ಶಿವಮೊಗ್ಗ : ಹಿಮಾಚಲ ಪ್ರದೇಶದಲ್ಲಿ ನಿರ್ಮಿಸಿರುವ ವಿಶ್ವದಲ್ಲೇ ಅತಿ ಉದ್ದದ ಅಟಲ್ಸುರಂಗ ಮಾರ್ಗದವರೆಗೆ ಶಿವಮೊಗ್ಗ ಸೈಕಲ್ ಕ್ಲಬ್ ಸದಸ್ಯ ಸಿದ್ದೇಶ್ವರ ಸಾಹಸ ಯಾತ್ರೆ ಆರಂಭಿಸಿದ್ದಾರೆ. ಈ ಸಾಹಸಿಗೆ ಕ್ಲಬ್ ಸದಸ್ಯರು ಗುರುವಾರ ಬೀಳ್ಕೊಟ್ಟರು.
ಶಿವಮೊಗ್ಗದಿಂದ ಸುಮಾರು 2700 ಕಿ.ಮೀ.ದೂರದ ಸಾಹಸ ಸೈಕಲ್ಯಾತ್ರೆಗೆ ನಗರದ ಕೋಟೆ ಸೀತಾರಾಮಾಂಜನೇಯ ದೇವಾಲಯದ ಮುಂಭಾಗದಿಂದ ಚಾಲನೆ ನೀಡಲಾಗಿದೆ. ಇವರೊಂದಿಗೆ ಕ್ಲಬ್ ಸದಸ್ಯರು ಸ್ವಲ್ಪದೂರ ಸೈಕಲ್ನಲ್ಲಿ ತೆರಳಿ ಹಾರ್ದಿಕವಾಗಿ ಬೀಳ್ಕೊಟ್ಟರು.
ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 3 ರಂದು ಹಿಮಾಚಲ ಪ್ರದೇಶದಲ್ಲಿ ಅಟಲ್ ಸುರಂಗ ಮಾರ್ಗ ಉದ್ಘಾಟಿಸಿ ಗಮನ ಸೆಳೆದಿದ್ದರು. ದೇಶದ ಪ್ರಮುಖ ಸುರಂಗ ಮಾರ್ಗಗಳಲ್ಲಿ ಪ್ರಮುಖವಾಗಿದೆ. ಇದು ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿದೆ. ಅಂತಹ ಅಪರೂಪದ ಸ್ಥಳ್ಕಕೆ ಸಿದ್ದೇಶ್ವರ ಸೈಕಲ್ಯಾತ್ರೆ ಕೈಗೊಂಡಿದ್ದಾರೆ. 30 ದಿನಗಳಲ್ಲಿ ಯಾತ್ರೆ ಪೂರ್ಣಗೊಳಿಸುವ ವಿಶ್ವಾಸದೊಂದಿಗೆ ಸೈಕಲ್ ಏರಿದ್ದಾರೆ.
ಬೀಳ್ಕೊಡುಗೆ ಸಂದರ್ಭದಲ್ಲಿ ಸೈಕಲ್ ಕ್ಲಬ್ ಅಧ್ಯಕ್ಷ ಬಿ.ಎಸ್. ಶ್ರೀಕಾಂತ್, ಕಾರ್ಯದರ್ಶಿ ಗಿರೀಶ್ ಕಾಮತ್, ಹರೀಶ್ ಕಾರ್ಣಿಕ್, ನರಸಿಂಹಮೂರ್ತಿ, ಗುರುಮೂರ್ತಿ, ರಜನಿಕಾಂತ್, ಗಣೇಶ್ ಕಾಮತ್, ನಟರಾಜ್ ಮೊದಲಾದವರು ಇದ್ದರು.