ಬೆಂಗಳೂರು: ಮುಂದಿನ ಒಂದು ವರ್ಷ ಕನ್ನಡ ಕಾಯಕ ವರ್ಷವಾಗಿ ಆಚರಿಸಲಾಗುತ್ತಿದ್ದು, ಶೀಘ್ರವೇ ಆಚರಣೆ ಕುರಿತ ರೂಪುರೇಷೆಗಳನ್ನು ಪ್ರಕಟ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಅಭಿಯಾನ ಭಾನುವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣವನ್ನು ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದ ಧ್ವಜರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನವೆಂಬರ್ ತಿಂಗಳಿಗೆ ಸೀಮಿತವಾಗದೆ ವರ್ಷ ಪೂರ್ತಿ ಆಚರಣೆ ನಡೆಸಬೇಕು. ಕೇಂದ್ರ ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜರಿಗೊಳಿಸುತ್ತಿದ್ದು ಇದರಿಂದ ಪ್ರಾದೇಶಿಕ ಭಾಷೆ ಕಲಿಕೆಗೆ ಅನುಕೂಲವಾಗಲಿದೆ.ರಾಜ್ಯವು ಮಾಹಿತಿ ತಂತ್ರe್ಞನದಲ್ಲಿ ಮುಂಚೂಣಿಯಲ್ಲಿದೆ. ತಂತ್ರ ನಮ್ಮನ್ನು ಆವರಿಸಿದ್ದು ಇದು ನಮ್ಮ ಸಂಸ್ಕøತಿ ಮೇಲೆಯೂ ಪ್ರಭಾವ ಬೀರಿದೆ. ಕನ್ನಡವನ್ನು ಕಂಪ್ಯೂಟರೀಕರಣ ಮಾಡುವಲ್ಲಿ ಗಣಕ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಕಾರ್ಯಪ್ರವೃತ್ತವಾಗಿವೆ. ಭಾಷೆಯನ್ನು ಕಾಪಾಡುವುದು ಎಲ್ಲರ ಹೊಣೆಯಾಗಿದ್ದು ಈ ನಿಟ್ಟಿನಲ್ಲಿ ಮುಂದಿನ ಅ.31 ರವರೆಗೆ ಕನ್ನಡ ಕಾಯಕ ವರ್ಷವಾಗಿ ಆಚರಿಸಲಾಗುವುದು ಎಂದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿ, ಕನ್ನಡ ಕುರಿತ ಸರ್ಕಾರದ ಬದ್ದತೆ ಪ್ರಶ್ನಾತೀತ. ಕನ್ನಡದ ಹೊರತಾಗಿ ನಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳಲು ಅಸಾಧ್ಯ. 8 ಪೀಠ ಪ್ರಶಸ್ತಿ ಪಡೆದ ಕನ್ನಡ ಭಾಷೆ ಶ್ರೀಮಂತ ಭಾಷೆಯಾಗಿದ್ದು, ಇಲ್ಲಿ ವಿದ್ಯಾಭ್ಯಾಸ ಮಾಡಲು ವಿದೇಶದ ವಿದ್ಯಾರ್ಥಿಗಳು ಆಗಮಿಸುತ್ತಿ. ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಅನುಕೂಲವಾಗಲು ಎನ್ ಸಿಇಆರ್ ಟಿ ಪಠ್ಯಕ್ರಮವನ್ನು ಕನ್ನಡದಲ್ಲಿ ಪ್ರಕಟಿಸುತ್ತಿದ್ದೇವೆ. ಸರ್ಕಾರದ ಕನ್ನಡ ಕುರಿತ ಬದ್ಧತೆ ಪ್ರಶ್ನಾತೀತ. ಈ ಸಂದರ್ಭದಲ್ಲಿ ನಮ್ಮ ವಿಶಾಲ ಕರ್ನಾಟಕದ ಏಕೀಕರಣಕ್ಕೆ ದುಡಿದ ಹಾಗೆಯೇ ಕನ್ನಡ ಭಾಷೆಯ ಉಳಿವಿಗೆ ಶ್ರಮಿಸಿದ ಎಲ್ಲ ಮಹನೀಯರನ್ನು ಸ್ಮರಿಸುತ್ತೇನೆ. ಕರ್ನಾಟಕ ಹೆಸರಾದಂತೆ ಕನ್ನಡವನ್ನು ನಮ್ಮ ಉಸಿರಾಗಿಸಿಕೊಳ್ಳುವ ಮೂಲಕ ನಾವು ನಮ್ಮ ಭಾಷೆಯ ಉಳಿವಿಗೆ ಪ್ರತಿಕ್ಷಣವೂ ತೊಡಗಿಸಿಕೊಳ್ಳಬೇಕಿದೆ ಎಂದರು.
ಶಿವಾಜಿನಗರ ವಿಧಾನ ಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಆರ್ಷದ್, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಹಿರಿಯ ಅಕಾರಿಗಳಾದ ರಮಣ ರೆಡ್ಡಿ, ವಿ.ಅನ್ಬು ಕುಮಾರ್,ಆರ್.ಸ್ನೇಹಲ್, ಎಂ.ದೀಪಾ, ಜಿಲ್ಲಾಕಾರಿ ಶಿವಮೂರ್ತಿ ಸೇರಿದಂತೆ ಮತ್ತಿತರರು ಹಾಜರಿದ್ದರು.