ತಿರುವನಂತಪುರ, ಆ. 12- ಕಳೆದ ನಾಲ್ಕು ದಿನಗಳಿಂದಲೂ ಕೇರಳದಲ್ಲಿ ಭಾರೀ ಮಳೆ, ಭೀಕರ ಪ್ರವಾಹ ಮತ್ತು ಭೂ ಕುಸಿತಗಳಿಂದಾಗಿ ಮೃತಪಟ್ಟರ ಸಂಖ್ಯೆ 80ಕ್ಕೇರಿದೆ.
ವಿನಾಶಕಾರಿ ಪ್ರಕೃತಿವಿಕೋಪದಲ್ಲಿ ಅನೇಕರು ತೀವ್ರಗಾಯಗೊಂಡಿದ್ದು, 60 ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದಾರೆ. ಇದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕವಿದೆ.
ಭೂ ಕುಸಿತಗಳಿಂದ ಮಣ್ಣಿನ ಅವಶೇಷಗಳಡಿ ಸಿಲುಕಿರುವುದಾಗಿ ತೀವ್ರ ಶೋಧ ಕಾರ್ಯ ಮುಂದುವರೆದಿದೆ.
ಮುಂದಿನ ದಿನಗಳಲ್ಲಿ ಮಳೆ ಸ್ವಲ್ಪ ಕಡಿಮೆಯಾಗಬಹುದೆಂದು ಕೇರಳ ವಿಕೋಪ ನಿರ್ವಹಣಾ ಪ್ರಾಧಿಕಾರಿ ಮುನ್ಸೂಚನೆ ನೀಡಿದ್ದು, ಕಾಸರಗೋಡು, ಕಣ್ಣೂರು, ವೈನಾಡು, ಮಲ್ಲಾಪುರಂ, ಕೋಳಿಕೋಡು ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಇಂದು ಆರೆಂಜ್ ಆಲರ್ಟ್ ಘೋಷಣೆ ಮುಂದುವರೆದಿದೆ.
ಕೊಚ್ಚಿ ವಿಮಾನ ನಿಲ್ದಾಣವನ್ನು ಗುರುವಾರ ಸಂಜೆಯಿಂದಲೂ ಮುಚ್ಚಲಾಗಿದ್ದು, ಮಳೆ ಇಳಿಮುಖವಾದ ಹಿನ್ನೆಲೆಯಲ್ಲಿ ಕಾರ್ಯರಂಭ ಬಹುತೇಕ ರಸ್ತೆ ಹಾಗೂ ರೈಲು ಸಂಚಾರ ಯಥಾಸ್ಥಿತಿಗೆ ಮರಳಿದೆ.
ಮಳೆಯಿಂದಾಗಿ ನೂರಾರು ಜನರು ಮನೆ ಕಳೆದುಕೊಂಡಿದ್ದಾರೆ. ರಾಜ್ಯಾದ್ಯಂಕ 1639 ಪರಿಹಾರ ಕೇಂದ್ರಗಳಲ್ಲಿ ಸುಮಾರು 2.5 ಲಕ್ಷ ಜನರು ಆಶ್ರಯ ಪಡೆದುಕೊಂಡಿದ್ದಾರೆ. ವಯನಾಡು ಸೇರಿದಂತೆ ಕೇರಳದ ವಿವಿಧ ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಭೂ ಕುಸಿತಗಳಿಂದ ನಯನ ಮನೋಹರ ಹಸಿರು ಬೆಟ್ಟ-ಗುಡ್ಡಗಳು ಮಣ್ಣಿನಿಂದ ಮುಚ್ಚಿ ಹೋಗಿವೆ.
ಈ ಮಧ್ಯೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ದುರ್ಬಳಕೆಯಾಗಿದೆ ಎಂಬ ವರದಿಗಳನ್ನು ನಂಬಬಾರದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯï ವಿಜಯನ್ ಹೇಳಿದ್ದಾರೆ.
ಕೇರಳದಲ್ಲಿ ನೆರೆಯಿಂದಾಗಿ ಸುಮಾರು 3 ಸಾವಿರ ಮನೆಗಳಿಗೆ ಹಾನಿಯಾಗಿದೆ. 72 ಜನರು ಸಾವನ್ನಪ್ಪಿದ್ದು, 58 ಜನ ಕಣ್ಣರೆಯಾಗಿದ್ದಾರೆ. 32 ಮಂದಿ ಗಾಯಗೊಂಡಿದ್ದಾರೆ ಕಾಂಗ್ರೆಸ್ ಮುಖಂಡ ಶಶಿ ತರೂರು ಟ್ವೀಟ್ ಮಾಡಿದ್ದಾರೆ.
ವಯನಾಡಿನ ಮೆಪ್ಪಾಡಿಯಲ್ಲಿ ನೂರು ಎಕರೆ ಟೀ ತೋಟ, ಮಸೀದಿ, ದೇವಸ್ಥಾನಗಳು,ಮೊನ್ನೆ ಸಂಭವಿಸಿದ ಭೂಕುಸಿತದಲ್ಲಿ ನೆಲಕಚ್ಚಿವೆ. ನಿನ್ನೆ ದಿನ ಮೃತದೇಹವೊಂದು ಸಿಕ್ಕಿದ್ದು, ಇನ್ನೂ ಎಂಟು ಮಂದಿ ಕಣ್ಮರೆಯಾಗಿದ್ದಾರೆ.75 ಜನರನ್ನು ರಕ್ಷಿಸಲಾಗಿದೆ.