ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಬಾಸ್ಕೆಟ್ ಬಾಲ್ ಆಟಗಾರ ಕೊಬೆ ಬ್ರಿಯಾಂಟ್

ಲಾಸ್‍ಎಂಜಲೀಸ್, ಜ.27- ವಿಶ್ವವಿಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ಕೊಬೆ ಬ್ರಿಯಾಂಟ್ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ನಿಧನಕ್ಕೆ ಕ್ರೀಡಾ ಲೋಕವೇ ಕಂಬನಿ ಮಿಡಿದಿದೆ.

ನಿನ್ನೆ ಲಾಸ್ ಎಂಜಲೀಸ್ ಸಮೀಪ ಹೆಲಿಕಾಪ್ಟರ್ ಪತನವಾಗಿತ್ತು. ಘಟನೆಯಲ್ಲಿ 41 ವರ್ಷದ ಬ್ರಿಯಾಂಟ್ ಹಾಗೂ 13 ವರ್ಷದ ಅವರ ಪುತ್ರಿ ಸಿಯಾನ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕೊಬೆ ಒಲಂಪಿಕ್ ಚಿನ್ನದ ಪದಕ ವಿಜೇತ ಕೂಡ. ಅಲ್ಲದೆ ಕ್ರೀಡಾ ಲೋಕದಲ್ಲಿ ಅಪ್ರತಿಮ ಸಾಧನೆ ಮಾಡಿ ದಂತಕಥೆ ಎನಿಕೊಂಡಿದ್ದ ಕೊಬೆ ಸಾವಿಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್, ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಸೇರಿದಂತೆ ಇಡೀ ಕ್ರೀಡಾ ಲೋಕವೇ ಕಂಬನಿ ಮಿಡಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ