![owner_VG_Siddhartha](http://kannada.vartamitra.com/wp-content/uploads/2019/07/owner_VG_Siddhartha-508x381.jpg)
ನವದೆಹಲಿ,ಜು.30- ಕಣ್ಮರೆಯಾಗಿರುವ ಕೆಫೆ ಕಾಫಿ ಡೇ ಸಂಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಅವರ ಪತ್ತೆಗಾಗಿ ಭಾರತೀಯ ಕರಾವಳಿ ರಕ್ಷಣಾ ಪಡೆಯ ನೌಕೆಯೊಂದು ಹಳೇಮಂಗಳೂರು ಬಂದರಿನತ್ತ ತೆರಳಿದ್ದು ಶೋಧ ಕಾರ್ಯಾಚರಣೆಗೆ ನೆರವಾಗಲಿದೆ.
ಈ ಕುರಿತು ಇಂದು ಮಧ್ಯಾಹ್ನ ಕರಾವಳಿ ರಕ್ಷಣಾ ಪಡೆ ಪ್ರಕಟಣೆ ಮೂಲಕ ಈ ವಿಷಯ ತಿಳಿಸಿದೆ. ಈ ನೌಕೆಯೊಂದಿಗೆ ಮುಳುಗು ತಜ್ಞರ ಮೂರು ಪ್ರತ್ಯೇಕ ತಂಡಗಳು ಸಹ ಶೋಧ ಕಾರ್ಯಾಚರಣೆಯಲ್ಲಿ ತೊಡಗಲಿವೆ.
ಈಗಾಗಲೇ ಮಂಗಳೂರು ಕರಾವಳಿ ಪ್ರದೇಶದಲ್ಲಿ ಸಿದ್ದಾರ್ಥ್ಗಾಗಿ ತೀವ್ರ ಶೋಧ ಮುಂದುವರೆದಿದೆ.