ಬೆಂಗಳೂರು: ಪಾಶ್ಚಿಮಾತ್ಯರು ವಿಶ್ವ ಧರ್ಮವಾಗುವ ಸಾಮಥ್ರ್ಯ ಹೊಂದಿದ್ದ ಹಿಂದೂ ಧರ್ಮವನ್ನು ತಮಗೆ ಬೇಕಾದಂತೆ ಅರ್ಥೈಸಿಕೊಂಡು ವಿರೂಪಗೊಳಿಸಿ ಕೇವಲ ರಿಲಿಜಿಯನ್ಗೆ ಸೀಮಿತಗೊಳಿಸಿದರು. ಇದನ್ನು ಹೋಗಲಾಡಿಸಲು ಸಂಸ್ಕøತ ನಾನ್-ಟ್ರಾನ್ಸೇಟಬಲ್ಸ್ ಕೃತಿ ಸಹಕಾರಿಯಾಗಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ ಭಾಗ್ವತ್ ಅಭಿಪ್ರಾಯಪಟ್ಟರು.
ಇನ್ಫಿನಿಟಿ ಪ್ರತಿಷ್ಠಾನ, ಜೀವ ಭಾರತೀಯ ಸಂಸ್ಕøತಿ ಪ್ರತಿಷ್ಠಾನ, ಭೀಷ್ಮ ಇಂಡಿಕಸ್ ಹಾಗೂ ಮಂಜುಳ ಇಂಡಿಯಾ ಸಂಸ್ಥೆಗಳು ಆಯೋಜಿಸಿದ್ದ ಅಂತರ್ಜಾಲ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಬ್ದದ ಹಿಂದೆ ಭಾವನೆ ಮತ್ತು ವಿಚಾರಗಳ ವಿಶ್ವವಿದೆ. ನನ್ನ ಮಾತು, ವಿಚಾರಗಳನ್ನು ಮತ್ತೊಬ್ಬರಿಗೆ ತಲುಪಿಸಲು ಬೇಕಿರುವುದೂ ಶಬ್ದವೇ. ತಪ್ಪು ಶಬ್ದಗಳಿಂದ ತಪ್ಪು ಅರ್ಥ, ಕೆಟ್ಟ ಸಂದೇಶ ರವಾನಿಸಿದಂತಾಗುತ್ತದೆ. ನಮ್ಮ ಜೀವನ ಭಾಗವಾಗಿರುವ ಭಾರತೀಯ ಸಂಸ್ಕøತಿ, ಆಚಾರ ವಿಚಾರ, ರೀತಿ ನೀತಿಗಳನ್ನು ಪಾಶ್ಚಿಮಾತ್ಯರು ತಮಗೆ ಬೇಕಾದಂತೆ ಅರ್ಥೈಸಿಕೊಂಡು, ತಮ್ಮದೇ ದೃಷ್ಟಿಕೋನದಲ್ಲಿ ವಿವರಿಸಲು ಪ್ರಾರಂಭಿಸಿದರು. ಇದನ್ನು ವಿರೋಸಿದವರನ್ನೂ ದಮನಿಸಿದರು. ಜೊತೆಯಲ್ಲಿ ತಾವು ನೋಡಿದ್ದೇ ಸತ್ಯವೆಂದು ಜಗತ್ತಿನೆಲ್ಲೆಡೆ ಹರಡಿಸುವ ಕೆಲಸದಲ್ಲಿಯೂ ಅವರು ನಿಷ್ಣಾತರಾಗಿದ್ದರು. ದೌರ್ಭಾಗ್ಯವೆಂದರೆ ನಾವೂ ಅದನ್ನೇ ಸರಿಯೆಂದು ನಂಬಿಕೊಂಡು ಹಲವು ಸಮಸ್ಯೆಗಳಿಗೆ ಕಾರಣವಾಯಿತು ಎಂದರು.
ನಮ್ಮ ದೇಶ, ಸಮಾಜ, ಸನಾತನ ಕಾಲದಿಂದ ಆಚರಿಸಿಕೊಂಡು ಬರುತ್ತಿದ್ದ ಸಂಸ್ಕøತಿ ಅಳಿಸುವಲ್ಲಿ ನಾವೇ ಪಾಶ್ಚಿಮಾತ್ಯರಿಗೆ ಅಸ್ತ್ರವಾಗಿ ಬಳಕೆಯಾದೆವು. ಏಕೆಂದರೆ ನಾವು ಭಾಷೆಯನ್ನು ಮರೆತಿದ್ದೆವು. ಇದರಿಂದ ಪಾಶ್ಚಿಮಾತ್ಯರು ಹೇಳಿದಂತೆ ಅರ್ಥ ಮಾಡಿಕೊಂಡು ನಮ್ಮ ಬುದ್ಧಿಯನ್ನು ಹಾಳುಗೆಡವಿಕೊಂಡೆವು. ಹೀಗಾಗಿ ಧರ್ಮ ಕೇವಲ ರಿಲಿಜಿಯನ್ಗಷ್ಟೇ ಸೀಮಿತವಾಯಿತು. ಇದನ್ನು ವಿವರಿಸಲು ಪಾಶ್ಚಿಮಾತ್ಯರ ಬಳಿ ಬೇರೆ ಶಬ್ದ, ಉಪಮೇಯಗಳಿರಲಿಲ್ಲ. ಅವರಿಗೆ ಧರ್ಮದ ಅರ್ಥವೇ ಅರಿವಾಗದೆ, ಅದನ್ನು ಸಂಕುಚಿತಗೊಳಿಸಿದರು ಎಂದು ವಿಶ್ಲೇಷಿಸಿದರು.
ಪಾಶ್ಚಿಮಾತ್ಯರು ತಮಗೆ ಬೇಕಾದಂತೆ ವಿಕೃತ, ವಿರೂಪಗೊಳಿಸಿದ ವಿಚಾರ ಸರಿಪಡಿಸುವ, ವಿಸ್ಮೃತಿ ಹೋಗಲಾಡಿಸುವ, ಜಗತ್ತಿನ ವಿವಿಧೆಡೆ ಉತ್ಕøಷ್ಟವಾದ್ದನ್ನು ಪಸರಿಸುವ, ನಮ್ಮ ನಡುವಿನ ಗೊಂದಲ ನಿವಾರಿಸುವ ಮತ್ತು ಸಂಸ್ಕøತಿಯ ಕಲ್ಪನೆಗಳನ್ನು, ವಿಚಾರಗಳನ್ನು ಸಮರ್ಥವಾಗಿ ಪರಾಮರ್ಷಿಸುವ ಕೃತಿ ಈಗ ನಮ್ಮ ಮುಂದಿದೆ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅಗತ್ಯವಿರುವ ಮಾಹಿತಿ ಮತ್ತು ಸಂಕುಚಿತ ಹಾಗೂ ವಿಕೃತಗೊಳಿಸಿದ್ದ ಪ್ರಮುಖ ಶಬ್ದಗಳ ಸಮರ್ಪಕ ವಿವರಣೆ ಇದರಲ್ಲಿ ದೊರೆಯುತ್ತದೆ ಎಂದರು.
ರಾಜೀವ್ ಮಲ್ಹೋತ್ರಾ ಹಾಗೂ ಸತ್ಯನಾರಾಯಣದಾಸ್ ಬಾಬಾಜಿಯವರು ರಚಿಸಿದ ಸಂಸ್ಕøತ ನಾನ್-ಟ್ರಾನ್ಸೇಟಬಲ್ಸ್, ಇಂಗ್ಲಿಷನ್ನು ಸಂಸ್ಕøತೀಕರಣ ಮಾಡಬೇಕಾದ ಪ್ರಾಮುಖ್ಯತೆ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನಡೆದ ಸಂವಾದದಲ್ಲಿ ಡಾ.ಸುಭಾಷ್ ಕಾಕ್, ಡಾ.ಕಪಿಲ್ ಕಪೂರ್, ಸಂಸದ ಡಾ.ಸುಬ್ರಮಣಿಯನ್ ಸ್ವಾಮಿ, ಚಾಮು ಕೃಷ್ಣ ಶಾಸ್ತ್ರಿ, ಮಧು ಕಿಶ್ವಾರ್, ನಿಕುಂಜ್ ತ್ರಿವೇದಿ, ಅರ್ಣವ್ ಕೇಜ್ರಿವಾಲ್ ಭಾಗವಹಿಸಿದ್ದರು.