ಚುನಾವಣೆ ಎಂದರೇನೇ ಬಿಜೆಪಿಯ ಗೆಲುವು, ಕಾಂಗ್ರೆಸ್ ಸೋಲು

ಶಿವಮೊಗ್ಗ: ದೇಶದಲ್ಲಿ ವಾತಾವರಣ ಹೇಗಿದೆ ಎಂದರೆ ಚುನಾವಣೆ ಎಂದರೇನೇ ಬಿಜೆಪಿಯ ಗೆಲುವು, ಕಾಂಗ್ರೆಸ್ ಸೋಲು ಎಂಬಂತಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಂಗಳವಾರ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಗಳೊಂದಿಗೆ ಮಾತನಾಡಿ, ಶಿರಾ, ಆರ್.ಆರ್.ನಗರ ಕ್ಷೇತ್ರಗಳಲ್ಲಿ ಗೆz್ದÁಗಿದೆ. ಬಿಹಾರ ರಾಜ್ಯದಲ್ಲಿ ಸಮೀಕ್ಷೆಗಳನ್ನೂ ಮೀರಿ ಗೆಲ್ಲುತ್ತಿದ್ದೇವೆ. ಮಧ್ಯಪ್ರದೇಶದಲ್ಲಿ 17 ಬಿಜೆಪಿ ಸದಸ್ಯರು ಗೆಲ್ಲುತ್ತಿz್ದÁರೆ. ಯಾವ ಚುನಾವಣೆ ಬಂದರೂ ಬಿಜೆಪಿ ಗೆಲ್ಲುವಂತಾಗಿದೆ. ರಾಜ್ಯದಲ್ಲಿ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆ ಮತ್ತು ಬೆಳಗಾಂನ ಲೋಕಸಭಾ ಉಪಚುನಾವಣೆಯನ್ನು ಎದುರು ನೋಡ್ತಾ ಇದ್ದೇವೆ. ಇಲ್ಲೂ ಸಹ ಬಿಜೆಪಿ ಗೆಲ್ಲಲಿದೆ. ದೇಶದಲ್ಲಿ ಚುನಾವಣೆ ಎಂದರೇನೇ ಕಾಂಗ್ರೆಸ್ ಸೋಲು-ಬಿಜೆಪಿ ಗೆಲುವು ಎಂಬಂತಾಗಿದೆ ಎಂದರು.
ಉಪಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದರು. ಅದನ್ನು ಸವಾಲಿನ ರೂಪದಲ್ಲಿ ಸ್ವೀಕರಿಸಿದ್ದೆವು. ಅದೇ ರೀತಿ ಜನರು ಫಲಿತಾಂಶ ನೀಡಿದ್ದಾರೆ ಎಂದರು.
ಎಲ್ಲಾ ಫಲಿತಾಂಶ ನೋಡಿದರೆ ದೇಶದಲ್ಲಿ ಕಾಂಗ್ರೆಸ್ ಧೂಳೀಪಟವಾಗುತ್ತಿದೆ. ಬಿಜೆಪಿ ಪ್ರಬಲವಾಗಿ ಬೆಳೆಯುತ್ತಿದೆ. ಇದನ್ನೆಲ್ಲಾ ಗಮನಿಸಿದರೆ ದೇಶದಲ್ಲಿ ಮತ್ತೊಮ್ಮೆ ಚುನಾವಣೆ
ಶಿರಾ ಮತ್ತು ಆರ್ ಆರ್ ನಗರ ಉಪಚುನಾವಣೆ ನಂತರ ಸಚಿವ ಸಂಪುಟ ಪುನರ್ ರಚನೆ ಎಂದು ಹೇಳಲಾಗುತ್ತಿತ್ತು, ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಬೈ ಎಲೆಕ್ಷನ್ ಮುಗಿದ ನಂತರ ಸಿಎಂ ದೆಹಲಿಗೆ ಹೋಗ್ತೀನಿ ಎಂದಿದ್ದರು. ಯಾವಾಗ ಹೋಗ್ತಾರೋ ಬಿಡ್ತಾರೋ ಗೊತ್ತಿಲ್ಲ. ಆದರೆ ಸಚಿವ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ಹೈಕಮಾಂಡ್ ಮತ್ತು ಸಿಎಂಗೆ ಬಿಟ್ಟವಿಚಾರ ಎಂದು ತಿಳಿಸಿದರು.
ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಉಸ್ತುವಾರಿ ಸಮಿತಿ ಹಿಂಪಡೆಯಲು ಹೋರಾಟ ಸಮಿತಿ 15 ದಿನ ಗಡುವು ನೀಡಿದೆ. ಹಿಂಪಡೆಯದಿದ್ದರೆ ಹೋರಾಡುವುದಾಗಿ ಸಮಿತಿ ಸಭೆ ತೀರ್ಮಾನಿಸಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ