ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ ಹಿನ್ನಲೆ-13 ಜಿಲ್ಲೆಗಳ 7508 ಮನೆಗಳಿಗೆ ಹಾನಿ

ಬೆಂಗಳೂರು,ಆ.9-ರಾಜ್ಯದ ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ 13 ಜಿಲ್ಲೆಗಳಲ್ಲಿ 7508 ಮನೆಗಳಿಗೆ ಹಾನಿಯಾಗಿದ್ದು, 467 ಶಿಬಿರಗಳನ್ನು ಸರ್ಕಾರ ತೆರೆದಿದೆ.

ಬೆಳಗಾವಿ ಜಿಲ್ಲೆಯಲ್ಲಿ 5148 ಮನೆಗಳು, ಉತ್ತರ ಕನ್ನಡ ಜಿಲ್ಲೆಯಲ್ಲಿ 1763 ಮನೆಗಳು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 195 ಮನೆಗಳು, ಶಿವಮೊಗ್ಗ ಜಿಲ್ಲೆಯಲ್ಲಿ 341 ಮನೆಗಳು, ಕೊಡಗು ಜಿಲ್ಲೆಯಲ್ಲಿ 5 ಮನೆಗಳು, ಹಾಸನದಲ್ಲಿ 24 ಮನೆಗಳು ಹಾಗೂ ದಾವಣಗೆರೆ 32 ಮನೆಗಳು ಹಾನಿಯಾದ ವರದಿಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇದುವರೆಗೂ 1,24, 291 ಜನರನ್ನು ರಕ್ಷಣೆ ಮಾಡಲಾಗಿದ್ದು, 94,662 ಮಂದಿ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 77761 ಜನರು, ಬಾಗಲಕೋಟೆ ಜಿಲ್ಲೆಯಲ್ಲಿ 6188, ರಾಯಚೂರು ಜಿಲ್ಲೆಯಲ್ಲಿ 85, ಉತ್ತರಕನ್ನಡ ಜಿಲ್ಲೆಯಲ್ಲಿ 9815, ಶಿವಮೊಗ್ಗದಲ್ಲಿ 700 ಹಾಗೂ ದಾವಣಗೆರೆ ಜಿಲ್ಲೆಯಲ್ಲಿ 113 ಜನರಿಗೆ ಕ್ಯಾಂಪ್‍ಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ 8, ಉತ್ತರಕನ್ನಡ 2, ಶಿವಮೊಗ್ಗ 1 ಸೇರಿದಂತೆ ಒಟ್ಟು 11 ಮಂದಿ ಸಾವಿಗೀಡಾಗಿದ್ದು, 113 ಜಾನುವಾರುಗಳು ಸತ್ತಿವೆ.

51 ತಾಲ್ಲೂಕುಗಳು ಅತಿವೃಷ್ಟಿಗೆ ಒಳಗಾಗಿದ್ದು, 732 ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ. ಬೆಳಗಾವಿ 98607, ಬಾಗಲಕೋಟೆ 21360, ರಾಯಚೂರು 383, ಯಾದಗಿರಿ 40, ಉತ್ತಕನ್ನಡದ 3088, ಶಿವಮೊಗ್ಗ 700, ದಾವಣಗೆರೆ 113 ಸೇರಿದಂತೆ ಒಟ್ಟು 1,24,291 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇದುವರೆಗೂ 16,891 ಜಾನುವಾರುಗಳನ್ನು ರಕ್ಷಿಸಿದ್ದು, 310 ಗೋಶಾಲೆಗಳನ್ನು ತೆರೆಯಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ