ಪೌರತ್ವ ಕಾಯ್ದೆ ಪರ ಜಾಗೃತಿ: ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಬಿಎಸ್​ವೈ ಚಾಲನೆ

ಬೆಂಗಳೂರು: ದೇಶದೆಲ್ಲೆಡೆ ವಿವಾದ ಮತ್ತು ಪ್ರತಿಭಟನೆಗೆ ಕಾರಣವಾಗಿರುವ ಪೌರತ್ವ ಕಾಯ್ದೆ ವಿಚಾರದಲ್ಲಿ ಸಾರ್ವಜನಿಕರಲ್ಲಿ ಮೂಡಿರುವ ಅನುಮಾನಗಳಿಗೆ ತೆರೆ ಎಳೆಯಲು ಬಿಜೆಪಿಯಿಂದ ಜಾಗೃತಿ ಅಭಿಯಾನ ನಡೆಯುತ್ತಿದೆ. ರಾಜ್ಯಾದ್ಯಂತ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿಯಿಂದ ಮನೆ ಮನೆ ಅಭಿಯಾನ ಕಾರ್ಯಕ್ರಮ ಪ್ರಾರಂಭಗೊಂಡಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಸಂತನಗರದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ. ಮೋಹನ್, ವಿಧಾನಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ನೂರಾರು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭಾಗಿಯಾದರು. ಬೆಂಗಳೂರು ಉತ್ತರಕ್ಕೆ ಡಿವಿಎಸ್, ಬೆಂಗಳೂರು ದಕ್ಷಿಣಕ್ಕೆ ಅಶ್ವತ್ಥ ನಾರಾಯಣ, ಚಿಕ್ಕಬಳ್ಳಾಪುರಕ್ಕೆ ಶೋಭಾ ಕರಂದ್ಲಾಜೆ ಹೀಗೆ ಇಪ್ಪತ್ತಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ವಿವಿಧ ಮುಖಂಡರಿಗೆ ಅಭಿಯಾನದ ಜವಾಬ್ದಾರಿ ವಹಿಸಲಾಗಿದೆ.

ಸಿಎಎ ಜಾಗೃತಿ ಅಭಿಯಾನದ ಜವಾಬ್ದಾರಿ ಹೊತ್ತ ಮುಖಂಡರು:

ಬೆಂಗಳೂರು ಕೇಂದ್ರ – ಬಿ ಎಸ್ ಯಡಿಯೂರಪ್ಪ

ಹುಬ್ಬಳ್ಳಿ – ಧಾರವಾಡ – ಪ್ರಹ್ಲಾದ ಜೋಶಿ

ಬೆಂಗಳೂರು ಉತ್ತರ- ಡಿ ವಿ ಸದಾನಂದ ಗೌಡಬೆಂಗಳೂರು ದಕ್ಷಿಣ – ಸಿ ಎನ್ ಅಶ್ವಥ್ ನಾರಯಣ

ಬಳ್ಳಾರಿ – ಲಕ್ಷ್ಮಣ್ ಸವದಿ

ಗದಗ – ಗೋವಿಂದ ಕಾರಜೋಳ

ಧಾರವಾಡ – ಜಗದೀಶ್ ಶೆಟ್ಟರ್

ಶಿವಮೊಗ್ಗ – ಕೆ ಎಸ್ ಈಶ್ವರಪ್ಪ

ತುಮಕೂರು- ಆರ್ ಅಶೋಕ್

ಮೈಸೂರು – ಅರವಿಂದ್ ಲಿಂಬಾವಳಿ

ಚಿಕ್ಕಮಗಳೂರು- ಸಿಟಿ ರವಿ

ಬೆಂಗಳೂರು ಕೇಂದ್ರ – ಸೋಮಣ್ಣ

ಚಿತ್ರದುರ್ಗ- ಶಶಿಕಲಾ ಜೊಲ್ಲೆ

ಕೊಪ್ಪಳ – ಸಿ ಸಿ ಪಾಟೀಲ್

ದಕ್ಷಿಣ ಕನ್ನಡ – ಕೋಟಾ ಶ್ರೀನಿವಾಸ ಪೂಜಾರಿ

ಚಿಕ್ಕಬಳ್ಳಾಪುರ – ಶೋಭಾ ಕರಂದ್ಲಾಜೆ

ಹಾವೇರಿ – ಶಿವಕುಮಾರ್ ಉದಾಸಿ

ಬಾಗಲಕೋಟೆ – ಪಿಸಿ ಗದ್ದಿಗೌಡರ್

ವಿಜಯಪುರ- ರಮೇಶ್ ಜಿಗಜಿಣಗಿ

ಬೀದರ್ – ಭಗವಂತ ಕೂಬಾ

ಚಿಕ್ಕೋಡಿ – ಮಹಾಂತೇಶ್ ಕವಟಗಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ