ಮೈತ್ರಿ ಸರ್ಕಾರದಲ್ಲಿ ಹಿರಿಯ ಅಧಿಕಾರಿಗಳಿಗೆ ಹೆಚ್ಚಿನ ಜವಬ್ದಾರಿ-ಆಡಳಿತ ಯಂತ್ರ ಕುಸಿಯಲು ಕಾರಣ

ಬೆಂಗಳೂರು, ಜು.30-ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಆಡಳಿತ ಯಂತ್ರ ಕುಸಿಯಲು ಹಿರಿಯ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದು ಪ್ರಮುಖ ಕಾರಣವಾಗಿದೆ. ಐಎಎಸ್ ಅಧಿಕಾರಿಗಳಿಗೆ ಕನಿಷ್ಠ 3 ರಿಂದ 5 ಇಲಾಖೆಗಳ ಜವಾಬ್ದಾರಿಯನ್ನು ನೀಡಲಾಗಿತ್ತು. ಕೆಲಸದ ಒತ್ತಡ ಹೆಚ್ಚಾಗಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬ ಅಭಿಪ್ರಾಯ ಆಡಳಿತ ವರ್ಗದಲ್ಲಿ ಕೇಳಿ ಬರುತ್ತಿದೆ.

ಬಹಳಷ್ಟು ಐಎಎಸ್ ಅಧಿಕಾರಿಗಳಿಗೆ ಅಧಿಕೃತವಾದ ತಮ್ಮ ಇಲಾಖೆ ಜವಾಬ್ದಾರಿ ಜೊತೆಗೆ ಎರಡು-ಮೂರು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಉಸ್ತುವಾರಿಯನ್ನು ನೀಡಲಾಗಿತ್ತು. ಒಬ್ಬರೇ ಅಧಿಕಾರಿಗೆ ಮೂರರಿಂದ ಐದು ಇಲಾಖೆ ಹಾಗೂ ಸಂಸ್ಥೆಗಳ ಜವಾಬ್ದಾರಿಯನ್ನು ವಹಿಸಲಾಗಿತ್ತು. ಬಹಳಷ್ಟು ಅಧಿಕಾರಿಗಳು ಒಂದಕ್ಕಿಂತ ಹೆಚ್ಚಿನ ಹುದ್ದೆಯನ್ನು ನಿರ್ವಹಣೆ ಮಾಡುತ್ತಿದ್ದರು. ಇದರಿಂದ ಅವರು ವಹಿಸಿಕೊಂಡ ಜವಾಬ್ದಾರಿ ಒತ್ತಡ ಹೆಚ್ಚಾಗಿ ಕೆಲಸದಲ್ಲಿ ದಕ್ಷತೆ ತೋರಲು ಸಾಧ್ಯವಾಗಲಿಲ್ಲ.

ಹೀಗಾಗಿ ಸಾರ್ವಜನಿಕರಿಗೂ ಸಕಾಲದಲ್ಲಿ ಅಧಿಕಾರಿಗಳು ಲಭ್ಯವಾಗುತ್ತಿರಲಿಲ್ಲ. ಅಲ್ಲದೆ ಕೆಲಸ ಕಾರ್ಯಗಳು ಸುಗಮವಾಗಿ ಆಗದೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಬ್ಬ ಅಧಿಕಾರಿಗೆ ಒಂದು ಇಲಾಖೆಯ ಹೊಣೆಯನ್ನು ವಹಿಸಿದ್ದರೆ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಿತ್ತು. ಒಂದು ವೇಳೆ ತಾತ್ಸಾರ ಮಾಡಿದ್ದರೆ ಅವರ ಮೇಲೆ ಶಿಸ್ತು ಕ್ರಮ ಜರುಗಿಸಬಹುದಿತ್ತು.

ಮೈತ್ರಿ ಸರ್ಕಾರ ಈ ಬಗ್ಗೆ ಗಮನ ಹರಿಸದಿದ್ದು, ಆಡಳಿತ ಯಂತ್ರ ಕುಸಿಯಲು ಸರ್ಕಾರದ ವಿರುದ್ಧ ಜನರ ಅಸಮಾಧಾನ ಹೆಚ್ಚಾಗಲು ಕಾರಣವಾಯಿತು. ಕಳೆದ ಒಂದು ವರ್ಷದಿಂದಲೂ ಮೈತ್ರಿ ಸರ್ಕಾರದ ಅಬದ್ಧತೆಯೇ ಹೆಚ್ಚಾಗಿ ಕಾಡಿದ್ದು ಮತ್ತೊಂದು ಕಾರಣ.

ಈ ಸರ್ಕಾರ ಎಷ್ಟು ದಿನ ಇರುತ್ತೋ ಅಥವಾ ಯಾವಾಗ ಪತನವಾಗುತ್ತದೋ ಎಂಬ ಅನಿಶ್ಚಿತತೆಯಲ್ಲೇ ಕಾಲ ನೂಕಲಾಯಿತು. ಅಧಿಕಾರ ವರ್ಗದಲ್ಲೂ ಕೂಡ ಸರ್ಕಾರದ ಸ್ಥಿರತೆ ಬಗ್ಗೆ ನಂಬಿಕೆ ಇಲ್ಲದೆ ಇದ್ದದ್ದು ಒಂದು ಪ್ರಮುಖ ಕಾರಣವಾಗಿದೆ.

ಇದರ ಪರಿಣಾಮ ಆಡಳಿತದ ಮೇಲೆ ಉಂಟಾಗಿದ್ದು, ಜನರು ಸಂಕಷ್ಟ ಎದುರಿಸುವಂತಾಯಿತು. ಇದರ ವಾಸ್ತವ ಸ್ಥಿತಿಯನ್ನು ಅರಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ನಿನ್ನೆ ಆಡಳಿತ ಯಂತ್ರ ಕುಸಿದಿರುವುದನ್ನು ಪ್ರಸ್ತಾಪಿಸಿದ ನಾಲ್ಕೈದು ತಿಂಗಳಲ್ಲಿ ಆಡಳಿತ ಯಂತ್ರವನ್ನು ಸರಿದಾರಿಗೆ ತಂದು ಚುರುಕುಗೊಳಿಸುವುದಾಗಿ ಭರವಸೆ ನೀಡಿದ್ದಾರೆ.

ಆಡಳಿತ ಯಂತ್ರ ಕುಸಿದಿತ್ತು ಎಂಬ ಮುಖ್ಯಮಂತ್ರಿಯವರ ಆರೋಪವನ್ನು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಯವರು ಅಲ್ಲಗಳೆದು ಮೈತ್ರಿ ಸರ್ಕಾರ ಜನಪರವಾಗಿ ಉತ್ತಮ ಆಡಳಿತ ನೀಡಿದೆ ಎಂದು ಸದನದಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಮೈತ್ರಿ ಸರ್ಕಾರದ ಆಡಳಿತ ಉತ್ತಮ ರೀತಿಯಲ್ಲಿ ನಡೆಯುತ್ತಿರಲಿಲ್ಲ. ಒಂದೊಂದು ಕೆಲಸಕ್ಕೂ ಹತ್ತಾರು ಬಾರಿ ಅಲೆದಾಡಬೇಕಾದ ಪರಿಸ್ಥಿತಿ ಇತ್ತು ಎಂಬುದು ಬಹು ಜನರ ಅಭಿಪ್ರಾಯವಾಗಿದೆ. ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಸರ್ಕಾರದ ಆಡಳಿತ ಯಂತ್ರ ಚುರುಕುಗೊಂಡಿತ್ತೇ ಹೊರತು ಅಲ್ಲಿಯವರೆಗೂ ಮಂದಗತಿಯಲ್ಲಿ ಸಾಗಿತ್ತು ಎಂಬ ಆರೋಪ ಇದೆ.

ಕಾಂಗ್ರೆಸ್-ಜೆಡಿಎಸ್‍ನ ಹಲವು ಶಾಸಕರೇ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆದಿಲ್ಲ ಎಂಬ ಆರೋಪವನ್ನು ಮಾಡಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಹುತೇಕ ಶಾಸಕರು ಕೂಡ ತಮ್ಮ ಕೆಲಸ-ಕಾರ್ಯಗಳು ಸರ್ಕಾರದಲ್ಲಿ ಆಗುತ್ತಿಲ್ಲ ಎಂಬ ಆರೋಪವನ್ನೇ ಪ್ರಮುಖವಾಗಿ ಪ್ರಸ್ತಾಪಿಸಿದ್ದರು. ಈ ಆರೋಪದಲ್ಲಿ ಕೆಲವು ವಾಸ್ತವಾಂಶಗಳು ಒಳಗೊಂಡಿವೆ. ಯಾವೊಂದು ಕಡತಗಳು ನಿಗದಿತ ಅವಧಿಯೊಳಗೆ ವಿಲೇವಾರಿಯಾಗುತ್ತಿರಲಿಲ್ಲ. ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇತ್ತು ಎಂಬುದನ್ನು ಕಾಂಗ್ರೆಸ್-ಜೆಡಿಎಸ್‍ನ ಶಾಸಕರು, ಮುಖಂಡರು ಒಪ್ಪಿಕೊಳ್ಳುತ್ತಾರೆ.

ವಿಧಾನಸಭೆಯಲ್ಲಿ ಕುಮಾರಸ್ವಾಮಿಯವರು ವಿಶ್ವಾಸ ಮತ ಯಾಚನಾ ನಿರ್ಣಯವನ್ನು ಮಂಡಿಸಿದ ನಂತರ ಸರ್ಕಾರಿ ಯಂತ್ರ ವೇಗ ಪಡೆದುಕೊಂಡು ತರಾತುರಿಯಲ್ಲಿ ಕೆಲಸಗಳು ನಡೆದವು. ಆ ಮಟ್ಟಿಗೆ ಆರಂಭದಿಂದಲೇ ಕೆಲಸ ಕಾರ್ಯಗಳಾಗಿದ್ದರೆ ಮೈತ್ರಿ ಸರ್ಕಾರ ಪತನವಾಗುತ್ತಿರಲಿಲ್ಲ ಎಂಬ ಅಭಿಪ್ರಾಯವೂ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡಲು ಐಎಎಸ್ ಅಧಿಕಾರಿಗಳಿಗೆ ಒಂದಕ್ಕಿಂತ ಹೆಚ್ಚಿನ ಜವಾಬ್ದಾರಿ ನೀಡಬಾರದು. ಪ್ರಮುಖ ಇಲಾಖೆ ಹಾಗೂ ಸಂಸ್ಥೆಗಳ ಜವಾಬ್ದಾರಿಯನ್ನು ದಕ್ಷ ಅಧಿಕಾರಿಗಳಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಹೆಚ್ಚಿನ ಜವಾಬ್ದಾರಿಯ ಹೊಣೆ ನೀಡಬಾರದು. ಸಾಧ್ಯವಾದ ಮಟ್ಟಿಗೆ ಒಂದೊಂದು ಇಲಾಖೆ ನಿರ್ದೇಶಕರು,ಆಯುಕ್ತರು, ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಳಿಗೆ ಒಬ್ಬೊಬ್ಬರನ್ನೇ ನೇಮಕ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಸಾರ್ವಜನಿಕವಾಗಿಯೂ ಹಾಗೂ ರಾಜಕೀಯವಾಗಿಯೂ ವ್ಯಕ್ತವಾಗುತ್ತಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇನ್ನೂ ಐಎಎಸ್ ಅಧಿಕಾರಿಗಳ ವರ್ಗಾವಣೆ ಆರಂಭಿಸಿಲ್ಲ. ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳ ವರ್ಗಾವಣೆ ಮಾಡಿದರೆ ಉತ್ತಮ ಆಡಳಿತ ನಿರ್ವಹಣೆಗೂ ಸಹಕಾರಿಯಾಗುವುದಲ್ಲದೆ, ಸರ್ಕಾರಕ್ಕೂ ಒಳ್ಳೆಯ ಹೆಸರು ಸಿದ್ಧಾರ್ಥ್‍ರವರ ಶೋಧನ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ