತ್ತು 18.78 ಟನ್ ತೈಲಬೀಜವನ್ನು ಖಾಸಗಿ ಕಂಪನಿಗಳಿಗೆ ಪೂರೈಸಿವೆ.
ಕಾಯಿದೆಯಲ್ಲಿಲ್ಲ ವಿವಾದಾತ್ಮಕ ಅಂಶ
ಹೊಸ ಕೃಷಿ ಕಾಯಿದೆಗಳಿಂದ ರೈತರಿಗೆ ಉತ್ಪನ್ನಗಳ ಸಾಗಣೆ ವೆಚ್ಚ ಉಳಿತಾಯವಾಗಿದೆ ಮಾತ್ರವಲ್ಲ, ಉತ್ಪನ್ನಗಳ ತೂಕದಲ್ಲಾಗುತ್ತಿದ್ದ ವ್ಯತ್ಯಾಸದ ಸಮಸ್ಯೆಯೂ ನಿವಾರಣೆಯಾಗಿದೆ ಎಂದು ಕಾಯಿದೆಯ ಪ್ರಯೋಜನ ಪಡೆದು ಸಂತಸಪಟ್ಟಿರುವ ರೈತರು ಪ್ರತಿಕ್ರಿಯಿಸಿದ್ದಾರೆ. ಮಾರುಕಟ್ಟೆ ದರವು ಸರಕಾರ ಘೋಷಿಸಿದ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಯಾದಾಗ ಕಂಪೆನಿಗಳು ಉತ್ಪನ್ನಗಳ ಖರೀದಿ-ದಾಸ್ತಾನು ಪ್ರಕ್ರಿಯೆ ಸ್ಥಗಿತಗೊಳಿಸಿದ್ದವು ಎನ್ನುತ್ತಾರೆ ಈ ಕೃಷಿಕ.
ಪ್ರತಿಭಟನೆನಿರತ ಪಂಜಾಬ್ ರೈತರು ದೂರುವಂತಹ ವಿವಾದಾತ್ಮಕ ಅಂಶಗಳ್ಯಾವುದೂ ಹೊಸ ಕಾಯಿದೆಯಲ್ಲಿ ಇಲ್ಲ. ಆದರೆ ಕನಿಷ್ಠ ಬೆಂಬಲ ಬೆಲೆ ರಹಿತ ವಹಿವಾಟುಗಳು ಮಂಡಿ ಹೊರಗಡೆ ನಡೆಯಕೂಡದು, ಸರಕಾರ ಈ ವಿಚಾರವನ್ನು ಖಾತ್ರಿ ಪಡಿಸಿಕೊಳ್ಬೇಕು ಮತ್ತು ರೈತರ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ರೈತರೊಬ್ಬರು ಸಲಹೆ ನೀಡಿದ್ದಾರೆ.
ಮಾರಾಟಕ್ಕೊಂದು ಉತ್ತಮ ಆಯ್ಕೆ ಪ್ರಸ್ತುತ ವ್ಯವಸ್ಥೆಯು ಕೃಷಿಕರಿಗೆ ತಮ್ಮ ಉತ್ಪನ್ನಗಳನ್ನು ನೇರ ಮಾರಾಟ ಮಾಡಲು ಒಂದು ಉತ್ತಮ ಆಯ್ಕೆಯಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಮುಕ್ತ ಅವಕಾಶಗಳನ್ನು ತೆರೆದಿಟ್ಟಿದೆ ಎಂದು ಮಹಾಎಫ್‍ಪಿಸಿಯ ಆಡಳಿತ ನಿರ್ದೇಶಕ ಯೋಗೇಶ್ ಥೋರಟ್ ವಿಶ್ಲೇಷಿಸಿದ್ದಾರೆ. ಕಾಯಿದೆ ಬಗ್ಗೆ ಪ್ರತಿಭಟನಾನಿರತ ರೈತರು ವ್ಯಕ್ತಪಡಿಸಿರುವ ಆತಂಕ ಬರೇ ಸುಳ್ಳು ಎಂದವರು ಒತ್ತಿಹೇಳಿದ್ದಾರೆ.
ಈ ರೈತರು ಮತ್ತು ಕಾಪೆರ್ರೇಟ್ ಖುಳಗಳ ನಡುವೆ ಏರ್ಪಟ್ಟಿರುವ ಡೀಲಿಂಗ್‍ಗಳೇನೆಂಬುದು ತನಗೆ ಗೊತ್ತೆಂದು ಥೋರಟ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ