ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ತಿರುವು ಪಡೆದುಕೊಂಡಿದ್ದು, ಕೋಟ್ಯಂತರ ರೂ. ಪಡೆದ ಆರೋಪದಡಿ ಮಾಜಿ ಸಚಿವ ಆರ್.ರೋಷನ್ ಬೇಗ್ರನ್ನು ಸಿಬಿಐ ನ್ಯಾಯಾಲಯ 14ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಹಿನ್ನೆಲೆ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿದೆ.
ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ 2019ರ ಜು.19ರಂದು ಸಂಸ್ಥೆಯ ಸಂಸ್ಥಾಪಕ ಮನ್ಸೂರ್ ಅಲಿ ಖಾನ್ನನ್ನು ಜಾರಿ ನಿರ್ದೇಶನಾಯಲದ ಅಕಾರಿಗಳು ಬಂಸಿದ್ದರು. ಈ ಪ್ರಕರಣ ಸಂಬಂಧ ಮನ್ಸೂರು ಅಲಿ ಖಾನ್ ಮಾಜಿ ಸಚಿವ ಆರ್.ರೋಷನ್ ಬೇಗ್ರವರು ತನ್ನಿಂದ 400ಕೋಟಿ ರೂ. ಪಡೆದಿರುವುದಾಗಿ ವಿಡಿಯೋವೊಂದನ್ನು ಮಾಡಿದ್ದರು. ಇದನ್ನು ಸಾಕ್ಷಿಯಾಗಿರಿ ಸಿಬಿಐ ಅಕಾರಿಗಳು ಭಾನುವಾರ ರೋಶನ್ ಬೇಗ್ರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಬೆಳಗ್ಗೆ 11ಗಂಟೆ ಸುಮಾರಿಗೆ ಸಿಬಿಐ ಅಕಾರಿಗಳು ವಶಕ್ಕೆ ರೋಷನ್ ಬೇಗ್ರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು. ನಂತರ ಸಿಬಿಐ ಕಚೇರಿಗೆ ಕರೆದೊಯ್ದು ಕೆಲವೇ ಗಂಟೆಗಳಲ್ಲಿ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ ನ್ಯಾಯಾೀಶರು ರೋಷನ್ ಬೇಗ್ರನ್ನು 14ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು.
ಏನಿದು ಪ್ರಕರಣ?
ಐ ಮಾನಿಟರಿ ಆಡ್ವೈಸರಿ ಸಮೂಹ ಸಂಸ್ಥೆ(ಐಎಂಎ)ಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮನ್ಸೂರು ಅಲಿ ಖಾನ್ ತನ್ನ ಸಮೂಹ ಕಂಪನಿಗಳನ್ನು ಮುಚ್ಚಿ ಸಾರ್ವಜನಿಕರಿಗೆ ಹಣ ನೀಡದೆ ತಲೆಮರೆಸಿಕೊಂಡಿದ್ದಲ್ಲದೆ ಸಾರ್ವಜನಿಕರಿಂದ ಕಂಪನಿ ಮುಂಭಾಗದಲ್ಲಿ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಅಲ್ಲದೆ ತಲೆ ಮರೆಸಿಕೊಂಡಿದ್ದ ಮನ್ಸೂರು ತನ್ನಿಂದ ಹಣ ಪಡೆದಿದ್ದ ಕೆಲವರ ಮಾಹಿತಿಯನ್ನು ವಿಡಿಯೋ ಮೂಲಕ ಬಹಿರಂಗಪಡಿಸಿದ್ದನು. ತದನಂತರ ತನಗೆ ಹಣಕಾಸಿನ ವಿಚಾರವಾಗಿ ವಂಚಿಸಿರುವವರ ಬಗ್ಗೆಯೂ ಮಾಹಿತಿ ಬಹಿರಂಗ ಪಡಿಸಿದ್ದನು.
ಮನ್ಸೂರ್ ಖಾನ್ ಬಂಧನಕ್ಕೆ ಹುಡುಕಾಟದಲ್ಲಿ ತೊಡಗಿದ್ದ ವಿಶೇಷ ತನಿಖಾ ತಂಡಕ್ಕೆ ಮನ್ಸೂರು ದುಬೈನಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ತಿಳಿದು ಬಂದ ಹಿನ್ನೆಲೆ ಎಸ್ಐಟಿ ಅಕಾರಿಗಳು ವಶಕ್ಕೆ ಪಡೆದು ದೆಹಲಿಗೆ ಕರೆದೊಯ್ಯುತ್ತಿದ್ದಂತೆ ಇಡಿ ಅಕಾರಿಗಳು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದರು. ಈ ವಿಚಾರದಲ್ಲಿ ಮನ್ಸೂರ್ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ ಸಿಬಿಐ ದಾಖಲಿಸಿದ್ದ ಪ್ರಕರಣದಲ್ಲಿ ಆತನಿಗೆ ಜಾಮೀನು ಸಿಗದೆ ಈಗಲೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಅದರ ಮುಂದುವರಿದ ಭಾಗದಂತೆ ಇಂದು ಮಾಜಿ ಸಚಿವ ರೋಷನ್ ಬೇಗ್ರನ್ನು ವಶಕ್ಕೆ ಪಡೆ ವಿಚಾರಣೆ ಕೈಗೆತ್ತಿಕೊಳ್ಳಲಾಗಿದೆ.