ಯುಎಸ್ ರಾಯಭಾರ ಕಚೇರಿಯ ಬಳಿ ಸರಣಿ ರಾಕೆಟ್ ದಾಳಿ

ಬಾಗ್ದಾದ್, ಜ.27- ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿರುವ ಯುಎಸ್ ರಾಯಭಾರ ಕಚೇರಿಯ ಬಳಿ ಸರಣಿ ರಾಕೆಟ್ ದಾಳಿಯಾಗಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

ಹೆಚ್ಚಿನ ಭದ್ರತೆ ಇರುವ ಹಸಿರು ವಲಯದ ಮೇಲೆ ಐದು ರಾಕೆಟ್??ಗಳು ಅಪ್ಪಳಿಸಿವೆ. ಘಟನೆಯಲ್ಲಿ ಯಾವುದೇ ಹಾನಿ, ಸಾವು ನೋವುಗಳು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಈ ಪ್ರದೇಶದಲ್ಲಿ ಅಮೆರಿಕ ರಾಯಭಾರ ಕಚೇರಿ ಸೇರಿದಂತೆ ಹಲವು ದೇಶಗಳ ರಾಯಭಾರ ಕಚೇರಿಗಳಿವೆ.ಜನವರಿ 3ರಂದು ಬಾಗ್ದಾದ್ ವಿಮಾನ ನಿಲ್ದಾಣದ ಹೊರಗೆ ಇರಾನ್ ಜನರಲ್ ಖಾಸಿಂ ಸೊಲೇಮಾನಿಯನ್ನು ಕೊಂದ ನಂತರ ಅಮೆರಿಕ ಮಿಲಿಟರಿ ಪಡೆ ವಿರುದ್ಧ ಇರಾನ್ ಆಕ್ರೋಶ ಹೆಚ್ಚಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ