ರಾಜಧಾನಿಗೂ ಎದುರಾಗಲಿರುವ ಜಲ ಗಂಡಾಂತರ

ಬೆಂಗಳೂರು, ಆ.9- ಅಯ್ಯೋ.. ಅಯ್ಯಯ್ಯೋ… ಇಡೀ ಉತ್ತರ ಕರ್ನಾಟಕ ಮಳೆಯಿಂದ ತತ್ತರಿಸಿ ಹೋಗಿದೆ. ಅಲ್ಲಿನ ಜನ ಜೀವನ ಮಾಡೋದು ಕಷ್ಟಸಾಧ್ಯ. ನಾವೇ ಪುಣ್ಯವಂತರು ಅಂದುಕೊಂಡಿರಾ… ಹೀಗಂತ ನೀವು ತಿಳ್ಕೊಂಡ್ರೆ ಅದು ನಿಮ್ಮ ಭ್ರಮೆ ಅಷ್ಟೆ.

ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ದೊರೆತಿದ್ದು, ರಾಜಧಾನಿಗೂ ಜಲ ಗಂಡಾಂತರ ಎದುರಾಗಲಿದೆ.

ನಿರೀಕ್ಷೆಯಂತೆ ಬೆಂಗಳೂರಿನಲ್ಲಿ ಭಾರೀ ಮಳೆಯಾದರೆ ಇಡೀ ನಗರವೇ ತತ್ತರಿಸಿಹೋಗುವುದು ಗ್ಯಾರಂಟಿ. 198 ವಾರ್ಡ್ ಗಳಲ್ಲಿ 182 ಅಪಾಯಕಾರಿ ಸ್ಥಳಗಳಿದ್ದು, ಈ ಪ್ರದೇಶಗಳು ಸಂಪೂರ್ಣ ಜಲಾವೃತಗೊಳ್ಳಲಿದ್ದು, ಭಾರೀ ದುಷ್ಪರಿಣಾಮ ಎದುರಿಸಬೇಕಾಗುತ್ತದೆ.

ಎಲ್ಲಿದೆ ಅಪಾಯಕಾರಿ ಸ್ಥಳ 
ಪೂರ್ವ ವಲಯ:
ಪೂರ್ವದಲ್ಲಿ 11 ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಬ್ರಾಡ್ ವೇ ರಸ್ತೆ, ಆರ್ಮ್‍ಸ್ಟ್ರಾಂಗ್ ಜಂಕ್ಷನ್, ಎಂವಿಗಾರ್ಡನ್, ವಿವೇಕಾನಂದನಗರ, ಸ್ವೀಪರ್ಸ್ ಕಾಲೋನಿ, ಸುಬ್ಬಯ್ಯನಪಾಳ್ಯ, ಟಿಂಬರ್ ಲೇಔಟ್, ಕಲ್ಯಾಣನಗರ, ಚಲ್ಲಕೆರೆ ವ್ಯಾಪ್ತಿ.

ಪಶ್ಚಿಮ:
ಈ ವಲಯದಲ್ಲಿ 33 ಅಪಾಯಕಾರಿ ಸ್ಪಾಟ್‍ಗಳನ್ನು ಪತ್ತೆಹಚ್ಚಲಾಗಿದೆ. ಮಂತ್ರಿಮಾಲ್, ಗೋಪಾಲಪುರ, ಕೆಂಪೇಗೌಡನಗರ, ಕಮಲಾನಗರ, ಗುಟ್ಟಹಳ್ಳಿ, ಮಲ್ಲೇಶ್ವರಂ ಲಿಂಕ್‍ರಸ್ತೆ, ನಂದಿನಿ ಲೇಔಟ್, ಯಶವಂತಪುರ ಟಿಟಿಎಂಸಿ, ಎನ್‍ಜಿಇಎಫ್ ಲೇಔಟ್, ಕಲ್ಯಾಣನಗರ, ಬಿನಿಮಿಲ್, ರಾಯಪುರಂ, ಚಾಮರಾಜಪೇಟೆ, ಸುಮನಹಳ್ಳಿ, ಸಾಕಮ್ಮ ಬಡಾವಣೆ.

ದಕ್ಷಿಣ ವಲಯ:
ಇಲ್ಲಿನ 26 ಪ್ರದೇಶಗಳಾದ ಕವಿಕಾ ಲೇಔಟ್, ಕೆಂಪಾಪುರ, ವೃಷಭಾವತಿ ಕಣಿವೆ ವ್ಯಾಪ್ತಿ, ಚೋಳೂರುಪಾಳ್ಯ, ರಂಗನಾಥ ಕಾಲೋನಿ, ಮುನೇಶ್ವರನಗರ, ಗಾಳಿ ಆಂಜನೇಯ ದೇವಸ್ಥಾನ, ಕಾಳಿದಾಸನಗರ, ಯಡಿಯೂರು, ಬಾಪೂಜಿನಗರ, ದ್ವಾರಕಾನಗರ, ಕಾಮಕ್ಯಲೇಔಟ್‍ಗಳಲ್ಲಿ ಜಲ ಕಂಕಟ ಎದುರಾಗಲಿದೆ.

ಕೋರಮಂಗಲ ಕಣಿವೆ ವ್ಯಾಪ್ತಿಯ ಪಾಮ್‍ಗ್ರೋವ್ ರಸ್ತೆ, ವಿನಾಯಕನಗರ, ಮೈಕೆಲ್ ಚರ್ಚ್ ಪ್ರದೇಶ, ಆನೆಪಾಳ್ಯ, ಕುಂಬಾರಗುಂಡಿ, ಅಭಯ ಆಸ್ಪತ್ರೆ, ಜೆ.ಸಿ.ರೋಡ್, ಬೈರಸಂದ್ರ, ಸಿಲ್ಕ್‍ಬೋರ್ಡ್ ಜಂಕ್ಷನ್, ನವೋದಯ ಲೇಔಟ್, ಈಜಿಪುರ, ತಾವರೆಕೆರೆ, ಬಿಟಿಎಂಲೇಔಟ್, ಕೋರಮಂಗಲ 4ನೇ ಬ್ಲಾಕ್ 22 ಪ್ರದೇಶಗಳು ಅಪಾಯಕಾರಿ ಸ್ಥಳಗಳೆಂದು ಗುರುತಿಸಲಾಗಿದೆ.

ಯಲಹಂಕ:
ಯಲಹಂಕದ ಕರಿಯಪ್ಪನಪಾಳ್ಯ, ಮಾನ್ಯತಾಟೆಕ್‍ಪಾರ್ಕ್, ಟಾಟಾನಗರ, ತಿಂಡ್ಲುಕೆರೆ , ದೊಡ್ಡಬೊಮ್ಮಸಂದ್ರ ಕೆರೆ, ಯೋಗೇಶ್ವರ್‍ನಗರದ ಐದು ಪ್ರದೇಶಗಳು, ಮಹಾದೇವಪುರದ ಮಹೇಶ್ವರಿನಗರ, ಪಟ್ಟಂದೂರು ಅಗ್ರಹಾರ, ವರ್ತೂರು ಕೋಡಿ, ದೊಡ್ಡನಕ್ಕುಂದಿ, ಮಾರತಹಳ್ಳಿ, ರಾಮಮೂರ್ತಿನಗರ, ಕೌದೇವನಹಳ್ಳಿ, ದೇವಸಂದ್ರ, ಎನ್‍ಆರ್‍ಐ ಲೇಔಟ್, ಅಂಬೇಡ್ಕರ್ ಸ್ಲಮ್, ವಿನಾಯಕ ಲೇಔಟ್ ವ್ಯಾಪ್ತಿಯ 15 ಪ್ರದೇಶಗಳು, ಬೊಮ್ಮನಹಳ್ಳಿಯ ಎಚ್‍ಎಸ್‍ಆರ್ ಲೇಔಟ್, ಹೊಂಗಸಂದ್ರ, ಡಾಲರ್ಸ್ ಕಾಲೋನಿ, ಬಿಳೇಕಳ್ಳಿ, ಆಕ್ಸ್‍ಫರ್ಡ್ ಕಾಲೇಜು, ಹುಳಿಮಾವು, ಎನ್.ಎಸ್.ಪಾಳ್ಯದ 7 ಪ್ರದೇಶಗಳು.

ಆರ್‍ಆರ್ ನಗರ:
ಬಂಗಾರಪ್ಪನಗರ, ಬಂಡೆಮಠ, ದುಬಾಸಿಪಾಳ್ಯ, ಗ್ಲೋಬಲ್ ವಿಲೇಜ್, ಆಂಜನಪ್ಪಲೇಔಟ್, ಕೆಂಪೇಗೌಡನಗರ, ಹೇರೋಹಳ್ಳಿ, ಕೆಂಚನಹಳ್ಳಿ, ರಘುವನಹಳ್ಳಿ, ಅಂಚೆಪಾಳ್ಯ, ಗುರುದತ್ತನಗರ, ಶಂಕರಪ್ಪ ಲೇಔಟ್, ಮಾದೇಶ್ವರನಗರ, ಉಲ್ಲಾಳು ಹಾಗೂ ದಾಸರಹಳ್ಳಿ ವಲಯದ ಜನತಾ ಕಾಲೋನಿ, ವಿಘ್ನೇಶ್ವರ ಲೇಔಟ್, ಸಿದ್ದೇಶ್ವರ ಲೇಔಟ್, ಗುಂಡಪ್ಪ ಲೇಔಟ್, ಕಮ್ಮಗೊಂಡನಹಳ್ಳಿ, ಕಸ್ತೂರಿ ಬಡಾವಣೆ, ಲಕ್ಷ್ಮಣನಗರ, ಶಿವಪುರ, ಶಾಂಭವಿನಗರ, ಬಗಲಗುಂಟೆ, ಚೊಕ್ಕಸಂದ್ರ, ಹೊಯ್ಸಳನಗರ, ಸುಂಕದಕಟ್ಟೆ, ಹೆಗ್ಗನಹಳ್ಳಿ ತಗ್ಗುಪ್ರದೇಶಗಳಿಗೆ ನೀರು ಹರಿದು ಜನ ತಾಪತ್ರಯಕ್ಕೆ ಒಳಗಾಗುವುದು ಗ್ಯಾರಂಟಿ.

ಪ್ರತಿ ಬಾರಿ ಮಳೆಯಾದಾಗಲೂ ಭವಿಷ್ಯದಲ್ಲಿ ಮತ್ತೆ ತೊಂದರೆ ಎದುರಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡುವ ಬಿಬಿಎಂಪಿ ಈ ಬಾರಿಯೂ ಅನಾಹುತ ತಪ್ಪಿಸಲು ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ.

ಹವಾಮಾನ ಇಲಾಖೆ ಮಾಹಿತಿಯಂತೆ ನಗರದಲ್ಲಿ ಭಾರೀ ಪ್ರಮಾಣದ ಮಳೆಯಾದರೆ ಈ ಎಲ್ಲಾ 182 ಅಪಾಯಕಾರಿ ಸ್ಥಳಗಳು ಜಲಾವೃತಗೊಳ್ಳಲಿದೆ.

ಬಿಬಿಎಂಪಿ ಮೇಲೆ ಭರವಸೆ ಇಡದೆ ಈ ಭಾಗದ ಜನರು ತಾವೇ ತಮ್ಮ ಸಮಸ್ಯೆ ಬಗೆಹಸಿಕೊಳ್ಳುವತ್ತ ಗಮನಹರಿಸುವುದು ಒಳಿತು. ಇಲ್ಲದಿದ್ದಲ್ಲಿ ಮಳೆ ಅನಾಹುತದಿಂದ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ